1read
ರೀಡ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ read\ ಉಚ್ಚಾರಣೆ ರೆಡ್).
ಸಕರ್ಮಕ ಕ್ರಿಯಾಪದ
- ಓದು:
- (ಕೈಬರಹ ಯಾ ಅಚ್ಚಾದ ಬರೆಹವನ್ನು) ಓದಿ ಅರಿತುಕೊ, ಅರ್ಥಮಾಡಿಕೊ: read a book ಪುಸ್ತಕವನ್ನು ಓದು, ಓದಿ ಅರ್ಥಮಾಡಿಕೊ.
- read the book silently ಪುಸ್ತಕವನ್ನು ಮೌನವಾಗಿ (ಮನಸ್ಸಿನಲ್ಲೇ) ಓದಿಕೊ; (ಅರ್ಥವಾಗುವಂತೆ ಮನಸ್ಸಿನಲ್ಲೇ) ಓದಿಕೊ.
- (ಗಟ್ಟಿಯಾಗಿ) ಓದು; ಪಠಿಸು; ವಾಚಿಸು: he read the story to his children ಆತ ಕಥೆಯನ್ನು ಮಕ್ಕಳಿಗಾಗಿ, ಮಕ್ಕಳೆದುರಿನಲ್ಲಿ ಓದಿದ. read aloud ಗಟ್ಟಿಯಾಗಿ ಓದು.
- ಭಾಷೆಯ ಸಾಕಷ್ಟು ತಿಳಿವಳಿಕೆಯಿಂದ, ಪರಿಚಯದಿಂದ (ಆ ಭಾಷೆಯ ಗ್ರಂಥ ಮೊದಲಾದವನ್ನು) ಓದಿ ಅರ್ಥಮಾಡಿಕೊ: he is able to read French ಅವನು ಹ್ರೆಂಚನ್ನು, ಹ್ರೆಂಚಿನಲ್ಲಿರುವ ಪುಸ್ತಕ ಮೊದಲಾದವನ್ನು ಓದಬಲ್ಲ.
- (ನೋಟದಿಂದಲ್ಲದೆ, ಬೆರಳುಗಳಿಂದ ಮುಟ್ಟಿ) ಓದು: read Braile ಬ್ರೇಲ್ ಲಿಪಿಯನ್ನು (ಬೆರಳಿನಿಂದ) ಓದು.
- (ಚಿತ್ರಲಿಪಿ, ಷಾರ್ಟ್ ಹ್ಯಾಂಡ್ ಯಾ ಬೇರೆ ಸಂಕೇತಗಳಲ್ಲಿರುವ ಬರೆಹವನ್ನು ಆಡುವ ಭಾಷೆಗೆ ಮಾರ್ಪಡಿಸಿ) ಓದಿಹೇಳು: he can read hieroglyphics ಆತ ಚಿತ್ರಲಿಪಿಯನ್ನು ಓದಬಲ್ಲ.
- (ವೀಕ್ಷಣ ಯಾ ಪರೀಕ್ಷಣದಿಂದ ವಿದ್ಯಮಾನದ) ಅರ್ಥವನ್ನು ತಿಳಿ; ಪರಿಣಾಮವನ್ನು, ಸೂಚನೆಯನ್ನು ಗ್ರಹಿಸು, ಅರಿ: he read the dark, cloudy sky as the harbinger of a storm ಕಾರ್ಮುಗಿಲು ಕವಿದ ಆಕಾಶವನ್ನು ನೋಡಿ ಅವನು ಚಂಡಮಾರುತ ಬಿರುಮಳೆಗಳ ಮುನ್ಸೂಚನೆಯನ್ನು ಅರಿತುಕೊಂಡ. read the sky ಆಕಾಶಕಾಯಗಳನ್ನು ವೀಕ್ಷಿಸಿ ಖಗೋಳವನ್ನು ಅರಿತುಕೊ.
