See also 2rape  3rape  4rape  5rape
1rape ರೇಪ್‍
ಸಕರ್ಮಕ ಕ್ರಿಯಾಪದ
  1. (ಕಾವ್ಯಪ್ರಯೋಗ) (ಮುಖ್ಯವಾಗಿ ಹೆಂಗಸನ್ನು) ಬಲವಂತವಾಗಿ ಎತ್ತಿಕೊಂಡು, ಹೊಡೆದುಕೊಂಡು ಹೋಗು; ಬಲಾತ್ಕಾರದಿಂದ ಅಪಹರಿಸು.
  2. (ಹೆಂಗಸನ್ನು) ಅವಳ ಇಚ್ಛೆಗೆ ವಿರುದ್ಧವಾಗಿ ಸಂಭೋಗ ಮಾಡು, ಬಲಾತ್ಕಾರ ದಿಂದ ಕೆಡಿಸು, ಸಂಭೋಗಿಸು; ಅತ್ಯಾಚಾರ ಮಾಡು.
  3. (ದೇಶ ಮೊದಲಾದವನ್ನು) ಬಲಾತ್ಕಾರದಿಂದ ಆಕ್ರಮಿಸು; ದಾಳಿಮಾಡು; ಲೂಟಿಹೊಡೆ.
  4. (ಭೂಸಂಪತ್ತು ಮೊದಲಾದವನ್ನು) ಅತಿಯಾಗಿ ದುರುಪಯೋಗಪಡಿಸಿಕೊ; ಮಿತಿಮೀರಿ ಬಳಸು.
See also 1rape  3rape  4rape  5rape
2rape ರೇಪ್‍
ನಾಮವಾಚಕ
  1. (ಕಾವ್ಯಪ್ರಯೋಗ) (ಮುಖ್ಯವಾಗಿ ಹೆಂಗಸನ್ನು) ಬಲಾತ್ಕಾರದಿಂದ ಎತ್ತಿಕೊಂಡು, ಹೊಡೆದುಕೊಂಡು ಹೋಗುವುದು; ಬಲಾತ್ಕಾರದ ಅಪಹರಣ.
  2. (ಹೆಂಗಸನ್ನು) ಬಲಾತ್ಕಾರದಿಂದ ಸಂಭೋಗಿಸುವುದು; (ಹೆಂಗಸಿನ ಮೇಲೆ) ಅತ್ಯಾಚಾರ.
  3. (ರೂಪಕವಾಗಿ) (ದೇಶ ಮೊದಲಾದವುಗಳ ) ಬಲಾತ್ಕಾರದ – ಆಕ್ರಮಣ, ದಾಳಿ, ಲೂಟಿ: the rape of Austria ಆಸ್ಟ್ರಿಯಾ ಮೇಲೆ ಮಾಡಿದ ಬಲಾತ್ಕಾರದ ಆಕ್ರಮಣ.
  4. (ಭೂಸಂಪತ್ತು ಮೊದಲಾದವುಗಳ) ಅತಿಯಾದ ದುರುಪಯೋಗ: the rape of the earth ಭೂಮಿಯ ಸಂಪತ್ತಿನ ಅತಿಯಾದ ದುರುಪಯೋಗ.
  5. ಬಲವಂತವಾಗಿ ಪುಂಮೈಥುನ ಮಾಡುವುದು, ತಿಕ ಹೊಡೆಯುವುದು.
See also 1rape  2rape  4rape  5rape
3rape ರೇಪ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಇಂಗ್ಲೆಂಡಿನ ಸಸೆಕ್ಸ್‍ ಪ್ರದೇಶದ ಪ್ರಾಚೀನ ಆರು ವಿಭಾಗಗಳಲ್ಲಿ ಯಾವುದೇ ಒಂದು.

See also 1rape  2rape  3rape  5rape
4rape ರೇಪ್‍
ನಾಮವಾಚಕ

ರೇಪ್‍ ಗಿಡ; ಕುರಿಗಳ ಮೇವಿಗಾಗಿ ಯಾ ಎಣ್ಣೆಯ ಬೀಜಕ್ಕಾಗಿ ಬೆಳೆಸುವ ಒಂದು ಸಸ್ಯಜಾತಿ.

See also 1rape  2rape  3rape  4rape
5rape ರೇಪ್‍
ನಾಮವಾಚಕ

ರೇಪು:

  1. (ದ್ರಾಕ್ಷಾಮದ್ಯವನ್ನು ಮಾಡಿದ ಮೇಲೆ ಉಳಿಯುವ, ಮದ್ಯದ ಹುಳಿಯನ್ನು ತಯಾರಿಸಲು ಬಳಸುವ) ದ್ರಾಕ್ಷಿಯ ಸಿಪ್ಪೆ, ಚರಟ.
  2. ವಿನಿಗರನ್ನು ಯಾ ವೈನಿನ ಹುಳಿಯನ್ನು ಮಾಡುವಲ್ಲಿ ಬಳಸುವ ಪಾತ್ರೆ; ವಿನಿಗರ್‍ ಪಾತ್ರೆ.