See also 2rattle
1rattle ರ್ಯಾಟ(ಟ್‍)ಲ್‍
ಸಕರ್ಮಕ ಕ್ರಿಯಾಪದ
  1. (ವಾಹನವನ್ನು) ಲಟಲಟನೆ ನಡೆಸು; ಲಟಲಟ ಶಬ್ದ ಮಾಡಿಸುತ್ತಾ ಓಡಿಸು: the cabman rattled off his cab ಕುದುರೆಗಾಡಿಯವನು ತನ್ನ ಗಾಡಿಯನ್ನು ಲಟಲಟನೆ ಓಡಿಸಿದ.
  2. (ಸರಪಣಿ, ಕಿಟಕಿ, ಗಾಜಿನ ಯಾ ಪಿಂಗಾಣಿಯ ಪಾತ್ರೆಗಳು ಮೊದಲಾದವನ್ನು ಯಾ ಯಾವುದನ್ನೇ ಕುಲುಕಿ) ಲಟಲಟ ಸದ್ದು ಮಾಡಿಸು: he rattled his chain ತನ್ನ ಸರಪಣಿಯನ್ನು ಅವನು ಲಟಲಟನೆ ಸದ್ದು ಮಾಡಿಸಿದ.
  3. (ಪದ್ಯ, ಕಥೆ, ಪ್ರಮಾಣವಚನ ಮೊದಲಾದವನ್ನು) ಬಡಬಡನೆ – ಹೇಳಿಬಿಡು, ಓದಿಬಿಡು, ಪಠಿಸಿಬಿಡು: he rattled off the list ಪಟ್ಟಿಯನ್ನವನು ಬಡಬಡನೆ ಓದಿಬಿಟ್ಟ. he rattled away the poem ಪದ್ಯವನ್ನವನು ಬಡಬಡನೆ ಪಠಿಸಿಬಿಟ್ಟ.
  4. (ಅಲಸಿಕೆಯಿಂದ) ಥಟ್ಟನೆ ಎಬ್ಬಿಸು; ಬಡಿದೆಬ್ಬಿಸು.
  5. (ಆಡುಮಾತು)
    1. ತಬ್ಬಿಬ್ಬುಗೊಳಿಸು; ಗಡಿಬಿಡಿಗೊಳಿಸು; ಬೆಪ್ಪಾಗಿಸು: the jeers of the mob rattled the speaker ದೊಂಬಿಯ ಲೇವಡಿಯು ಭಾಷಣಕಾರನನ್ನು ಬೆಪ್ಪಾಗಿಸಿತು.
    2. ಗಾಬರಿಗೊಳಿಸು; ಹೆದರಿಕೆ ಹುಟ್ಟಿಸು; ದಿಗಿಲುಬೀಳಿಸು: the spectral appearance rattled the lone traveller ಆ ಭೂತಾಕಾರವು ಒಂಟಿಯಾದ ಪ್ರಯಾಣಿಕನನ್ನು ಗಾಬರಿಗೊಳಿಸಿತು.
  6. ದಡಬಡನೆ ಎಬ್ಬಿಸಿ ಓಡಿಸಿಬಿಡು, ಅಟ್ಟಿಬಿಡು: he rattled the fox from the hole ನರಿಯನ್ನವನು ಅದರ ಬಿಲದಿಂದ ದಡಬಡನೆ ಓಡಿಸಿಬಿಟ್ಟ.
  7. ಸರಸರನೆ ಓಡಿಸು; ವೇಗವಾಗಿ ಹೋಗುವಂತೆ, ಚಲಿಸುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಲಟಲಟ ಸದ್ದಾಗು.
  2. (ಅಲೋಚನೆಯೇ ಇಲ್ಲದೆ, ಬರಿಯ ಉತ್ಸಾಹದಿಂದ) ಬಡಬಡಿಸು; ಬಡಬಡ ಮಾತನಾಡು: he rattled on (or along, away) ಅವನು ಒಂದೇ ಸಮನೆ ಬಡಬಡಿಸುತ್ತಲೇ ಇದ್ದ.
