See also 2reflect
1reflect ರಿಹ್ಲೆಕ್ಟ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಹಿಮ್ಮಡಿಚು; ಹಿಂದಕ್ಕೆ ಮಡಿಸು: reflect the corner of the paper ಕಾಗದದ ಮೂಲೆಯನ್ನು ಹಿಮ್ಮಡಿಚು.
  2. (ಸಮತಲದ ಯಾ ಯಾವುದೇ ಕಾಯದ ವಿಷಯದಲ್ಲಿಶಾಖ, ಬೆಳಕು, ಶಬ್ದ ಮೊದಲಾದವನ್ನು)
    1. ಹಿಂದಕ್ಕೆಸೆ; ಪ್ರತಿಫಲಿಸು.
    2. ಪ್ರತಿಫಲಿಸುವಂತೆ ಮಾಡು.
  3. (ಚೆಂಡು ಮೊದಲಾದವನ್ನು) ಹಿಂಪುಟಿಸು ಯಾ ಹಿಂಪುಟಿಯುವಂತೆ ಮಾಡು.
  4. (ಕನ್ನಡಿ ಮೊದಲಾದವುಗಳ ವಿಷಯದಲ್ಲಿ) ಪ್ರತಿಬಿಂಬಿಸು; ಪ್ರತಿಬಿಂಬವನ್ನುಂಟು ಮಾಡು; (ಯಾವುದೇ ಕಾಯದ) ಪ್ರತಿಬಿಂಬವನ್ನು ತೋರಿಸು.
  5. (ಕಣ್ಣು ಯಾ ಮನಸ್ಸಿಗೆ ಯಾವುದನ್ನೇ) ಪ್ರತಿಬಿಂಬಿಸು; ಅಭಿವ್ಯಕ್ತಿಸು: these laws reflect the average moral attitude of a half century earlier ಈ ಕಾನೂನುಗಳು ಅರ್ಧ ಶತಮಾನದಷ್ಟು ಹಿಂದಿನ ಸಾಮಾನ್ಯ ನೀತಿದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ.
  6. (ಕ್ರಿಯೆ, ಫಲಿತಾಂಶ ಮೊದಲಾದವುಗಳ ವಿಷಯದಲ್ಲಿ, ಮಾಡಿದವನಿಗೆ) ಕೀರ್ತಿ, ಅಪಕೀರ್ತಿ ಮೊದಲಾದವನ್ನು–ತರು, ಬೀರು: the excellent results reflect great credit on all our staff ಉತ್ತಮ ಫಲಿತಾಂಶಗಳು ನಮ್ಮ ಸಿಬ್ಬಂದಿಗಳೆಲ್ಲರಿಗೂ ಕೀರ್ತಿ ತಂದಿವೆ. this reflects the greatest dishonour on his reputation ಇದು ಅವನ ಕೀರ್ತಿಗೆ ಅತ್ಯಂತ ಅಪಮಾನ ಉಂಟುಮಾಡಿದೆ.
  7. (ವಿಷಯವನ್ನು ಕುರಿತು ತನ್ನಲ್ಲೇ) ಪರಿಶೀಲಿಸು; ಚಿಂತನಮಾಡು; ಪರ್ಯಾಲೋಚಿಸು; (ವಿಚಾರ)ಮಂಥನ ಮಾಡು.
  8. ಸದೃಶವಾಗಿರು; ಸ್ವರೂಪ ಯಾ ಪ್ರಭಾವ ತೋರಿಸು: the literature of a period reflects its values and tastes ಯುಗವೊಂದರ ಸಾಹಿತ್ಯವು ಆ ಯುಗದ ಮೌಲ್ಯಗಳು ಮತ್ತು ಅಭಿರುಚಿಗಳಿಗೆ ಸದೃಶವಾಗಿರುತ್ತದೆ, ಅವನ್ನು ತೋರಿಸುತ್ತದೆ.
  9. ಪರಿಣಾಮವಾಗು; ಕಾರಣವಾಗಿ, ಮೂಲವಾಗಿ ಹೊಂದಿರು: the cost reflects the demand ಬೆಲೆಯು ಬೇಡಿಕೆಯ ಪರಿಣಾಮವಾಗಿರುತ್ತದೆ. increased sales reflect higher profits ಏರಿದ ಮಾರಾಟ ಹೆಚ್ಚಿನ ಲಾಭಕ್ಕೆ ಕಾರಣವಾಗುತ್ತದೆ.
ಅಕರ್ಮಕ ಕ್ರಿಯಾಪದ
  1. (ರೂಪ ಯಾ ಫಲದಲ್ಲಿ) ತದ್ವತ್ತಾಗಿರು; ಸದೃಶವಾಗಿರು; ಪ್ರತಿಬಿಂಬದಂತಿರು; ಯಾವುದೇ ವಸ್ತುವಿನಂತೆಯೇ ಇರು.
  2. (ಕಾರ್ಯ, ಪರಿಣಾಮ ಮೊದಲಾದವುಗಳ ವಿಷಯದಲ್ಲಿ) ಟೀಕೆ, ಆಕ್ಷೇಪ, ಕೆಟ್ಟ ಹೆಸರು ಮೊದಲಾದವನ್ನು ತರು: your conduct will reflect upon you ನಿನ್ನ ನಡೆವಳಿಕೆಯು ನಿನಗೇ ಕೆಟ್ಟ ಹೆಸರನ್ನು ತರುತ್ತದೆ.
  3. ಚಿಂತಿಸು; ಧ್ಯಾನಿಸು; ಆಲೋಚಿಸು.
ಪದಗುಚ್ಛ

shine with reflected light

  1. (ಸ್ವಪ್ರಕಾಶವಿಲ್ಲದೆ) ಬೇರೊಂದು ಕಾಯದಿಂದ ಎರವಲು ತೆಗೆದುಕೊಂಡ ಬೆಳಕಿನಿಂದ ಹೊಳೆ; ಪ್ರತಿಫಲನದಿಂದ ಪ್ರಕಾಶಿಸು: the moon shines with reflected light ಚಂದ್ರ ಪ್ರತಿಫಲಿತ ಬೆಳಕಿನಿಂದ ಪ್ರಕಾಶಿಸುತ್ತದೆ.
  2. (ರೂಪಕವಾಗಿ) (ಸ್ವಂತಿಕೆ ಇಲ್ಲದೆ) ಬೇರೊಬ್ಬರ ಪ್ರತಿಭೆ ಯಾ ಪ್ರಭಾವದ ಬಲದಿಂದ ಹೆಸರು ಪಡೆ, ಪ್ರಸಿದ್ಧನಾಗು.
See also 1reflect
2reflect ರಿಹ್ಲೆಕ್ಟ್‍
ನಾಮವಾಚಕ

(ಮುಖ್ಯವಾಗಿ ಕುಂಬಾರ ಕಲೆಯಲ್ಲಿ, ಘಟವಾದ್ಯ, ಮಡಕೆ, ಹೂಜಿ, ಮೊದಲಾದವುಗಳ ಮೇಲೆ ಉಂಟುಮಾಡುವ) ಹೊಳಪು; ಪ್ರಕಾಶ; ಕಾಂತಿ.