See also 2receipt
1receipt ರಿಸೀಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) = recipe.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಸಂದ ಯಾ ಸಲ್ಲಿಕೆಯಾದ ಹಣ; ಆಯ; ಜಮಾ; ಕೈಗೆ ಬಂದದ್ದು.
  3. ಕೈಗೆ ಯಾ ವಶಕ್ಕೆ ತೆಗೆದುಕೊಳ್ಳುವುದು; ಕೈ ಸೇರುವುದು; ಸಲ್ಲಿಕೆ; ಸಂದಾಯ: the goods will be sent on receipt of a postal order for Rs. 100/- ನೂರು ರೂಪಾಯಿಯ ಪೋಸ್ಟಲ್‍ ಆರ್ಡರು ಕೈಸೇರಿದ ಕೂಡಲೇ ಸರಕುಗಳನ್ನು ಕಳುಹಿಸಲಾಗುವುದು.
  4. (ಹಣ) ಸಂದಾಯದ ರಶೀತಿ; ಸಲ್ಲಿಕೆ ಚೀಟಿ; ಪಾವತಿ (ಚೀಟಿ): after repaying the principal with interest I will obtain the receipt thereof ಅಸಲು, ಬಡ್ಡಿ ಸಲ್ಲಿಸಿದ ತರುವಾಯ ಹಣಸಂದಾಯದ ರಶೀತಿ ಪಡೆಯುತ್ತೇನೆ.
  5. (ಪ್ರಾಚೀನ ಪ್ರಯೋಗ) (ಅಧಿಕೃತವಾಗಿ) ಹಣದ ಪಾವತಿಯನ್ನು ಪಡೆಯುವ ಕಚೇರಿ (ಮುಖ್ಯವಾಗಿ ಬಂದರು ಮೊದಲಾದವುಗಳಲ್ಲಿಯ ಸುಂಕದ ಕಟ್ಟೆ, ಕಚೇರಿ).