- (ಕೈ ಮೊದಲಾದವನ್ನು ನೋಡಿ) ಭವಿಷ್ಯ ಹೇಳು: read a person’s hand ವ್ಯಕ್ತಿಯ ಕೈ ನೋಡಿ ಭವಿಷ್ಯಹೇಳು. read a dream ಸ್ವಪ್ನದ ಮರ್ಮವನ್ನು ಹೇಳು; ಸ್ವಪ್ನವು ಸೂಚಿಸುವ ಫಲವನ್ನು ಹೇಳು.
- ಓದಿ ಅರ್ಥೈಸು; ಅರ್ಥ – ಹೇಳು, ಬಿಡಿಸು: read the riddle ಒಗಟನ್ನು (ಓದಿ) ಬಿಡಿಸು. read an omen ಶಕುನ ಹೇಳು. read futurity ಭವಿಷ್ಯ ಹೇಳು.
-
- (ವ್ಯಕ್ತಿಯ ಚಹರೆ ಮೊದಲಾದವುಗಳಿಂದ) ಅವನ ಅಂತರಂಗವನ್ನು ಹೇಳು; ಮರ್ಮವನ್ನು ಭೇದಿಸು, ಅರಿ: read men’s thoughts ವ್ಯಕ್ತಿಗಳನ್ನು ನೋಡಿ ಅವರ ಮನಸ್ಸಿನಲ್ಲಿನ ವಿಚಾರಗಳನ್ನು ಅರಿ. read men’s face ವ್ಯಕ್ತಿಗಳ ಮುಖ ನೋಡಿ ಅವರ ಮನಸ್ಸನ್ನು ಅರಿ.
- ವ್ಯಕ್ತಿಯ ಮಾತುಗಳನ್ನು ಕೇಳಿ ಯಾ ಅವನ ಸಂಜ್ಞೆಗಳನ್ನು ನೋಡಿ ಅರಿತುಕೊ ಯಾ ಅರ್ಥೈಸು.
- ಅಥಸು; (ಹೇಳಿಕೆ, ವರ್ತನೆ, ಮೊದಲಾದವುಗಳಲ್ಲಿ ವ್ಯಕ್ತವಾಗಿ ಕಾಣದ) ಆಶಯವನ್ನು, ಉದ್ದೇಶವನ್ನು, ಸೂಚಿತ ಅರ್ಥವನ್ನು – ಊಹಿಸು, ಕಲ್ಪಿಸು: you read too much into the text ನೀನು ಆ ಗ್ರಂಥಭಾಗಕ್ಕೆ ಅತಿಯಾದ, ಇರುವುದಕ್ಕಿಂತ ಹೆಚ್ಚಾದ ಅರ್ಥ ಕಲ್ಪಿಸುತ್ತಿದ್ದೀಯೆ. my silence is not to be read as consent ನನ್ನ ಮೌನವನ್ನು ಒಪ್ಪಿಗೆಯೆಂದು ಅರ್ಥೈಸಬಾರದು.
- (ಗ್ರಂಥದ ಯಾ ಸಂಪಾದಕನ ವಿಷಯದಲ್ಲಿ) (ಕರ್ತೃವಿನ ಪಾಠವೆಂದು ಊಹಿಸಿ) ಪಾಠವನ್ನು, ಪಾಠಾಂತರವನ್ನು ಕೊಡು: Bently reads ‘peraeque’ ಬೆಂಟ್ಲಿಯು peraeque ಎಂಬ ಪಾಠವನ್ನು ಕೊಟ್ಟಿದ್ದಾನೆ.
- (ಮುದ್ರಣ)
- ಕರಡನ್ನು ಪರೀಕ್ಷಿಸು, ಸರಿನೋಡು, ಸರಿತಪ್ಪುಗಳನ್ನು ಗಮನಿಸು.
