See also 1reach
2reach ರೀಚ್‍
ನಾಮವಾಚಕ
  1. (ಕೈ ಮೊದಲಾದವನ್ನು) ಚಾಚುವುದು; ನೀಡುವುದು; ಪ್ರಸರಣ.
  2. ಕೈ ದೂರ; (ಕೈ ಮೊದಲಾದವನ್ನು) ಚಾಚುವಷ್ಟು, ನೀಡುವಷ್ಟುದೂರ; ಕೈ – ಎಟುಕು, ನಿಲುಕು: within reach of one’s hand ಕೈ ದೂರದಲ್ಲಿ; ಕೈನಿಲುಕಿನಲ್ಲಿ; ಕೈಗೆ ಎಟುಕುವಷ್ಟು ದೂರದಲ್ಲಿ.
  3. (ಶಕ್ತಿ, ಸಾಮರ್ಥ್ಯ, ಪ್ರಭಾವ, ಕಾರ್ಯ ಮೊದಲಾದವುಗಳ) ನಿಲುಕು; ಅಳವು; ಹರವು; ವ್ಯಾಪ್ತಿ; ಪರಿಮಿತಿ: within easy reach of the railway ರೈಲುಪ್ರಯಾಣಕ್ಕೆ ಸುಲಭವಾಗಿ ನಿಲುಕುವಷ್ಟರಲ್ಲಿ.
  4. ಎಡೆಬಿಡದ ಹರವು; ಉದ್ದಕ್ಕೂ ಇರುವ ಒಂದೇ ಸಮನಾದ ಹರವು; ಅವಿಚ್ಛಿನ್ನ ವಿಸ್ತಾರ; ನಿರಂತರ ವಿಸ್ತಾರ; ಮುಖ್ಯವಾಗಿ ನದಿಯ ಎರಡು ತಿರುವುಗಳ ಯಾ ಕಾಲುವೆಯ ಎರಡು ಮಟ್ಟಗಳ ನಡುವಣ ಅವಿಚ್ಛಿನ್ನ ಅಂತರ: the reach of the river ಹೊಳೆಯ ಎಡೆಬಿಡದ ಹರವು.
  5. (ನೌಕಾಯಾನ)
    1. ಹಾಯಿಯ ಮೂಲೆಹಗ್ಗದ ಉದ್ದ.
    2. ಯಾನದೂರ; ತಲುಪಲು ಯಾನ ಮಾಡಿದ ದೂರ.
ಪದಗುಚ್ಛ
  1. beyond one’s reach ಎಟುಕಿನಾಚೆ; ತಲುಪಲು ಯಾ ಸಾಧಿಸಲು ಆಗುವಂತಹ ಶಕ್ತಿಯ ನಿಲುಕಿಗೆ ಮೀರಿ; ಶಕ್ತಿಗೆ ಮೀರಿ; ತಲುಪಲು ಯಾ ಸಾಧಿಸಲು ಆಗದ.
  2. out of reach = padagucaCx\((೧)\).
  3. within one’s reach ಒಬ್ಬನ ಎಟುಕಿನಲ್ಲಿ; ಶಕ್ತಿಗೊಳಪಟ್ಟು; ಶಕ್ತಿಯ ನಿಲುಕಿಗೊಳಪಟ್ಟು.