See also 2ready  3ready  4ready
1ready ರೆಡಿ
ಗುಣವಾಚಕ
( ತರರೂಪ readier, ತಮರೂಪ readiest).
  1. ಸಂಪೂರ್ಣವಾಗಿ ಸಿದ್ಧವಾಗಿರುವ, ತಯಾರಾಗಿರುವ; ಸಿದ್ಧಸ್ಥಿತಿಯಲ್ಲಿರುವ; ಸಿದ್ಧ: dinner is ready ಅಡಿಗೆ ತಯಾರಾಗಿದೆ; ಊಟ ಸಿದ್ಧವಾಗಿದೆ.
  2. ಸಜ್ಜುಗೊಂಡಿರುವ; ಸಜ್ಜಾದ; ಅಣಿಯಾದ; ಸನ್ನದ್ಧ: the troops are ready for battle ಪಡೆಗಳು ಕಾಳಗಕ್ಕೆ ಸನ್ನದ್ಧವಾಗಿವೆ. the car is ready ಕಾರು ಸಿದ್ಧವಾಗಿದೆ.
  3. ಸಿದ್ಧ; ಮನಸ್ಸಿರುವ; ಒಲವುಳ್ಳ; ಇಷ್ಟವುಳ್ಳ; ಸಂಕಲ್ಪಿಸಿರುವ: ready to forgive ಕ್ಷಮಿಸಲು ಸಿದ್ಧ. I am ready to risk my life ನನ್ನ ಪ್ರಾಣವನ್ನೇ ಒತ್ತೆಯಿಡಲು, ಅಪಾಯಕ್ಕೊಳಪಡಿಸಲು, ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ.
  4. (ಕಾರ್ಯ, ಸಾಧನೆ, ನೋಡುವುದು, ಗ್ರಹಿಸುವುದು, ಮಾತನಾಡುವುದು ಯಾ ಬರೆಯುವುದು ಮೊದಲಾದವುಗಳಲ್ಲಿ) ಚುರುಕಾದ; ಶೀಘ್ರವಾದ; ಕ್ಷಣಮಾತ್ರದಲ್ಲಿ ಮಾಡುವ: a ready wit ಪ್ರತ್ಯುತ್ಪನ್ನಮತಿ; ಕುಶಾಗ್ರಬುದ್ಧಿ; (ಸಮಸ್ಯೆಗೆ ಪರಿಹಾರವನ್ನು) ತಕ್ಷಣವೇ ಕಂಡು ಹಿಡಿಯುವ ಬುದ್ಧಿಶಕ್ತಿ ಯಾ ಬುದ್ಧಿಶಕ್ತಿಯುಳ್ಳವನು. a ready pen ಸಿದ್ಧಲೇಖನಿ; ಕೂಡಲೇ ಬರೆಯುವ ಶಕ್ತಿ.
  5. ಕೂಡಲೇ ಒದಗುವ; ಸಿದ್ಧವಾಗಿರುವ; ಥಟ್ಟನೆಯ; ಕ್ಷಿಪ್ರ: a ready reply ಥಟ್ಟನೆಯ ಉತ್ತರ. the ready solubility of the substance ಆ ದ್ರವ್ಯದ ಕ್ಷಿಪ್ರ ವಿಲೀನತೆ.
  6. ತತ್‍ಕ್ಷಣದ; ಸಂಪೂರ್ಣವಾದ; ಶುದ್ಧಾಂಗವಾದ; ಅಭ್ಯಂತರವಿಲ್ಲದ; ನಿರಾಕ್ಷೇಪವಾದ: a ready consent ತತ್‍ಕ್ಷಣದ ಸಮ್ಮತಿ.
  7. (ಯಾವುದೇ ವಿಷಯದಲ್ಲಿ) ಹಾತೊರೆಯುವ; ಆತುರವುಳ್ಳ; ತ್ವರಿತವಾದ ಒಲವುಳ್ಳ: too ready to suspect ಸಂಶಯಪಡಲು ಆತುರಪಡುವ.
  8. (ಸನ್ನಿಹಿತವಾದ ಯಾ ಆಸನ್ನವಾದ ಯಾವುದೇ ದುರ್ಗತಿಯನ್ನು) ಅನುಭವಿಸಲು ಸಿದ್ಧವಾಗಿರುವ, ತಯಾರಾಗಿರುವ: a tree ready to fall ಬೀಳಲು ಸಿದ್ಧವಾಗಿರುವ ಮರ. a patient ready to die any moment ಯಾವುದೇ ಕ್ಷಣದಲ್ಲಿ ಸಾಯಲು ತಯಾರಾಗಿರುವ ಒಬ್ಬ ರೋಗಿ.