- (ತಪ್ಪು ಬರೆಹ ಯಾ ಅಚ್ಚನ್ನು ತಿದ್ದುವಲ್ಲಿ) ತಿದ್ದುಪಡಿಯನ್ನು ಕೊಡು: for ‘one thousand’, read ‘ten thousand’ ‘one thousand’ ಗೆ ಬದಲು ‘ten thousand’ ಎಂದು ಓದಿಕೊಳ್ಳಿ. for white read black, and the account may be accepted (ಹಾಸ್ಯದ ಮಾತು) ಕಪ್ಪನ್ನೇ ಬಿಳುಪೆಂದು ತಿಳಿದುಕೊಂಡರೆ, ಈ ಲೆಕ್ಕವನ್ನು ಅಂಗೀಕರಿಸಬಹುದು.
- (ಅಳತೆ, ಪ್ರಮಾಣ ತೋರಿಸುವ ಮಾಪಕಗಳ ವಿಷಯದಲ್ಲಿ) ಅಂಕವನ್ನು, ಪ್ರಮಾಣವನ್ನು – ಸೂಚಿಸು, ತೋರಿಸು: ಎಥೆ ಥೆಮೊಮೆತೆ ರೆಅ $೩೦^ಚಿ$ ಉಷ್ಣಮಾಪಕವು $30^\circ$ ಯನ್ನು ಸೂಚಿಸುತ್ತದೆ.
- (ಮುಖ್ಯವಾಗಿ ಬ್ರಿಟಿಷ್ ಪ್ರಯೋಗ) ಓದು; ಕಲಿ; ವ್ಯಾಸಂಗ ಮಾಡು; ಅಧ್ಯಯನ ಮಾಡು: he is reading law ಅವನು ನ್ಯಾಯಶಾಸ್ತ್ರವನ್ನು ಕಲಿಯುತ್ತಿದ್ದಾನೆ, ವ್ಯಾಸಂಗ ಮಾಡುತ್ತಿದ್ದಾನೆ.
- ಓದಿ ಓದಿ ಒಂದು ಸ್ಥಿತಿಯನ್ನು ತಂದುಕೊ; ಒಂದು ಸ್ಥಿತಿಗೆ ಬರುವವರೆಗೂ ಓದು: read oneself to sleep ಓದಿ ಓದಿ ನಿದ್ದೆ ತಂದುಕೊಂಡ. read himself stupid ಓದಿ ಓದಿ ಪೆದ್ದಂಭಟ್ಟನಾದ.
- (ಒಬ್ಬನಿಗೆ) ಬುದ್ಧಿ ಹೇಳು, ಕಲಿಸು; ಪಾಠ ಹೇಳು; ಉಪದೇಶ ಮಾಡು: read one a lesson, lecture ಒಬ್ಬನಿಗೆ ಬುದ್ಧಿಕಲಿಸು, ಉಪದೇಶ ಮಾಡು.
- (ಪಾರ್ಲಿಮೆಂಟ್ ಮೊದಲಾದವುಗಳಲ್ಲಿ ಮಸೂದೆಯನ್ನು) ಮಂಡಿಸು; ಪಠಿಸು; ವಾಚಿಸು: the bill was read for the first time ಮಸೂದೆಯು ಮೊದಲ ಸಲ ಮಂಡಿಸಲ್ಪಟ್ಟಿತು, ಪಠಿಸಲ್ಪಟ್ಟಿತು; ಮಸೂದೆಯ ಪ್ರಥಮ ಪಠನ, ವಾಚನ ಆಯಿತು.
- (ತುಂಬ) ಓದಿ ವಿದ್ವಾಂಸನಾಗಿರು: he has read much ಆತ ತುಂಬ ಓದಿದ್ದಾನೆ; ಆತ ತುಂಬ ಓದಿದವನು, ಕಲಿತವನು, ವಿದ್ವಾಂಸ.
