See also 2receipt
1receipt ರಿಸೀಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) = recipe.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಸಂದ ಯಾ ಸಲ್ಲಿಕೆಯಾದ ಹಣ; ಆಯ; ಜಮಾ; ಕೈಗೆ ಬಂದದ್ದು.
  3. ಕೈಗೆ ಯಾ ವಶಕ್ಕೆ ತೆಗೆದುಕೊಳ್ಳುವುದು; ಕೈ ಸೇರುವುದು; ಸಲ್ಲಿಕೆ; ಸಂದಾಯ: the goods will be sent on receipt of a postal order for Rs. 100/- ನೂರು ರೂಪಾಯಿಯ ಪೋಸ್ಟಲ್‍ ಆರ್ಡರು ಕೈಸೇರಿದ ಕೂಡಲೇ ಸರಕುಗಳನ್ನು ಕಳುಹಿಸಲಾಗುವುದು.
  4. (ಹಣ) ಸಂದಾಯದ ರಶೀತಿ; ಸಲ್ಲಿಕೆ ಚೀಟಿ; ಪಾವತಿ (ಚೀಟಿ): after repaying the principal with interest I will obtain the receipt thereof ಅಸಲು, ಬಡ್ಡಿ ಸಲ್ಲಿಸಿದ ತರುವಾಯ ಹಣಸಂದಾಯದ ರಶೀತಿ ಪಡೆಯುತ್ತೇನೆ.
  5. (ಪ್ರಾಚೀನ ಪ್ರಯೋಗ) (ಅಧಿಕೃತವಾಗಿ) ಹಣದ ಪಾವತಿಯನ್ನು ಪಡೆಯುವ ಕಚೇರಿ (ಮುಖ್ಯವಾಗಿ ಬಂದರು ಮೊದಲಾದವುಗಳಲ್ಲಿಯ ಸುಂಕದ ಕಟ್ಟೆ, ಕಚೇರಿ).
See also 1receipt
2receipt ರಿಸೀಟ್‍
ಸಕರ್ಮಕ ಕ್ರಿಯಾಪದ
  1. ಬಿಲ್ಲಿನ ಮೇಲೆ ‘ಸಲ್ಲಿಕೆ’ ಯಾ ‘ಪಾವತಿ’ ಎಂದು ಬರೆ ಯಾ ಮುದ್ರೆ ಒತ್ತು.
  2. (ಹಣಸಂದಾಯದ ಯಾ ಸರಕುಗಳು ತಲುಪಿದ್ದರ) ರಶೀತಿ ಕೊಡು.