  9. ಕೂಡಲೇ ಬಳಸಬಹುದಾಗಿರುವ, ಉಪಯೋಗಿಸಬಹುದಾದ: was ready to hand ಕೂಡಲೆ ಬಳಸಬಹುದಾಗಿತ್ತು.
  10. ಕೂಡಲೇ ಸಿಗುವಂತಿರುವ; ಕೈಗೆಟಕುವಂತಿರುವ; ಸುಲಭಲಭ್ಯವಾದ: a ready source of profit ಲಾಭದ ಸುಲಭಲಭ್ಯ ಮೂಲ.
  11. ಕೂಡಲೇ ಸಲ್ಲಿಸುವ, ಪಾವತಿಮಾಡುವ, ಬಟವಾಡೆ ಮಾಡುವ: ready payment ಕೈಸಲ್ಲಿಕೆ; ಕೈ ಬಟವಾಡೆ.
  12. (ಯಾವುದನ್ನೇ) ಮಾಡಲಿರುವ; ಸದ್ಯದಲ್ಲೇ ಸಾಧಿಸಲಿರುವ: a bud ready to burst ಇನ್ನೇನು ಅರಳಲಿರುವ ಮೊಗ್ಗು.
  13. ಮೊದಲೇ ಒದಗಿಸಿರುವ.
ಪದಗುಚ್ಛ
  1. get ready ಸಿದ್ಧವಾಗು.
  2. ready, steady (or get set), go (ರೇಸು ಮೊದಲಾದವುಗಳಲ್ಲಿ ಕೊಡುವ ಸೂಚನೆ) ಓಡಲು ಸಿದ್ಧತೆ ಮಾಡಿಕೊಳ್ಳಿ, ಅಣಿಯಾಗಿ, ಓಡಿ.
  3. make ready
    1. ಸಿದ್ಧಮಾಡು: make everything ready ಎಲ್ಲವನ್ನೂ ಸಿದ್ಧಮಾಡು.
    2. ಸಿದ್ಧವಾಗು: make ready for the show ಪ್ರದರ್ಶನಕ್ಕಾಗಿ ಸಿದ್ಧವಾಗು.
See also 1ready  3ready  4ready
2ready ರೆಡಿ
ಕ್ರಿಯಾವಿಶೇಷಣ
( ತರರೂಪ, ತಮರೂಪ ರೂಪಗಳಲ್ಲೇ ಬಳಕೆ ಹೆಚ್ಚು)
  1. ಮೊದಲೇ ಸಿದ್ಧವಾಗಿ; ಪೂರ್ವಸಿದ್ಧವಾಗಿ: packed ready (or ready packed) ಗಂಟುಕಟ್ಟಿ ಸಿದ್ಧವಾಗಿ.
  2. (ವಿರಳ ಪ್ರಯೋಗ) ಬೇಗ; ಚುರುಕಾಗಿ: the boy who answers readiest ಅತ್ಯಂತ ಬೇಗ, ಚುರುಕಾಗಿ ಉತ್ತರ ಕೊಡುವ ಹುಡುಗ.
  3. ಮೊದಲೇ; ಮುಂಚೆಯೇ: pack everything ready ಮುಂಚೆಯೇ ಎಲ್ಲವನ್ನು ಕಟ್ಟಿಡು.
See also 1ready  2ready  4ready
3ready ರೆಡಿ
ನಾಮವಾಚಕ
(ಬಹುವಚನ readies).
  1. (ಬಂದೂಕನ್ನು ಬಾರು ಮಾಡಿ, ಗುರಿ ಇಡುವ ಮುಂಚೆ, ಅದನ್ನು ಹಿಡಿದುಕೊಳ್ಳುವ) ಸಿದ್ಧ ಸ್ಥಿತಿ, ನಿಲವು.
  2. (ಅಶಿಷ್ಟ) (the ready) ನಗದು ಹಣ; ರೊಕ್ಕ: planked down the ready ನಗದು ರೊಕ್ಕವನ್ನು ಪೀಕಿಬಿಟ್ಟ.
  3. (ಬಹುವಚನದಲ್ಲಿ) ಬ್ಯಾಂಕ್‍ ನೋಟುಗಳು.
ಪದಗುಚ್ಛ

at the ready ಕಾರ್ಯಕ್ಕೆ ಸಿದ್ಧವಾಗಿ.

See also 1ready  2ready  3ready
4ready ರೆಡಿ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ readies; ಭೂತರೂಪ ಮತ್ತು ಭೂತಕೃದಂತ readied). ಸಿದ್ಧಮಾಡು; ಸಿದ್ಧಗೊಳಿಸು.