See also 1host  3host  4host
2host ಹೋಸ್ಟ್‍
ನಾಮವಾಚಕ
  1. ಆತಿಥೇಯ; ಆತಿಥ್ಯಕಾರ; ಅತಿಥಿಗಳಿಗೆ ಮನೆಯಲ್ಲಿ ಎಡೆಗೊಟ್ಟು ಸತ್ಕರಿಸುವವನು.
  2. ಪಥಿಕಗೃಹದ ಯಜಮಾನ; ಪ್ರಯಾಣಿಕರಿಗೆ ಊಟ ವಸತಿ ಮೊದಲಾದವನ್ನು ಒದಗಿಸುವ ಗೃಹದ ಯಜಮಾನ.
  3. (ಜೀವವಿಜ್ಞಾನ) ಆತಿಥೇಯ; ಆಶ್ರಯದಾತ; ಪರಪೋಷಿ; ಪರೋಪಜೀವಿಯೊಂದಿಗೆ ತನ್ನ ರಕ್ತ ಯಾ ಸಾರವನ್ನು ಆಹಾರವಾಗಿ ಒದಗಿಸಿ ಆಶ್ರಯ ನೀಡುವ ಪ್ರಾಣಿ ಯಾ ಸಸ್ಯ.
  4. ಆತಿಥೇಯ; ಬೇರೊಬ್ಬನಿಂದ, ಬೇರೊಬ್ಬ ಪ್ರಾಣಿಯಿಂದ ಅವಯವವನ್ನು ನಾಟಿ ಹಾಕಿಸಿಕೊಳ್ಳುವ ವ್ಯಕ್ತಿ ಯಾ ಪ್ರಾಣಿ.
ನುಡಿಗಟ್ಟು

reckon without one’s host

  1. ಸಂಬಂಧಪಟ್ಟ ಪ್ರಮುಖ ವ್ಯಕ್ತಿಯೊಡನೆ ಸಮಾಲೋಚಿಸದೆ, ಅವನನ್ನು ಕೇಳದೆ (ಕಾರ್ಯಕ್ರಮ, ಯೋಜನೆ, ಮೊದಲಾದವನ್ನು) – ಕೈಗೊಳ್ಳು, ರೂಪಿಸು, ತೀರ್ಮಾನಿಸು.
  2. (ಕೈಗೊಳ್ಳುವ ಕಾರ್ಯದಲ್ಲಿ) ಒದಗಬಹುದಾದ ಅಡ್ಡಿ ಆತಂಕ, ವಿರೋಧ, ಮೊದಲಾದವನ್ನು ಕಡೆಗಣಿಸು, ಉಪೇಕ್ಷಿಸು.