- (ಗ್ರಂಥ ಮೊದಲಾದವುಗಳಲ್ಲಿ ಹೇಳಿರುವುದನ್ನು) ಓದಿರು; ಕಂಡಿರು: revenge, we read, is wild justice ಪ್ರತೀಕಾರವು ಅನಾಗರಿಕವಾದ ನ್ಯಾಯ ಎಂದು ಓದಿದ್ದೇವೆ. I have read of it somewhere ಅದನ್ನೆಲ್ಲೋ ಓದಿದ್ದೇನೆ.
-
- (ಕಂಪ್ಯೂಟರಿನ ವಿಷಯದಲ್ಲಿ) (ದತ್ತಾಂಶವನ್ನು) ಕಾಪಿ ಮಾಡು ಯಾ ವರ್ಗಾಯಿಸು.
- (read in, out) (ದತ್ತಾಂಶವನ್ನು) ಇಲೆಕ್ಟ್ರಾನಿಕ್ ಶೇಖರಣ ಸಾಧನದಲ್ಲಿ ದಾಖಲುಮಾಡು ಯಾ ತೆಗೆ.
ಅಕರ್ಮಕ ಕ್ರಿಯಾಪದ
- ಓದಿದಾಗ ಒಂದು ನಿರ್ದಿಷ್ಟ ರೀತಿಯಲ್ಲಿ ಅರ್ಥ ಕೊಡು, ನೀಡು: it reads persuasively ಅದು ಮನವೊಪ್ಪಿಸುವಂತೆ ಅರ್ಥಕೊಡುತ್ತದೆ.
- ಓದಿದಾಗ ಕೇಳುವವನಿಗೆ ಯಾ ಓದುಗನಿಗೆ ನಿರ್ದಿಷ್ಟ ರೀತಿಯಲ್ಲಿ ಕೇಳಿಸು, ಕಾಣಿಸು ಯಾ ಪರಿಣಾಮ ಬೀರು: the book reads like a parody ಪುಸ್ತಕ ವಿಡಂಬನಾತ್ಮಕ ಕೃತಿಯಂತೆ ಕಾಣಿಸುತ್ತದೆ.
- ಒಂದು ಕೋರ್ಸನ್ನು, ವ್ಯಾಸಂಗವನ್ನು ಮಾಡುತ್ತಿರು: is reading for the Bar ಅವನು ವಕೀಲಿ ವೃತ್ತಿಗಾಗಿ, ವಕೀಲಿ ವೃತ್ತಿ ಹಿಡಿಯಲು ಓದುತ್ತಿದ್ದಾನೆ.
ಪದಗುಚ್ಛ
- a reading man ಓದಾಳಿ; ವ್ಯಾಸಂಗಶೀಲ.
- a read speech (ಬರೆದು) ಓದಿದ ಭಾಷಣ.
- deeply read ಆಳವಾಗಿ ಓದಿದ; ಗಹನವಾದ ಪಾಂಡಿತ್ಯವುಳ್ಳ; ಪಾರಂಗತ; ಕೂಲಂಕಷ ಜ್ಞಾನವುಳ್ಳ.
- extremely read ತುಂಬಾ, ಅಪಾರ – ಓದಿದ: an Oxford man extremely read in Greek ಗ್ರೀಕ್ನಲ್ಲಿ ಅಪಾರ ಪಾಂಡಿತ್ಯ ಗಳಿಸಿರುವ ಆಕ್ಸ್ಹರ್ಡ್ ವಿದ್ವಾಂಸ.
- it reads like a translation ಓದಿದರೆ ಅದೊಂದು ಭಾಷಾಂತರ ಎನಿಸುತ್ತದೆ.
- little read ಏನೂ ಓದಿಲ್ಲದ, ಕಲಿತಿಲ್ಲದ; ಅಪಂಡಿತ; ಅವಿದ್ವಾಂಸ.
- read off (ಲಿಖಿತ ವಿಷಯವನ್ನು ಯಾ ಲಿಖಿತ ವಿಷಯದ ಉಲ್ಲೇಖ, ಉಲ್ಲೇಖಗಳನ್ನು) ಗಟ್ಟಿಯಾಗಿ ಓದು.
