See also 2reek
1reek ರೀಕ್‍
ನಾಮವಾಚಕ
  1. (ಸ್ಕಾಟ್ಲೆಂಡ್‍ ಮತ್ತು ಸಾಹಿತ್ಯ ಪ್ರಯೋಗ)
    1. ಹೊಗೆ; ಧೂಮ.
    2. ಆವಿ; (ಕಣ್ಣಿಗೆ ಕಾಣುವಂತೆ ಹೊಗೆಗೂಡಿನಿಂದ ಹೊರಹೊರಡುವ) ಆವಿರಾಶಿ.
  2. ದುರ್ನಾತ; ದುರ್ವಾಸನೆ; ಕೆಟ್ಟ ನಾತ.
  3. ಮುಗ್ಗಲು ವಾಸನೆ ಯಾ ಕೊಳೆತ ವಾಸನೆ: the reek of tobacco ಹೊಗೆಸೊಪ್ಪಿನ ಮುಗ್ಗಲು ಯಾ ಕೊಳೆತ ವಾಸನೆ.
  4. ಕೊಳೆತು ನಾರುವ ವಾತಾವರಣ: amid the reek and squalor ಆ ಹೊಲಸು ಮತ್ತು ನಾರುವ ವಾತಾವರಣದ ನಡುವೆ.
See also 1reek
2reek ರೀಕ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಸುಟ್ಟುಹೋದ ಮನೆಗಳಿಂದ ಯಾ ಬಯಲಲ್ಲಿ ಉರಿಯುತ್ತಿರುವ ವಸ್ತುವಿನಿಂದ) ಹೊಗೆಹೊರಡು; ಹೊಗೆಯಾಡು.
  2. (ಬಿಸಿಬಿಸಿ ಆಹಾರಪಾನೀಯ, ಬೆವರುತ್ತಿರುವ ವ್ಯಕ್ತಿ, ಚೆಲ್ಲಿದ ರಕ್ತ ಯಾ ಅಂಥ ರಕ್ತದಿಂದ ತೊಯ್ದ ವಸ್ತು, ಇವುಗಳ ವಿಷಯದಲ್ಲಿ) ಆವಿಯಾಡು.
  3. ದುರ್ನಾತ ಹೊಡೆ; ದುರ್ವಾಸನೆ ಬೀರು; ತೀವ್ರವಾದ ಮತ್ತು ಕೆಟ್ಟ ಯಾ ಅಸಹ್ಯವಾದ ವಾಸನೆ ಸೂಸು.
  4. (ರೂಪಕವಾಗಿ) (ಕೃತಕ ನಡೆವಳಿಕೆ, ಕೊಲೆ, ದುಷ್ಕೃತ್ಯ ಮೊದಲಾದವುಗಳ ವಿಷಯದಲ್ಲಿ) ಗಂಧ ಯಾ ವಾಸನೆ ಹೊಂದಿರು; ಕೆಟ್ಟ ಯಾ ಸಂಶಯಾಸ್ಪದ ಸಂಬಂಧ ಹೊಂದಿರು: this reeks of corruption ಇದು ಭ್ರಷ್ಟಾಚಾರದ ಗಂಧ ಹೊಂದಿದೆ.