See also 2ray  3ray  4ray
1ray ರೇ
ನಾಮವಾಚಕ
  1. ಕಿರಣ; ರಶ್ಮಿ; ಕದಿರು (ಗ್ರಾಂ).
  2. ಕಿರಣ; ರಶ್ಮಿ:
    1. ಚಿಕ್ಕ ಯಾ ದೂರದ ಬೆಳಕಿನ ಆಕರದಿಂದ ಬರುತ್ತಿರುವ ಗೆರೆ ಯಾ ದೂಲದಂಥ ಬೆಳಕು.
    2. ನಿರ್ದಿಷ್ಟ ಬಿಂದುವೊಂದನ್ನು ತಲುಪಲು ವಿಕಿರಣ ಅನುಸರಿಸುವ ಸರಳ ರೇಖಾಪಥ.
    3. (ನಿರ್ದಿಷ್ಟ ಬಗೆಯ) ವಿಕಿರಣ: alpha ray ಆಲ್ಫ ಕಿರಣ.
    4. ತ್ರಿಜ್ಯೀಯವಾಗಿ ಸಾಗುತ್ತಿರುವ ಗೆರೆಗಳಲ್ಲೊಂದು.
    5. ಬಿಂದುವೊಂದರ ಮೂಲಕ ಹಾದುಹೋಗುವ ಸರಳ ರೇಖೆಗಳಲ್ಲಿ ಒಂದು.
    6. ಸಂಯುಕ್ತ ಪುಷ್ಪವೊಂದರ ಅಂಚು.
    7. ನಕ್ಷತ್ರ ಮೀನಿನ ತ್ರಿಜ್ಯೀಯ ವಿಭಾಗಗಳಲ್ಲೊಂದು.
    8. ಮೀನಿನ ಈಜುರೆಕ್ಕೆಗೆ ಆಧಾರವಾಗಿರುವ ಮೂಳೆಗಳಲ್ಲೊಂದು.
  3. (ರೂಪಕವಾಗಿ) (ಆಶೆ, ಸತ್ಯಾಂಶ ಮೊದಲಾದವುಗಳ) ಸೂಚನೆ; ಕಿರಣ: not a ray of hope ಆಶಾಕಿರಣವೂ ಇಲ್ಲ. not a ray of truth ಸತ್ಯಾಂಶದ ಸೂಚನೆಯೂ ಇಲ್ಲ.
See also 1ray  3ray  4ray
2ray ರೇ
ಸಕರ್ಮಕ ಕ್ರಿಯಾಪದ
  1. (ಬೆಳಕು ಮೊದಲಾದವುಗಳ ವಿಷಯದಲ್ಲಿ ಯಾ ಆಶೆ ಮೊದಲಾದವುಗಳ ವಿಷಯದಲ್ಲಿ) ಹೊರಹೊಮ್ಮಿಸು; ಹೊರಚೆಲ್ಲು; ಹೊರಸೂಸು.
  2. (ಪ್ರಕಾಶ ಮೊದಲಾದವುಗಳನ್ನು ಯಾ ಆಶೆ ಮೊದಲಾದವನ್ನು) ಬೀರು; ಹರಡು; ಪ್ರಸರಿಸು.
ಅಕರ್ಮಕ ಕ್ರಿಯಾಪದ
  1. (ಬೆಳಕು ಮೊದಲಾದವುಗಳ ವಿಷಯದಲ್ಲಿ) ರೂಪಕವಾಗಿವಾಗಿ ಆಲೋಚನೆ, ಆಶೆ, (ಮೊದಲಾದವುಗಳ ವಿಷಯದಲ್ಲಿ) ಹೊರ ಹೊಮ್ಮು; ಹೊರಸೂಸು; ಹೊರಚೆಲ್ಲು.
  2. (ಪ್ರಕಾಶ ಮೊದಲಾದವುಗಳ ವಿಷಯದಲ್ಲಿ) ಯಾ ಆಶೆ (ಮೊದಲಾದವುಗಳ ವಿಷಯದಲ್ಲಿ) ಬೀರು; ಹರಡು; ಪ್ರಸರಿಸು; ಕಿರಣಗಳಂತೆ ಹೊರಹೊಮ್ಮು.
See also 1ray  2ray  4ray
3ray ರೇ
ನಾಮವಾಚಕ

ರೇ ಮೀನು; ಷಾರ್ಕ್‍ ಜಾತಿಯ, ಅಗಲವಾದ ಚಪ್ಪಟೆ ಒಡಲುಳ್ಳ, ಬಟಾಯ್ಡೀಯ ಗಣಕ್ಕೆ ಸೇರಿದ, ಎದೆಭಾಗದಲ್ಲಿ ಈಜುರೆಕ್ಕೆಗಳೂ ಮತ್ತು ಆಹಾರವಾಗಿ ಬಳಸುವ, ಉದ್ದವೂ ಮೃದುವೂ ಆದ ಬಾಲ ಇರುವ, ಮೃದ್ವಸ್ಥಿಭರಿತ, ದೊಡ್ಡ ಕಡಲಮೀನು, ಮುಖ್ಯವಾಗಿ ಸ್ಕೇಟ್‍ಮೀನು.

See also 1ray  2ray  3ray
4ray ರೇ
ನಾಮವಾಚಕ

(ಸಂಗೀತ)

  1. ರೇ; (ಸ್ವರಗಳನ್ನು ಅಕ್ಷರಗಳಿಂದ ಸೂಚಿಸುವ ಪದ್ಧತಿಯಲ್ಲಿ) ಪ್ರಧಾನ ಸ್ವರಶ್ರೇಣಿಯಲ್ಲಿ ಎರಡನೇ ಸ್ವರ.
  2. ಡೋ ಸ್ವರಪದ್ಧತಿಯಲ್ಲಿ ಡೋಸ್ವರ.