See also 2recall
1recall ರಿಕಾಲ್‍
ಸಕರ್ಮಕ ಕ್ರಿಯಾಪದ
  1. (ಬೇರಡೆಗೆ, ಬೇರೆ ಹುದ್ದೆಗೆ, ಹೋಗಿರುವವನನ್ನು) ಹಿಂದಕ್ಕೆ ಕರೆ; ವಾಪಸು ಕರೆ.
  2. (ಎತ್ತಲೋ ಹೋಗಿರುವ ಮನಸ್ಸನ್ನು, ಬೇರೆ ವಿಷಯಕ್ಕೆ ಹರಿಸಿರುವ ಗಮನವನ್ನು) ಹಿಂದಕ್ಕೆ ಸೆಳೆ.
  3. (ದೂರಕ್ಕೆ ಮುಖ್ಯವಾಗಿ ಸಮುದ್ರದಾಚೆ ವಿದೇಶಕ್ಕೆ ಕಳುಹಿಸಿದ ಅಧಿಕಾರಿಯ) ನೇಮಕವನ್ನು ಅಮಾನತ್ತಿನಲ್ಲಿಡು ಯಾ ರದ್ದು ಮಾಡು.
  4. ನೆನೆಪಿಗೆ ತರು; ನೆನಪುಕೊಡು; ಜ್ಞಾಪಕಕ್ಕೆ ತರು; ನೆನಪು ಬರಿಸು.
  5. ನೆನೆಸಿಕೊ; ಸ್ಮರಿಸು; ನೆನಪು ಮಾಡಿಕೊ; ನೆನಪಿಗೆ ತಂದುಕೊ; ಜ್ಞಾಪಕಮಾಡಿಕೊ.
  6. (ಹಿಂದಿನ ಮನೋವೃತ್ತಿ, ಗುಣ, ಸ್ಥಿತಿ ಮೊದಲಾದವನ್ನು) ಮತ್ತೆ ಬರಿಸು; ಪುನಶ್ಚೇತನಗೊಳಿಸು.
  7. (ಇಟ್ಟ ಹೆಜ್ಜೆ, ಮಾಡಿದ ಕಾರ್ಯ, ತೆಗೆದುಕೊಂಡ ತೀರ್ಮಾನ ಮೊದಲಾದವನ್ನು) ಹಿಂತೆಗೆದುಕೊ.
  8. (ಕೊಟ್ಟ ದಾನವನ್ನು) ಹಿಂತೆಗೆದುಕೊ.
See also 1recall
2recall ರಿ()ಕಾಲ್‍
ನಾಮವಾಚಕ
  1. ಹಿಂದಕ್ಕೆ ಬರಬೇಕೆಂದು ಕೊಟ್ಟ ಆದೇಶ, ಕರೆ, ಹಿಂಗರೆ.
  2. (ಬೇರೆಡೆಗೆ, ಮುಖ್ಯವಾಗಿ ವಿದೇಶಕ್ಕೆ) ಹೋಗಿರುವವನ ಹುದ್ದೆಯನ್ನು ಅಮಾನತ್ತಿನಲ್ಲಿಡುವುದು ಯಾ ರದ್ದು ಪಡಿಸುವುದು.
  3. (ಹಡಗು ಮೊದಲಾದವಕ್ಕೆ ಕಳುಹಿಸಿದ) ಹಿಂಗರೆ; ಹಿಂಗರೆಯ ಸಂಕೇತ.
  4. ನೆನಪು (ಮಾಡಿಕೊಳ್ಳುವುದು).
  5. ಜ್ಞಾಪಕಶಕ್ತಿ; ಸ್ಮರಣಶಕ್ತಿ.
  6. (ಇಟ್ಟ ಹೆಜ್ಜೆ, ತೆಗೆದುಕೊಂಡ ತೀರ್ಮಾನ, ಮೊದಲಾದವುಗಳನ್ನು) ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆ.
  7. (ಅಮೆರಿಕನ್‍ ಪ್ರಯೋಗ) ಚುನಾಯಿತ ಅಧಿಕಾರಿಯನ್ನು ಅಧಿಕಾರದಿಂದ ತೆಗೆದುಹಾಕುವುದು.
ಪದಗುಚ್ಛ
  1. beyond recall ಹಿಂತೆಗೆದುಕೊಳ್ಳಲಾಗದ; ರದ್ದುಮಾಡಲಾಗದ; ಹಿಂತೆಗೆದುಕೊಳ್ಳುವ ಸಾಧ್ಯತೆಗೆ ಮೀರಿದ.
  2. past recall = ಪದಗುಚ್ಛ \((1)\).