See also 2reach
1reach ರೀಚ್‍
ಸಕರ್ಮಕ ಕ್ರಿಯಾಪದ
  1. ಚಾಚು; ನೀಡು ( ಅಕರ್ಮಕ ಕ್ರಿಯಾಪದ ಸಹ): reached out his hand ತನ್ನ ಕೈಯನ್ನವನು ನೀಡಿದ, ಚಾಚಿದ.
  2. ಹರಡು; ಪಸರಿಸು ( ಅಕರ್ಮಕ ಕ್ರಿಯಾಪದ ಸಹ): a dominion reaching from Ebro to the Carpathians ಎಬ್ರೋದಿಂದ ಕಾರ್ಪೇಥಿಯನ್ಸ್‍ವರೆಗೂ ಹರಡಿದ ರಾಜ್ಯ.
    1. ನೀಡು; ಕೈನೀಡಿ ಕೊಡು.
    2. ಕೈನೀಡು; ಕೈನೀಡಿ ತೆಗೆದುಕೊ.
    3. ಕೈಯಿಂದ ಕೈಗೆ ವರ್ಗಾಯಿಸು: reached him the book ಪುಸ್ತಕವನ್ನು ಅವನಿಗೆ ಕೈನೀಡಿ ಕೊಟ್ಟೆ. reached down his hat ತನ್ನ ಹ್ಯಾಟನ್ನವನು ಕೈನೀಡಿ ಎತ್ತಿಕೊಂಡ, ತೆಗೆದುಕೊಂಡ.
  3. (ನೆಲೆಯನ್ನು ಗುರಿಯನ್ನು, ವಸ್ತುವನ್ನು) ಸೇರು; ಮುಟ್ಟು; ತಲುಪು ( ಅಕರ್ಮಕ ಕ್ರಿಯಾಪದ ಸಹ): reach bottom ತಳ ಮುಟ್ಟು. could not reach his opponent (ಮುಖ್ಯವಾಗಿ ಕತ್ತಿಕಾಳಗ ಮೊದಲಾದವುಗಳಲ್ಲಿ) ಎದುರಾಳಿಯನ್ನವನು ಮುಟ್ಟಲಾಗಲಿಲ್ಲ. your letter did not reach me ನಿನ್ನ ಕಾಗದ ನನಗೆ ತಲುಪಲಿಲ್ಲ. as far as the eye could reach ಕಣ್ಣು ಮುಟ್ಟುವವರೆಗೂ, ಹಾಯುವವರೆಗೂ. my income does not reach to it ನನ್ನ ವರಮಾನ ಆ ಮಿತಿ ಮುಟ್ಟುವುದಿಲ್ಲ.
  4. ಮುಟ್ಟು; ತಟ್ಟು; ಪ್ರಭಾವ ಮಾಡುವಂತೆ ಯಾ ಉದ್ದಿಷ್ಟ ಪರಿಣಾಮ ಬೀರುವಂತೆ ಮಾಡುವುದರಲ್ಲಿ ಯಶಸ್ವಿಯಾಗು: how is her conscience to be reached ಅವಳ ಮನಸ್ಸಾಕ್ಷಿಯನ್ನು ಮುಟ್ಟುವುದು ಹೇಗೆ? could not manage to reach his audience ಅವನ ಶ್ರೋತೃಗಳನ್ನು ತಟ್ಟಲಾಗದೆ ಹೋದ.
  5. ಸಂಪರ್ಕಿಸು; ಕೈ ಮೊದಲಾದವುಗಳಿಗೆ ಯಾ ದೂರವಾಣಿ ಮೊದಲಾದವುಗಳಿಗೆ ಸಿಗು: was out of town and could not be reached ಊರಲ್ಲಿರಲಿಲ್ಲವಾದ್ದರಿಂದ ದೂರವಾಣಿಯಿಂದ ಸಂಪರ್ಕಿಸಲಾಗಲಿಲ್ಲ, ದೂರವಾಣಿಯಲ್ಲಿ ಸಿಗಲಿಲ್ಲ.
