2recall
ನಾಮವಾಚಕ
- ಹಿಂದಕ್ಕೆ ಬರಬೇಕೆಂದು ಕೊಟ್ಟ ಆದೇಶ, ಕರೆ, ಹಿಂಗರೆ.
- (ಬೇರೆಡೆಗೆ, ಮುಖ್ಯವಾಗಿ ವಿದೇಶಕ್ಕೆ) ಹೋಗಿರುವವನ ಹುದ್ದೆಯನ್ನು ಅಮಾನತ್ತಿನಲ್ಲಿಡುವುದು ಯಾ ರದ್ದು ಪಡಿಸುವುದು.
- (ಹಡಗು ಮೊದಲಾದವಕ್ಕೆ ಕಳುಹಿಸಿದ) ಹಿಂಗರೆ; ಹಿಂಗರೆಯ ಸಂಕೇತ.
- ನೆನಪು (ಮಾಡಿಕೊಳ್ಳುವುದು).
- ಜ್ಞಾಪಕಶಕ್ತಿ; ಸ್ಮರಣಶಕ್ತಿ.
- (ಇಟ್ಟ ಹೆಜ್ಜೆ, ತೆಗೆದುಕೊಂಡ ತೀರ್ಮಾನ, ಮೊದಲಾದವುಗಳನ್ನು) ಹಿಂದಕ್ಕೆ ತೆಗೆದುಕೊಳ್ಳುವ ಸಾಧ್ಯತೆ.
- (ಅಮೆರಿಕನ್ ಪ್ರಯೋಗ) ಚುನಾಯಿತ ಅಧಿಕಾರಿಯನ್ನು ಅಧಿಕಾರದಿಂದ ತೆಗೆದುಹಾಕುವುದು.
ಪದಗುಚ್ಛ
- beyond recall ಹಿಂತೆಗೆದುಕೊಳ್ಳಲಾಗದ; ರದ್ದುಮಾಡಲಾಗದ; ಹಿಂತೆಗೆದುಕೊಳ್ಳುವ ಸಾಧ್ಯತೆಗೆ ಮೀರಿದ.
- past recall = ಪದಗುಚ್ಛ \((1)\).