See also 2raven  3raven
1raven ರೇವ(ವ್‍)ನ್‍
ಗುಣವಾಚಕ

ಮಿರುಗುಕಪ್ಪಿನ; ಹೊಳಪುಗಪ್ಪಿನ: raven locks ಮಿರುಗುಕಪ್ಪಿನ ಕೇಶರಾಶಿ.

See also 1raven  3raven
2raven ರೇವ(ವ್‍)ನ್‍
ನಾಮವಾಚಕ

ಡೊಂಬಕಾಗೆ; ಮಿರು ಮಿರುಗುವ ಕಪ್ಪುನೀಲಿ ಬಣ್ಣದ ಗರಿಗಳುಳ್ಳ ಕರ್ಕಶವಾಗಿ ಕೂಗುವ, ಮುಖ್ಯವಾಗಿ ಮಾಂಸಾಹಾರಿಯಾದ, ಹಲವೊಮ್ಮೆ ಪಳಗಿಸಿ ಸಾಕುವ, ಅದರ ಕೂಗು ಅಪಶಕುನಸೂಚಕವೆಂಬ ನಂಬಿಕೆ ಜನ ಸಾಮಾನ್ಯರಲ್ಲಿರುವ, ಕಾರ್ವಸ್‍ ಕೋರ್ಯಾಕ್ಸ್‍ ಕುಲದ, ದೊಡ್ಡಕಾಗೆ ಜಾತಿ.

See also 1raven  2raven
3raven ರ್ಯಾವ(ವ್‍)ನ್‍
ಸಕರ್ಮಕ ಕ್ರಿಯಾಪದ

ಗಬಗಬನೆ ತಿನ್ನು; ಹೊಟ್ಟೆಬಾಕತನದಿಂದ ತಿನ್ನು( ಅಕರ್ಮಕ ಕ್ರಿಯಾಪದ ಸಹ).

ಅಕರ್ಮಕ ಕ್ರಿಯಾಪದ
  1. ಲೂಟಿ ಮಾಡು; ಕೊಳ್ಳೆ ಹೊಡೆ; ಸೂರೆ ಮಾಡು.
  2. ಬೇಟೆಯನ್ನು ಅರಸುತ್ತಾ ಯಾ ಲೂಟಿಯನ್ನು ಅರಸುತ್ತಾ ಯಾ ಲೂಟಿಯನ್ನು ಹುಡುಕುತ್ತಾ ಹೋಗು.
  3. ಲೂಟಿ ಮಾಡುತ್ತಾ ಹೋಗು.
  4. ಬೇಟೆ ಅರಸುತ್ತಾ ಸುತ್ತಾಡು.
  5. ಹುಚ್ಚುಹುಚ್ಚು ಹಸಿವಿರು; ಗಬಗಬನೆ ತಿನ್ನುವಷ್ಟು ಹಸಿದಿರು.
ಪದಗುಚ್ಛ
  1. raven about = 3raven \((3,4)\).
  2. raven after = 3raven\((2)\).