See also 2read
1read ರೀಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ read\ ಉಚ್ಚಾರಣೆ ರೆಡ್‍).
ಸಕರ್ಮಕ ಕ್ರಿಯಾಪದ
  1. ಓದು:
    1. (ಕೈಬರಹ ಯಾ ಅಚ್ಚಾದ ಬರೆಹವನ್ನು) ಓದಿ ಅರಿತುಕೊ, ಅರ್ಥಮಾಡಿಕೊ: read a book ಪುಸ್ತಕವನ್ನು ಓದು, ಓದಿ ಅರ್ಥಮಾಡಿಕೊ.
    2. read the book silently ಪುಸ್ತಕವನ್ನು ಮೌನವಾಗಿ (ಮನಸ್ಸಿನಲ್ಲೇ) ಓದಿಕೊ; (ಅರ್ಥವಾಗುವಂತೆ ಮನಸ್ಸಿನಲ್ಲೇ) ಓದಿಕೊ.
    3. (ಗಟ್ಟಿಯಾಗಿ) ಓದು; ಪಠಿಸು; ವಾಚಿಸು: he read the story to his children ಆತ ಕಥೆಯನ್ನು ಮಕ್ಕಳಿಗಾಗಿ, ಮಕ್ಕಳೆದುರಿನಲ್ಲಿ ಓದಿದ. read aloud ಗಟ್ಟಿಯಾಗಿ ಓದು.
    4. ಭಾಷೆಯ ಸಾಕಷ್ಟು ತಿಳಿವಳಿಕೆಯಿಂದ, ಪರಿಚಯದಿಂದ (ಆ ಭಾಷೆಯ ಗ್ರಂಥ ಮೊದಲಾದವನ್ನು) ಓದಿ ಅರ್ಥಮಾಡಿಕೊ: he is able to read French ಅವನು ಹ್ರೆಂಚನ್ನು, ಹ್ರೆಂಚಿನಲ್ಲಿರುವ ಪುಸ್ತಕ ಮೊದಲಾದವನ್ನು ಓದಬಲ್ಲ.
    5. (ನೋಟದಿಂದಲ್ಲದೆ, ಬೆರಳುಗಳಿಂದ ಮುಟ್ಟಿ) ಓದು: read Braile ಬ್ರೇಲ್‍ ಲಿಪಿಯನ್ನು (ಬೆರಳಿನಿಂದ) ಓದು.
    6. (ಚಿತ್ರಲಿಪಿ, ಷಾರ್ಟ್‍ ಹ್ಯಾಂಡ್‍ ಯಾ ಬೇರೆ ಸಂಕೇತಗಳಲ್ಲಿರುವ ಬರೆಹವನ್ನು ಆಡುವ ಭಾಷೆಗೆ ಮಾರ್ಪಡಿಸಿ) ಓದಿಹೇಳು: he can read hieroglyphics ಆತ ಚಿತ್ರಲಿಪಿಯನ್ನು ಓದಬಲ್ಲ.
    7. (ವೀಕ್ಷಣ ಯಾ ಪರೀಕ್ಷಣದಿಂದ ವಿದ್ಯಮಾನದ) ಅರ್ಥವನ್ನು ತಿಳಿ; ಪರಿಣಾಮವನ್ನು, ಸೂಚನೆಯನ್ನು ಗ್ರಹಿಸು, ಅರಿ: he read the dark, cloudy sky as the harbinger of a storm ಕಾರ್ಮುಗಿಲು ಕವಿದ ಆಕಾಶವನ್ನು ನೋಡಿ ಅವನು ಚಂಡಮಾರುತ ಬಿರುಮಳೆಗಳ ಮುನ್‍ಸೂಚನೆಯನ್ನು ಅರಿತುಕೊಂಡ. read the sky ಆಕಾಶಕಾಯಗಳನ್ನು ವೀಕ್ಷಿಸಿ ಖಗೋಳವನ್ನು ಅರಿತುಕೊ.
