See also 2recast
1recast ರೀಕಾಸ್ಟ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ ಅದೇ).

  1. ಪುನಃ ಎಸೆ; ಮತ್ತೆ ಬೀಸು: he recast the fishing net ಅವನು ಮೀನಿನ ಬಲೆಯನ್ನು ಪುನಃ ಬೀಸಿದ.
  2. ಪುನಃ ರೂಪಿಸು; ಹೊಸದಾಗಿ ರಚಿಸು; ಹೊಸ ರೂಪ, ಆಕಾರ ಕೊಡು: all our notions of relative velocity must be recast ಸಾಪೇಕ್ಷ ವೇಗದ ವಿಷಯದಲ್ಲಿ ನಮ್ಮ ಭಾವನೆಗಳನ್ನೆಲ್ಲ ಪುನಃ ರೂಪಿಸಬೇಕು, ಹೊಸದಾಗಿ ರಚಿಸಬೇಕು.
  3. ಪುನಃ ಗಣಿಸು; ಪುನಃ ಲೆಕ್ಕಹಾಕು, ಅಂದಾಜು ಮಾಡು: they had to recast the original estimate ಮೊದಲ ಅಂದಾಜನ್ನು ಅವರು ಪುನಃ ಅಂದಾಜು ಮಾಡಬೇಕಾಯಿತು, ಮತ್ತೆ ಗಣಿಸಬೇಕಾಯಿತು.
  4. (ನಾಟಕ, ಗೀತನಾಟಕಗಳಿಗೆ) ಹೊಸ ನಟನಟಿ ವರ್ಗವನ್ನು ಒದಗಿಸು.
  5. ರಚನೆಯ ರೀತಿ, ವಿನ್ಯಾಸ, ಕ್ರಮಗಳನ್ನು ಉತ್ತಮಗೊಳಿಸು.
See also 1recast
2recast ರೀಕಾಸ್ಟ್‍
ನಾಮವಾಚಕ
  1. ಮರುರೂಪಣ; ಹೊಸ ರೂಪ ಕೊಡುವುದು.
  2. ಹೊಸ ರೂಪ; ಹೊಸ ರಚನೆ.
  3. ಮರುರೂಪಿತ ವಸ್ತು, ಕೃತಿ.