See also 2ray  3ray  4ray
1ray ರೇ
ನಾಮವಾಚಕ
  1. ಕಿರಣ; ರಶ್ಮಿ; ಕದಿರು (ಗ್ರಾಂ).
  2. ಕಿರಣ; ರಶ್ಮಿ:
    1. ಚಿಕ್ಕ ಯಾ ದೂರದ ಬೆಳಕಿನ ಆಕರದಿಂದ ಬರುತ್ತಿರುವ ಗೆರೆ ಯಾ ದೂಲದಂಥ ಬೆಳಕು.
    2. ನಿರ್ದಿಷ್ಟ ಬಿಂದುವೊಂದನ್ನು ತಲುಪಲು ವಿಕಿರಣ ಅನುಸರಿಸುವ ಸರಳ ರೇಖಾಪಥ.
    3. (ನಿರ್ದಿಷ್ಟ ಬಗೆಯ) ವಿಕಿರಣ: alpha ray ಆಲ್ಫ ಕಿರಣ.
    4. ತ್ರಿಜ್ಯೀಯವಾಗಿ ಸಾಗುತ್ತಿರುವ ಗೆರೆಗಳಲ್ಲೊಂದು.
    5. ಬಿಂದುವೊಂದರ ಮೂಲಕ ಹಾದುಹೋಗುವ ಸರಳ ರೇಖೆಗಳಲ್ಲಿ ಒಂದು.
    6. ಸಂಯುಕ್ತ ಪುಷ್ಪವೊಂದರ ಅಂಚು.
    7. ನಕ್ಷತ್ರ ಮೀನಿನ ತ್ರಿಜ್ಯೀಯ ವಿಭಾಗಗಳಲ್ಲೊಂದು.
    8. ಮೀನಿನ ಈಜುರೆಕ್ಕೆಗೆ ಆಧಾರವಾಗಿರುವ ಮೂಳೆಗಳಲ್ಲೊಂದು.
  3. (ರೂಪಕವಾಗಿ) (ಆಶೆ, ಸತ್ಯಾಂಶ ಮೊದಲಾದವುಗಳ) ಸೂಚನೆ; ಕಿರಣ: not a ray of hope ಆಶಾಕಿರಣವೂ ಇಲ್ಲ. not a ray of truth ಸತ್ಯಾಂಶದ ಸೂಚನೆಯೂ ಇಲ್ಲ.