    8. (ಕೈ ಮೊದಲಾದವನ್ನು ನೋಡಿ) ಭವಿಷ್ಯ ಹೇಳು: read a person’s hand ವ್ಯಕ್ತಿಯ ಕೈ ನೋಡಿ ಭವಿಷ್ಯಹೇಳು. read a dream ಸ್ವಪ್ನದ ಮರ್ಮವನ್ನು ಹೇಳು; ಸ್ವಪ್ನವು ಸೂಚಿಸುವ ಫಲವನ್ನು ಹೇಳು.
    9. ಓದಿ ಅರ್ಥೈಸು; ಅರ್ಥ – ಹೇಳು, ಬಿಡಿಸು: read the riddle ಒಗಟನ್ನು (ಓದಿ) ಬಿಡಿಸು. read an omen ಶಕುನ ಹೇಳು. read futurity ಭವಿಷ್ಯ ಹೇಳು.
    1. (ವ್ಯಕ್ತಿಯ ಚಹರೆ ಮೊದಲಾದವುಗಳಿಂದ) ಅವನ ಅಂತರಂಗವನ್ನು ಹೇಳು; ಮರ್ಮವನ್ನು ಭೇದಿಸು, ಅರಿ: read men’s thoughts ವ್ಯಕ್ತಿಗಳನ್ನು ನೋಡಿ ಅವರ ಮನಸ್ಸಿನಲ್ಲಿನ ವಿಚಾರಗಳನ್ನು ಅರಿ. read men’s face ವ್ಯಕ್ತಿಗಳ ಮುಖ ನೋಡಿ ಅವರ ಮನಸ್ಸನ್ನು ಅರಿ.
    2. ವ್ಯಕ್ತಿಯ ಮಾತುಗಳನ್ನು ಕೇಳಿ ಯಾ ಅವನ ಸಂಜ್ಞೆಗಳನ್ನು ನೋಡಿ ಅರಿತುಕೊ ಯಾ ಅರ್ಥೈಸು.
  2. ಅಥಸು; (ಹೇಳಿಕೆ, ವರ್ತನೆ, ಮೊದಲಾದವುಗಳಲ್ಲಿ ವ್ಯಕ್ತವಾಗಿ ಕಾಣದ) ಆಶಯವನ್ನು, ಉದ್ದೇಶವನ್ನು, ಸೂಚಿತ ಅರ್ಥವನ್ನು – ಊಹಿಸು, ಕಲ್ಪಿಸು: you read too much into the text ನೀನು ಆ ಗ್ರಂಥಭಾಗಕ್ಕೆ ಅತಿಯಾದ, ಇರುವುದಕ್ಕಿಂತ ಹೆಚ್ಚಾದ ಅರ್ಥ ಕಲ್ಪಿಸುತ್ತಿದ್ದೀಯೆ. my silence is not to be read as consent ನನ್ನ ಮೌನವನ್ನು ಒಪ್ಪಿಗೆಯೆಂದು ಅರ್ಥೈಸಬಾರದು.
  3. (ಗ್ರಂಥದ ಯಾ ಸಂಪಾದಕನ ವಿಷಯದಲ್ಲಿ) (ಕರ್ತೃವಿನ ಪಾಠವೆಂದು ಊಹಿಸಿ) ಪಾಠವನ್ನು, ಪಾಠಾಂತರವನ್ನು ಕೊಡು: Bently reads ‘peraeque’ ಬೆಂಟ್ಲಿಯು peraeque ಎಂಬ ಪಾಠವನ್ನು ಕೊಟ್ಟಿದ್ದಾನೆ.
  4. (ಮುದ್ರಣ)
    1. ಕರಡನ್ನು ಪರೀಕ್ಷಿಸು, ಸರಿನೋಡು, ಸರಿತಪ್ಪುಗಳನ್ನು ಗಮನಿಸು.
