reckon ರೆಕನ್‍
ಸಕರ್ಮಕ ಕ್ರಿಯಾಪದ
  1. (ಎಣಿಕೆಯಿಂದ ಯಾ ಸಾಮಾನ್ಯವಾಗಿ ಗಣಿತದಿಂದ, ಒಂದರ) ಸಂಖ್ಯೆಯನ್ನು ಯಾ ಪ್ರಮಾಣವನ್ನು ಕಂಡುಹಿಡಿ; ಎಣಿಸು; ಗಣಿಸು.
  2. (-ಇಂದ -ವರೆಗೆ ಯಾವುದನ್ನೇ) ಎಣಿಕೆಮಾಡು; ಎಣಿಸು.
  3. (ಒಬ್ಬನ ಶೀಲ ಮೊದಲಾದವನ್ನು) ಅಂದಾಜುಮಾಡು; ಅಜಮಾಯಿಷಿ ಮಾಡು.
  4. ಒಟ್ಟನ್ನು, ಮೊತ್ತವನ್ನು – ಕಂಡುಹಿಡಿ, ಎಣಿಸು, ಲೆಕ್ಕಮಾಡು: I reckon 53 of them ಅವು ಒಟ್ಟು 53 ಎಂದು ನಾನು ಎಣಿಸಿದ್ದೇನೆ, ಲೆಕ್ಕಹಾಕಿದ್ದೇನೆ.
  5. -ರ ಲೆಕ್ಕದಲ್ಲಿ, ಗುಂಪಿನಲ್ಲಿ, ವರ್ಗದಲ್ಲಿ – ಸೇರಿಸು: verbosity must be reckoned among the blemishes of his style ಆತನ ಶೈಲಿಯ ದೋಷಗಳಲ್ಲಿ ಪದಬಾಹುಳ್ಯವನ್ನು ಒಂದನ್ನಾಗಿ ಸೇರಿಸಬೇಕು.
  6. -ಎಂದು ಭಾವಿಸು, ಪರಿಗಣಿಸು: people reckon him wise ಜನರು ಆತನನ್ನು ವಿವೇಕಿಯೆಂದು ಭಾವಿಸುತ್ತಾರೆ. his well-wishers reckon him beyond redemption ಅವನನ್ನು ಸನ್ಮಾರ್ಗಕ್ಕೆ ತರುವುದು ಶಕ್ತಿಗೆ ಮೀರಿದ್ದೆಂದು ಅವನ ಹಿತೈಷಿಗಳು ಭಾವಿಸುತ್ತಾರೆ.
  7. ಪರಿಗಣಿಸಿ – ನಿಶ್ಚಯಿಸು, ನಿರ್ಣಯಿಸು, ತೀರ್ಮಾನಿಸು; -ಎಂಬ ಎಣಿಕೆಗೆ ಬರು: considering the circumstances, some reckon he committed suicide ಪರಿಸ್ಥಿತಿಯನ್ನೆಲ್ಲ ಪರಿಗಣಿಸಿ ಕೆಲವರು ಆತ ಆತ್ಮಹತ್ಯೆ ಮಾಡಿಕೊಂಡನೆಂದು ನಿರ್ಣಯಿಸಿದ್ದಾರೆ.
  8. (ಆಡುಮಾತು) ಎಂದುಕೊ; ಭಾವಿಸು; ಊಹಿಸು: he will soon be here, I reckon ಅವನು ಸದ್ಯದಲ್ಲೇ ಇಲ್ಲಿರುತ್ತಾನೆಂದು ನಾನಂದುಕೊಂಡಿದ್ದೇನೆ.
  9. ಲೆಕ್ಕಾಚಾರ – ಮಾಡು,ಹಾಕು ಯಾ ಬರೆ: he reckoned up the cost ಅವನು ಖರ್ಚನ್ನು ಲೆಕ್ಕಾಚಾರ ಹಾಕಿದ.
ಅಕರ್ಮಕ ಕ್ರಿಯಾಪದ
  1. -ಇಂದ -ವರೆಗೆ ಎಣಿಸುತ್ತಾ ಹೋಗು
  2. ನೆಚ್ಚು; ನೆಚ್ಚಿಕೊ; (ಒಬ್ಬನ ಮೇಲೆ) ಭರವಸೆ, ವಿಶ್ವಾಸ- ಇಡು: I reckon on you in this matter ಈ ವಿಷಯದಲ್ಲಿ ನಾನು ನಿನ್ನನ್ನು ನೆಚ್ಚಿಕೊಂಡಿದ್ದೇನೆ.
  3. ಲೆಕ್ಕಕ್ಕೆ, ಗಣನೆಗೆ – ತೆಗೆದುಕೊ.
ಪದಗುಚ್ಛ
  1. to be reckoned with ಸಾಕಷ್ಟು ಮಹತ್ವದ, ಪ್ರಾಮುಖ್ಯವಿರುವ; ಉಪೇಕ್ಷೆ ಮಾಡಕೂಡದ.
  2. reckon up
    1. ಕೂಡು; ಮೊತ್ತ ಕಂಡುಹಿಡಿ.
    2. ಲೆಕ್ಕಚುಕ್ತಾಮಾಡು.
  3. reckon with a person
    1. (ಒಬ್ಬನನ್ನು) ಲೆಕ್ಕಕ್ಕೆ ತೆಗೆದುಕೊ; ಪರಿಗಣಿಸು; ಉಪೇಕ್ಷಿಸದಿರು: he is a man to reckon with ಅವನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಮನುಷ್ಯ.
    2. (ಒಬ್ಬನ) ಲೆಕ್ಕಾಚಾರ ಪೂರೈಸು; ಮುಗಿಸಿ ಬಿಡು; ತೀರಿಸಿಬಿಡು: we shall first settle his fate and then reckon with his associates ಅವನ ಹಣೆಯಬರಹವನ್ನು ಮೊದಲು ನಿರ್ಣಯಿಸೋಣ, ಆಮೇಲೆ ಅವನ ಒಡನಾಡಿಗಳ ಲೆಕ್ಕಾಚಾರವನ್ನು ತೀರಿಸೋಣ.
  4. reckon without one’s host.