See also 2recast
1recast ರೀಕಾಸ್ಟ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ ಅದೇ).

  1. ಪುನಃ ಎಸೆ; ಮತ್ತೆ ಬೀಸು: he recast the fishing net ಅವನು ಮೀನಿನ ಬಲೆಯನ್ನು ಪುನಃ ಬೀಸಿದ.
  2. ಪುನಃ ರೂಪಿಸು; ಹೊಸದಾಗಿ ರಚಿಸು; ಹೊಸ ರೂಪ, ಆಕಾರ ಕೊಡು: all our notions of relative velocity must be recast ಸಾಪೇಕ್ಷ ವೇಗದ ವಿಷಯದಲ್ಲಿ ನಮ್ಮ ಭಾವನೆಗಳನ್ನೆಲ್ಲ ಪುನಃ ರೂಪಿಸಬೇಕು, ಹೊಸದಾಗಿ ರಚಿಸಬೇಕು.
  3. ಪುನಃ ಗಣಿಸು; ಪುನಃ ಲೆಕ್ಕಹಾಕು, ಅಂದಾಜು ಮಾಡು: they had to recast the original estimate ಮೊದಲ ಅಂದಾಜನ್ನು ಅವರು ಪುನಃ ಅಂದಾಜು ಮಾಡಬೇಕಾಯಿತು, ಮತ್ತೆ ಗಣಿಸಬೇಕಾಯಿತು.
  4. (ನಾಟಕ, ಗೀತನಾಟಕಗಳಿಗೆ) ಹೊಸ ನಟನಟಿ ವರ್ಗವನ್ನು ಒದಗಿಸು.
  5. ರಚನೆಯ ರೀತಿ, ವಿನ್ಯಾಸ, ಕ್ರಮಗಳನ್ನು ಉತ್ತಮಗೊಳಿಸು.