    2. (ತಪ್ಪು ಬರೆಹ ಯಾ ಅಚ್ಚನ್ನು ತಿದ್ದುವಲ್ಲಿ) ತಿದ್ದುಪಡಿಯನ್ನು ಕೊಡು: for ‘one thousand’, read ‘ten thousand’ ‘one thousand’ ಗೆ ಬದಲು ‘ten thousand’ ಎಂದು ಓದಿಕೊಳ್ಳಿ. for white read black, and the account may be accepted (ಹಾಸ್ಯದ ಮಾತು) ಕಪ್ಪನ್ನೇ ಬಿಳುಪೆಂದು ತಿಳಿದುಕೊಂಡರೆ, ಈ ಲೆಕ್ಕವನ್ನು ಅಂಗೀಕರಿಸಬಹುದು.
  5. (ಅಳತೆ, ಪ್ರಮಾಣ ತೋರಿಸುವ ಮಾಪಕಗಳ ವಿಷಯದಲ್ಲಿ) ಅಂಕವನ್ನು, ಪ್ರಮಾಣವನ್ನು – ಸೂಚಿಸು, ತೋರಿಸು: ಎಥೆ ಥೆಮೊಮೆತೆ ರೆಅ $೩೦^ಚಿ$ ಉಷ್ಣಮಾಪಕವು $30^\circ$ ಯನ್ನು ಸೂಚಿಸುತ್ತದೆ.
  6. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಓದು; ಕಲಿ; ವ್ಯಾಸಂಗ ಮಾಡು; ಅಧ್ಯಯನ ಮಾಡು: he is reading law ಅವನು ನ್ಯಾಯಶಾಸ್ತ್ರವನ್ನು ಕಲಿಯುತ್ತಿದ್ದಾನೆ, ವ್ಯಾಸಂಗ ಮಾಡುತ್ತಿದ್ದಾನೆ.
  7. ಓದಿ ಓದಿ ಒಂದು ಸ್ಥಿತಿಯನ್ನು ತಂದುಕೊ; ಒಂದು ಸ್ಥಿತಿಗೆ ಬರುವವರೆಗೂ ಓದು: read oneself to sleep ಓದಿ ಓದಿ ನಿದ್ದೆ ತಂದುಕೊಂಡ. read himself stupid ಓದಿ ಓದಿ ಪೆದ್ದಂಭಟ್ಟನಾದ.
  8. (ಒಬ್ಬನಿಗೆ) ಬುದ್ಧಿ ಹೇಳು, ಕಲಿಸು; ಪಾಠ ಹೇಳು; ಉಪದೇಶ ಮಾಡು: read one a lesson, lecture ಒಬ್ಬನಿಗೆ ಬುದ್ಧಿಕಲಿಸು, ಉಪದೇಶ ಮಾಡು.
  9. (ಪಾರ್ಲಿಮೆಂಟ್‍ ಮೊದಲಾದವುಗಳಲ್ಲಿ ಮಸೂದೆಯನ್ನು) ಮಂಡಿಸು; ಪಠಿಸು; ವಾಚಿಸು: the bill was read for the first time ಮಸೂದೆಯು ಮೊದಲ ಸಲ ಮಂಡಿಸಲ್ಪಟ್ಟಿತು, ಪಠಿಸಲ್ಪಟ್ಟಿತು; ಮಸೂದೆಯ ಪ್ರಥಮ ಪಠನ, ವಾಚನ ಆಯಿತು.
  10. (ತುಂಬ) ಓದಿ ವಿದ್ವಾಂಸನಾಗಿರು: he has read much ಆತ ತುಂಬ ಓದಿದ್ದಾನೆ; ಆತ ತುಂಬ ಓದಿದವನು, ಕಲಿತವನು, ವಿದ್ವಾಂಸ.
  11. (ಗ್ರಂಥ ಮೊದಲಾದವುಗಳಲ್ಲಿ ಹೇಳಿರುವುದನ್ನು) ಓದಿರು; ಕಂಡಿರು: revenge, we read, is wild justice ಪ್ರತೀಕಾರವು ಅನಾಗರಿಕವಾದ ನ್ಯಾಯ ಎಂದು ಓದಿದ್ದೇವೆ. I have read of it somewhere ಅದನ್ನೆಲ್ಲೋ ಓದಿದ್ದೇನೆ.
