shine with reflected light
- (ಸ್ವಪ್ರಕಾಶವಿಲ್ಲದೆ) ಬೇರೊಂದು ಕಾಯದಿಂದ ಎರವಲು ತೆಗೆದುಕೊಂಡ ಬೆಳಕಿನಿಂದ ಹೊಳೆ; ಪ್ರತಿಫಲನದಿಂದ ಪ್ರಕಾಶಿಸು: the moon shines with reflected light ಚಂದ್ರ ಪ್ರತಿಫಲಿತ ಬೆಳಕಿನಿಂದ ಪ್ರಕಾಶಿಸುತ್ತದೆ.
- (ರೂಪಕವಾಗಿ) (ಸ್ವಂತಿಕೆ ಇಲ್ಲದೆ) ಬೇರೊಬ್ಬರ ಪ್ರತಿಭೆ ಯಾ ಪ್ರಭಾವದ ಬಲದಿಂದ ಹೆಸರು ಪಡೆ, ಪ್ರಸಿದ್ಧನಾಗು.