- read-oneself in (ಪಾದ್ರಿಯ ವಿಷಯದಲ್ಲಿ) ಆಂಗ್ಲಿಕನ್ ಚರ್ಚಿನ 39 ಕಲಮುಗಳನ್ನು ಓದಿ ಅಧಿಕಾರ ವಹಿಸಿಕೊ.
- read between the lines (ದಾಖಲೆ ಪತ್ರ, ಭಾಷಣ ಮೊದಲಾದವುಗಳಲ್ಲಿ) ರಹಸ್ಯಾರ್ಥವನ್ನು, ಅಡಗಿರುವ ಅರ್ಥವನ್ನು, ಕೂಟಾರ್ಥವನ್ನು – ಹುಡುಕು ಯಾ ಕಂಡುಹಿಡಿ.
- read (person)a lecture (or a lesson) ವ್ಯಕ್ತಿಯನ್ನು ಖಂಡಿಸು, ವ್ಯಕ್ತಿಗೆ ಛೀಮಾರಿ ಹಾಕು.
- read a person like a book ವ್ಯಕ್ತಿಯ – ಒಳ ಮರ್ಮವನ್ನು, ಅಂತರಂಗವನ್ನು, ಉದ್ದೇಶ ಮೊದಲಾದವನ್ನು ಅರಿ, ಅರ್ಥಮಾಡಿಕೊ.
- take it (or something) as read ಅದನ್ನು ವಿಚಾರ ಮಾಡಬೇಕಾಗಿಲ್ಲವೆಂದು, ಚರ್ಚೆಮಾಡದೆ ಒಪ್ಪಬಹುದೆಂದು – ಗ್ರಹಿಸು, ಭಾವಿಸು.
- read on ಓದುತ್ತಾ ಹೋಗು; ವಾಚನ, ಪಠನ ಮುಂದುವರೆಸು.
- read up(on) something (ಒಂದರ ಬಗ್ಗೆ) ವಿಸ್ತಾರವಾಗಿ ವ್ಯಾಸಂಗ ಮಾಡು, ವ್ಯಾಪಕವಾಗಿ ಓದು ಯಾ ವಿಶೇಷಾಧ್ಯಯನ ನಡೆಸು.
- read out
- ಗಟ್ಟಿಯಾಗಿ ಓದು.
- (ಅಮೆರಿಕನ್ ಪ್ರಯೋಗ) ರಾಜಕೀಯ ಪಕ್ಷ ಮೊದಲಾದವುಗಳಿಂದ (ವಜಾಪತ್ರವನ್ನು ಓದಿ) ಬಹಿಷ್ಕರಿಸು, ಹೊರದೂಡು.
- slightly read ಅಲ್ಪಸ್ವಲ್ಪ ಓದಿದ, ಕಲಿತ.
- the letter reads like a threat ಆ ಕಾಗದ ಬೆದರಿಕೆಯಂತೆ ಓದುತ್ತದೆ, ಬೆದರಿಕೆಯ ಧ್ವನಿ ಕೊಡುತ್ತದೆ.
- the play reads better than it acts ಆ ನಾಟಕವು ಆಡುವುದಕ್ಕಿಂತ ಓದುವುದಕ್ಕೆ ಚೆನ್ನಾಗಿದೆ.
- read well ಓದಲು ಚೆನ್ನಾಗಿರು:
- ಓದಿದಾಗ ಚೆನ್ನಾಗಿದೆ ಎನಿಸು.
- ಓದುವುದರಲ್ಲಿ ಚೆನ್ನಾಗಿರು.
- well read ಚೆನ್ನಾಗಿ ಓದಿದ, ಕಲಿತ; ಪಾಂಡಿತ್ಯವುಳ್ಳ; ಪರಿಣಿತ.