    1. (ಕಂಪ್ಯೂಟರಿನ ವಿಷಯದಲ್ಲಿ) (ದತ್ತಾಂಶವನ್ನು) ಕಾಪಿ ಮಾಡು ಯಾ ವರ್ಗಾಯಿಸು.
    2. (read in, out) (ದತ್ತಾಂಶವನ್ನು) ಇಲೆಕ್ಟ್ರಾನಿಕ್‍ ಶೇಖರಣ ಸಾಧನದಲ್ಲಿ ದಾಖಲುಮಾಡು ಯಾ ತೆಗೆ.
ಅಕರ್ಮಕ ಕ್ರಿಯಾಪದ
  1. ಓದಿದಾಗ ಒಂದು ನಿರ್ದಿಷ್ಟ ರೀತಿಯಲ್ಲಿ ಅರ್ಥ ಕೊಡು, ನೀಡು: it reads persuasively ಅದು ಮನವೊಪ್ಪಿಸುವಂತೆ ಅರ್ಥಕೊಡುತ್ತದೆ.
  2. ಓದಿದಾಗ ಕೇಳುವವನಿಗೆ ಯಾ ಓದುಗನಿಗೆ ನಿರ್ದಿಷ್ಟ ರೀತಿಯಲ್ಲಿ ಕೇಳಿಸು, ಕಾಣಿಸು ಯಾ ಪರಿಣಾಮ ಬೀರು: the book reads like a parody ಪುಸ್ತಕ ವಿಡಂಬನಾತ್ಮಕ ಕೃತಿಯಂತೆ ಕಾಣಿಸುತ್ತದೆ.
  3. ಒಂದು ಕೋರ್ಸನ್ನು, ವ್ಯಾಸಂಗವನ್ನು ಮಾಡುತ್ತಿರು: is reading for the Bar ಅವನು ವಕೀಲಿ ವೃತ್ತಿಗಾಗಿ, ವಕೀಲಿ ವೃತ್ತಿ ಹಿಡಿಯಲು ಓದುತ್ತಿದ್ದಾನೆ.
ಪದಗುಚ್ಛ
  1. a reading man ಓದಾಳಿ; ವ್ಯಾಸಂಗಶೀಲ.
  2. a read speech (ಬರೆದು) ಓದಿದ ಭಾಷಣ.
  3. deeply read ಆಳವಾಗಿ ಓದಿದ; ಗಹನವಾದ ಪಾಂಡಿತ್ಯವುಳ್ಳ; ಪಾರಂಗತ; ಕೂಲಂಕಷ ಜ್ಞಾನವುಳ್ಳ.
  4. extremely read ತುಂಬಾ, ಅಪಾರ – ಓದಿದ: an Oxford man extremely read in Greek ಗ್ರೀಕ್‍ನಲ್ಲಿ ಅಪಾರ ಪಾಂಡಿತ್ಯ ಗಳಿಸಿರುವ ಆಕ್ಸ್‍ಹರ್ಡ್‍ ವಿದ್ವಾಂಸ.
  5. it reads like a translation ಓದಿದರೆ ಅದೊಂದು ಭಾಷಾಂತರ ಎನಿಸುತ್ತದೆ.
  6. little read ಏನೂ ಓದಿಲ್ಲದ, ಕಲಿತಿಲ್ಲದ; ಅಪಂಡಿತ; ಅವಿದ್ವಾಂಸ.
  7. read off (ಲಿಖಿತ ವಿಷಯವನ್ನು ಯಾ ಲಿಖಿತ ವಿಷಯದ ಉಲ್ಲೇಖ, ಉಲ್ಲೇಖಗಳನ್ನು) ಗಟ್ಟಿಯಾಗಿ ಓದು.
  8. read-oneself in (ಪಾದ್ರಿಯ ವಿಷಯದಲ್ಲಿ) ಆಂಗ್ಲಿಕನ್‍ ಚರ್ಚಿನ 39 ಕಲಮುಗಳನ್ನು ಓದಿ ಅಧಿಕಾರ ವಹಿಸಿಕೊ.