ಅಕರ್ಮಕ ಕ್ರಿಯಾಪದ
  1. (ಯಾವುದೇ ಗುರಿಯತ್ತ ಕೈ, ಅಂಗ ಮೊದಲಾದವನ್ನು) ಚಾಚು; ನೀಡು; ನಿಲುಕು; ಎಟುಕಿಸಿಕೊಳ್ಳಲು ಯತ್ನಿಸು (ರೂಪಕವಾಗಿ ಸಹ) : you must reach (your hand) out further ನಿನ್ನ ಕೈಯನ್ನು ನೀನು ಇನ್ನೂ ಮುಂದಕ್ಕೆ ಚಾಚಬೇಕು. the mind reaches forward to an ideal ಮನಸ್ಸು ಒಂದು ಆದರ್ಶದತ್ತ ಚಾಚುತ್ತದೆ. the ship is reaching ahead in the race ಹಡಗು ಪಂದ್ಯದಲ್ಲಿ ಗುರಿಯತ್ತ ಧಾವಿಸುತ್ತಿದೆ.
  2. (ನೌಕಾಯಾನ) (ಹಡಗಿನ ವಿಷಯದಲ್ಲಿ) ಗಾಳಿಯು ಹಡಗಿನ ಪಕ್ಕಕ್ಕೆ ಎದುರಾಗಿ ಬೀಸುತ್ತಿರುವಾಗ ಚಲಿಸು, ನಡೆ.
  3. (ಮುಟ್ಟಲು, ಹಿಡಿದುಕೊಳ್ಳಲು ಯಾ ಪಡೆಯಲು) ಪ್ರಯತ್ನಿಸು: reached for his hat ಹ್ಯಾಟು ತೆಗೆದುಕೊಳ್ಳಲು ಪ್ರಯತ್ನಿಸಿದ.
See also 1reach
2reach ರೀಚ್‍
ನಾಮವಾಚಕ
  1. (ಕೈ ಮೊದಲಾದವನ್ನು) ಚಾಚುವುದು; ನೀಡುವುದು; ಪ್ರಸರಣ.
  2. ಕೈ ದೂರ; (ಕೈ ಮೊದಲಾದವನ್ನು) ಚಾಚುವಷ್ಟು, ನೀಡುವಷ್ಟುದೂರ; ಕೈ – ಎಟುಕು, ನಿಲುಕು: within reach of one’s hand ಕೈ ದೂರದಲ್ಲಿ; ಕೈನಿಲುಕಿನಲ್ಲಿ; ಕೈಗೆ ಎಟುಕುವಷ್ಟು ದೂರದಲ್ಲಿ.
  3. (ಶಕ್ತಿ, ಸಾಮರ್ಥ್ಯ, ಪ್ರಭಾವ, ಕಾರ್ಯ ಮೊದಲಾದವುಗಳ) ನಿಲುಕು; ಅಳವು; ಹರವು; ವ್ಯಾಪ್ತಿ; ಪರಿಮಿತಿ: within easy reach of the railway ರೈಲುಪ್ರಯಾಣಕ್ಕೆ ಸುಲಭವಾಗಿ ನಿಲುಕುವಷ್ಟರಲ್ಲಿ.
  4. ಎಡೆಬಿಡದ ಹರವು; ಉದ್ದಕ್ಕೂ ಇರುವ ಒಂದೇ ಸಮನಾದ ಹರವು; ಅವಿಚ್ಛಿನ್ನ ವಿಸ್ತಾರ; ನಿರಂತರ ವಿಸ್ತಾರ; ಮುಖ್ಯವಾಗಿ ನದಿಯ ಎರಡು ತಿರುವುಗಳ ಯಾ ಕಾಲುವೆಯ ಎರಡು ಮಟ್ಟಗಳ ನಡುವಣ ಅವಿಚ್ಛಿನ್ನ ಅಂತರ: the reach of the river ಹೊಳೆಯ ಎಡೆಬಿಡದ ಹರವು.
  5. (ನೌಕಾಯಾನ)
    1. ಹಾಯಿಯ ಮೂಲೆಹಗ್ಗದ ಉದ್ದ.
    2. ಯಾನದೂರ; ತಲುಪಲು ಯಾನ ಮಾಡಿದ ದೂರ.
ಪದಗುಚ್ಛ
  1. beyond one’s reach ಎಟುಕಿನಾಚೆ; ತಲುಪಲು ಯಾ ಸಾಧಿಸಲು ಆಗುವಂತಹ ಶಕ್ತಿಯ ನಿಲುಕಿಗೆ ಮೀರಿ; ಶಕ್ತಿಗೆ ಮೀರಿ; ತಲುಪಲು ಯಾ ಸಾಧಿಸಲು ಆಗದ.
  2. out of reach = padagucaCx\((೧)\).
  3. within one’s reach ಒಬ್ಬನ ಎಟುಕಿನಲ್ಲಿ; ಶಕ್ತಿಗೊಳಪಟ್ಟು; ಶಕ್ತಿಯ ನಿಲುಕಿಗೊಳಪಟ್ಟು.