See also 2regenerate
1regenerate ರಿಜೆನರೇಟ್‍
ಸಕರ್ಮಕ ಕ್ರಿಯಾಪದ
  1. (ದೇವತಾಶಾಸ್ತ್ರ) (ಆಧ್ಯಾತ್ಮಿಕ ದೃಷ್ಟಿಯಿಂದ) ಪುನರ್ಜನ್ಮಕೊಡು; (ವ್ಯಕ್ತಿಯ) ಆತ್ಮೋನ್ನತಿಯನ್ನುಂಟುಮಾಡು.
  2. ನೈತಿಕ ಮಟ್ಟವನ್ನು ಹೆಚ್ಚಿಸು; ನೈತಿಕ ಸುಧಾರಣೆ ಉಂಟುಮಾಡು.
  3. (ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಷಯದಲ್ಲಿ) ಪುನರುಜ್ಜೀವನಗೊಳಿಸು; ಹೊಸಜೀವ, ಶಕ್ತಿ, ಆಧ್ಯಾತ್ಮಿಕತೆ–ತರು, ತುಂಬು.
  4. ಪುನಃ ಹುಟ್ಟಿಸು, ಉಂಟುಮಾಡು; ಪುನಃ ಅಸ್ತಿತ್ವಕ್ಕೆ ತರು.
  5. (ಆತ್ಮಾರ್ಥಕ) ತನ್ನನ್ನು ತಾನೇ ಸುಧಾರಿಸಿಕೊ, ಉನ್ನತಗೊಳಿಸಿಕೊ: he regenerated himself after repenting of his vices ತನ್ನ ದುರಾಚಾರಗಳಿಗಾಗಿ ಪಶ್ಚಾತ್ತಾಪ ಪಟ್ಟ ಮೇಲೆ ಅವನು ತನ್ನನ್ನು ಉನ್ನತಗೊಳಿಸಿಕೊಂಡ.
  6. (ಜೀವವಿಜ್ಞಾನ) (ಕಳೆದುಹೋದ ಯಾ ಘಾಸಿಗೊಂಡ ಊತಕದ ವಿಷಯದಲ್ಲಿ) ಪುನಃ ಬೆಳೆಸು ಹುಟ್ಟಿಸು; ಮತ್ತೆ ಹುಟ್ಟುವಂತೆ, ಬೆಳೆಯುವಂತೆ ಮಾಡು.
  7. (ರಸಾಯನವಿಜ್ಞಾನ) ಪುನರುತ್ಪಾದಿಸು; ರಾಸಾಯನಿಕ ಕ್ರಿಯೆಯಲ್ಲಿ ವ್ಯಯವಾದ ಪದಾರ್ಥವನ್ನು ಪುನಃ ಉತ್ಪಾದಿಸು.
ಅಕರ್ಮಕ ಕ್ರಿಯಾಪದ
  1. ಮತ್ತೆ ಹುಟ್ಟು; ಮರುಹುಟ್ಟು ಪಡೆ.
  2. (ತನ್ನನ್ನು) ಸುಧಾರಣೆ ಮಾಡಿಕೊ.
  3. (ಜೀವವಿಜ್ಞಾನ) (ಕಳೆದುಹೋದ ಯಾ ಘಾಸಿಗೊಂಡ ಊತಕದ ವಿಷಯದಲ್ಲಿ) ಮತ್ತೆ–ಹುಟ್ಟು, ಬೆಳೆ.
  4. (ರಸಾಯನವಿಜ್ಞಾನ) (ರಾಸಾಯನಿಕ ಕ್ರಿಯೆಯಲ್ಲಿ ವ್ಯಯವಾದ ಪದಾರ್ಥದ ವಿಷಯದಲ್ಲಿ) ಪುನರುತ್ಪತ್ತಿಯಾಗು.