  3. ಸರಸರನೆ ಚಲಿಸು ಯಾ ಲಟಲಟನೆ ಬೀಳು: the broken timbers rattled down ಆ ಮುರಿದುಹೋದ ದಿಮ್ಮಿಗಳು ಲಟಲಟನೆ ಉರುಳಿಬಿದ್ದವು.
  4. ದಡಬಡನೆ
    1. ವಾಹನ ಓಡಿಸು.
    2. ಸವಾರಿ ಮಾಡು.
    3. ವೇಗವಾಗಿ ಓಡು.
ಪದಗುಚ್ಛ
  1. rattle the bill through the house ಮಸೂದೆಯನ್ನು ಶಾಸನಸಭೆಯಲ್ಲಿ ಕ್ಷಿಪ್ರವಾಗಿ ಸರಿಯುವಂತೆ ಮಾಡು.
  2. rattle the sabre ಯುದ್ಧದ ಬೆದರಿಕೆ ಹಾಕು; ಯುದ್ಧ ಹೂಡುವುದಾಗಿ ಹೆದರಿಸು; ಕತ್ತಿ ಝಳಪಿಸು.
  3. rattle up the anchor ಲಟಲಟನೆ ಲಂಗರೆತ್ತು.
See also 1rattle
2rattle ರ್ಯಾಟ(ಟ್‍)ಲ್‍
ನಾಮವಾಚಕ
  1. (ಹಿಂದೆ ಜನರಿಗೆ ಎಚ್ಚರಿಕೆ ಕೊಡುವ ಸಲುವಾಗಿ ಕಾವಲುಗಾರರು ಮೊದಲಾದವರು ಬಳಸುತ್ತಿದ್ದ) ರಟರಟಿಕೆ.
  2. (ಎಳೆ ಮಕ್ಕಳ ಆಟದ ಸಾಮಾನಾಗಿ ಬಳಸುವ) ಗಿಲಿಕೆ; ಗಿರಕಿ; ಗಿರಗಟ್ಟೆ.
  3. ಲಟಲಟಿಕೆ; ಬುಡುಬುಡುಕೆ ಹಾವು ಲಟಲಟಿಸಲು ಬಳಸುವ, ಅದರ ಬಾಲದಲ್ಲಿರುವ, ಕೊಂಬುದ್ರವ್ಯದಿಂದಾದ ಉಂಗುರಗಳ ಸಾಲು.
  4. ಲಟಲಟಿಕೆ ಗಿಡ; ಒಣಗಿದ ಕಾಯನ್ನು ಅಲ್ಲಾಡಿಸಿದರೆ ಬೀಜಗಳು ಲಟಲಟ, ಗಲಗಲ, ಸದ್ದು ಮಾಡುವ ವಿವಿಧ ಸಸ್ಯಜಾತಿ: red rattle ಕೆಂಪು ಲಟಲಟಿಕೆ ಗಿಡ.
  5. ಲಟಲಟ ಶಬ್ದ: the rattle of musketry ಕೋವಿಗಳ ಲಟಲಟ ಶಬ್ದ.
  6. ಸಂಭ್ರಮ; ಗದ್ದಲ; ಗಡಿಬಿಡಿ: there was a good deal of cheerfulness and rattle ಅಲ್ಲಿ ತುಂಬಾ ಉತ್ಸಾಹ ಸಂಭ್ರಮಗಳಿದ್ದವು.
  7. ಬರಿಯ ಹರಟೆ; ಲೊಡಲೊಡ: much rattle and little sense ಬೇಕಾದಷ್ಟು ಲೊಡಲೊಡ, ಅರ್ಥ ಸೊನ್ನೆ.
  8. (ಪ್ರಾಚೀನ ಪ್ರಯೋಗ) ಮಾತುಗುಳಿ; ಲೊಡಬಡಕ; ಬಾಯಾಳಿ; ಲೊಡಲೊಡ ಒಂದೇ ಸಮನೆ ಅರ್ಥಹೀನವಾಗಿ ಹರಟುತ್ತಲೇ ಇರುವವನು.
ಪದಗುಚ್ಛ

death rattle ಪ್ರಾಣ ಹೋಗುವ ಕಾಲದಲ್ಲಾಗುವ ಗಂಟಲಿನ ಗೊರಗೊರ.