1ready
ರೆಡಿ
ಗುಣವಾಚಕ
( ತರರೂಪ readier, ತಮರೂಪ readiest).
- ಸಂಪೂರ್ಣವಾಗಿ ಸಿದ್ಧವಾಗಿರುವ, ತಯಾರಾಗಿರುವ; ಸಿದ್ಧಸ್ಥಿತಿಯಲ್ಲಿರುವ; ಸಿದ್ಧ: dinner is ready ಅಡಿಗೆ ತಯಾರಾಗಿದೆ; ಊಟ ಸಿದ್ಧವಾಗಿದೆ.
- ಸಜ್ಜುಗೊಂಡಿರುವ; ಸಜ್ಜಾದ; ಅಣಿಯಾದ; ಸನ್ನದ್ಧ: the troops are ready for battle ಪಡೆಗಳು ಕಾಳಗಕ್ಕೆ ಸನ್ನದ್ಧವಾಗಿವೆ. the car is ready ಕಾರು ಸಿದ್ಧವಾಗಿದೆ.
- ಸಿದ್ಧ; ಮನಸ್ಸಿರುವ; ಒಲವುಳ್ಳ; ಇಷ್ಟವುಳ್ಳ; ಸಂಕಲ್ಪಿಸಿರುವ: ready to forgive ಕ್ಷಮಿಸಲು ಸಿದ್ಧ. I am ready to risk my life ನನ್ನ ಪ್ರಾಣವನ್ನೇ ಒತ್ತೆಯಿಡಲು, ಅಪಾಯಕ್ಕೊಳಪಡಿಸಲು, ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ.
- (ಕಾರ್ಯ, ಸಾಧನೆ, ನೋಡುವುದು, ಗ್ರಹಿಸುವುದು, ಮಾತನಾಡುವುದು ಯಾ ಬರೆಯುವುದು ಮೊದಲಾದವುಗಳಲ್ಲಿ) ಚುರುಕಾದ; ಶೀಘ್ರವಾದ; ಕ್ಷಣಮಾತ್ರದಲ್ಲಿ ಮಾಡುವ: a ready wit ಪ್ರತ್ಯುತ್ಪನ್ನಮತಿ; ಕುಶಾಗ್ರಬುದ್ಧಿ; (ಸಮಸ್ಯೆಗೆ ಪರಿಹಾರವನ್ನು) ತಕ್ಷಣವೇ ಕಂಡು ಹಿಡಿಯುವ ಬುದ್ಧಿಶಕ್ತಿ ಯಾ ಬುದ್ಧಿಶಕ್ತಿಯುಳ್ಳವನು. a ready pen ಸಿದ್ಧಲೇಖನಿ; ಕೂಡಲೇ ಬರೆಯುವ ಶಕ್ತಿ.
- ಕೂಡಲೇ ಒದಗುವ; ಸಿದ್ಧವಾಗಿರುವ; ಥಟ್ಟನೆಯ; ಕ್ಷಿಪ್ರ: a ready reply ಥಟ್ಟನೆಯ ಉತ್ತರ. the ready solubility of the substance ಆ ದ್ರವ್ಯದ ಕ್ಷಿಪ್ರ ವಿಲೀನತೆ.
- ತತ್ಕ್ಷಣದ; ಸಂಪೂರ್ಣವಾದ; ಶುದ್ಧಾಂಗವಾದ; ಅಭ್ಯಂತರವಿಲ್ಲದ; ನಿರಾಕ್ಷೇಪವಾದ: a ready consent ತತ್ಕ್ಷಣದ ಸಮ್ಮತಿ.
- (ಯಾವುದೇ ವಿಷಯದಲ್ಲಿ) ಹಾತೊರೆಯುವ; ಆತುರವುಳ್ಳ; ತ್ವರಿತವಾದ ಒಲವುಳ್ಳ: too ready to suspect ಸಂಶಯಪಡಲು ಆತುರಪಡುವ.
- (ಸನ್ನಿಹಿತವಾದ ಯಾ ಆಸನ್ನವಾದ ಯಾವುದೇ ದುರ್ಗತಿಯನ್ನು) ಅನುಭವಿಸಲು ಸಿದ್ಧವಾಗಿರುವ, ತಯಾರಾಗಿರುವ: a tree ready to fall ಬೀಳಲು ಸಿದ್ಧವಾಗಿರುವ ಮರ. a patient ready to die any moment ಯಾವುದೇ ಕ್ಷಣದಲ್ಲಿ ಸಾಯಲು ತಯಾರಾಗಿರುವ ಒಬ್ಬ ರೋಗಿ.
- ಕೂಡಲೇ ಬಳಸಬಹುದಾಗಿರುವ, ಉಪಯೋಗಿಸಬಹುದಾದ: was ready to hand ಕೂಡಲೆ ಬಳಸಬಹುದಾಗಿತ್ತು.
- ಕೂಡಲೇ ಸಿಗುವಂತಿರುವ; ಕೈಗೆಟಕುವಂತಿರುವ; ಸುಲಭಲಭ್ಯವಾದ: a ready source of profit ಲಾಭದ ಸುಲಭಲಭ್ಯ ಮೂಲ.
- ಕೂಡಲೇ ಸಲ್ಲಿಸುವ, ಪಾವತಿಮಾಡುವ, ಬಟವಾಡೆ ಮಾಡುವ: ready payment ಕೈಸಲ್ಲಿಕೆ; ಕೈ ಬಟವಾಡೆ.
- (ಯಾವುದನ್ನೇ) ಮಾಡಲಿರುವ; ಸದ್ಯದಲ್ಲೇ ಸಾಧಿಸಲಿರುವ: a bud ready to burst ಇನ್ನೇನು ಅರಳಲಿರುವ ಮೊಗ್ಗು.
- ಮೊದಲೇ ಒದಗಿಸಿರುವ.
ಪದಗುಚ್ಛ
- get ready ಸಿದ್ಧವಾಗು.
- ready, steady (or get set), go (ರೇಸು ಮೊದಲಾದವುಗಳಲ್ಲಿ ಕೊಡುವ ಸೂಚನೆ) ಓಡಲು ಸಿದ್ಧತೆ ಮಾಡಿಕೊಳ್ಳಿ, ಅಣಿಯಾಗಿ, ಓಡಿ.
- make ready
- ಸಿದ್ಧಮಾಡು: make everything ready ಎಲ್ಲವನ್ನೂ ಸಿದ್ಧಮಾಡು.
- ಸಿದ್ಧವಾಗು: make ready for the show ಪ್ರದರ್ಶನಕ್ಕಾಗಿ ಸಿದ್ಧವಾಗು.