  9. read between the lines (ದಾಖಲೆ ಪತ್ರ, ಭಾಷಣ ಮೊದಲಾದವುಗಳಲ್ಲಿ) ರಹಸ್ಯಾರ್ಥವನ್ನು, ಅಡಗಿರುವ ಅರ್ಥವನ್ನು, ಕೂಟಾರ್ಥವನ್ನು – ಹುಡುಕು ಯಾ ಕಂಡುಹಿಡಿ.
  10. read (person)a lecture (or a lesson) ವ್ಯಕ್ತಿಯನ್ನು ಖಂಡಿಸು, ವ್ಯಕ್ತಿಗೆ ಛೀಮಾರಿ ಹಾಕು.
  11. read a person like a book ವ್ಯಕ್ತಿಯ – ಒಳ ಮರ್ಮವನ್ನು, ಅಂತರಂಗವನ್ನು, ಉದ್ದೇಶ ಮೊದಲಾದವನ್ನು ಅರಿ, ಅರ್ಥಮಾಡಿಕೊ.
  12. take it (or something) as read ಅದನ್ನು ವಿಚಾರ ಮಾಡಬೇಕಾಗಿಲ್ಲವೆಂದು, ಚರ್ಚೆಮಾಡದೆ ಒಪ್ಪಬಹುದೆಂದು – ಗ್ರಹಿಸು, ಭಾವಿಸು.
  13. read on ಓದುತ್ತಾ ಹೋಗು; ವಾಚನ, ಪಠನ ಮುಂದುವರೆಸು.
  14. read up(on) something (ಒಂದರ ಬಗ್ಗೆ) ವಿಸ್ತಾರವಾಗಿ ವ್ಯಾಸಂಗ ಮಾಡು, ವ್ಯಾಪಕವಾಗಿ ಓದು ಯಾ ವಿಶೇಷಾಧ್ಯಯನ ನಡೆಸು.
  15. read out
    1. ಗಟ್ಟಿಯಾಗಿ ಓದು.
    2. (ಅಮೆರಿಕನ್‍ ಪ್ರಯೋಗ) ರಾಜಕೀಯ ಪಕ್ಷ ಮೊದಲಾದವುಗಳಿಂದ (ವಜಾಪತ್ರವನ್ನು ಓದಿ) ಬಹಿಷ್ಕರಿಸು, ಹೊರದೂಡು.
  16. slightly read ಅಲ್ಪಸ್ವಲ್ಪ ಓದಿದ, ಕಲಿತ.
  17. the letter reads like a threat ಆ ಕಾಗದ ಬೆದರಿಕೆಯಂತೆ ಓದುತ್ತದೆ, ಬೆದರಿಕೆಯ ಧ್ವನಿ ಕೊಡುತ್ತದೆ.
  18. the play reads better than it acts ಆ ನಾಟಕವು ಆಡುವುದಕ್ಕಿಂತ ಓದುವುದಕ್ಕೆ ಚೆನ್ನಾಗಿದೆ.
  19. read well ಓದಲು ಚೆನ್ನಾಗಿರು:
    1. ಓದಿದಾಗ ಚೆನ್ನಾಗಿದೆ ಎನಿಸು.
    2. ಓದುವುದರಲ್ಲಿ ಚೆನ್ನಾಗಿರು.
  20. well read ಚೆನ್ನಾಗಿ ಓದಿದ, ಕಲಿತ; ಪಾಂಡಿತ್ಯವುಳ್ಳ; ಪರಿಣಿತ.
See also 1read
2read ರೀಡ್‍
ನಾಮವಾಚಕ

ಓದುವುದರಲ್ಲಿ ಕಳೆದ ಹೊತ್ತು: have a short read ಓದುವುದರಲ್ಲಿ ಯಾ ಓದುತ್ತಾ ಸ್ವಲ್ಪ ಹೊತ್ತು ಕಳೆ. have a quiet read ಸ್ವಲ್ಪ ಹೊತ್ತು ಶಾಂತವಾಗಿ ಓದುತ್ತಿರು.