See also 2rank  3rank
1rank ರ್ಯಾಂಕ್‍
ನಾಮವಾಚಕ
  1. (ಮುಖ್ಯವಾಗಿ ಕಾದು ನಿಂತಿರುವ ಬಾಡಿಗೆ ಗಾಡಿಗಳ ವಿಷಯದಲ್ಲಿ) ಸಾಲು; ಪಂಕ್ತಿ; ಕ್ಯೂ.
  2. (ಚದುರಂಗದ ಹಾಸಿನಲ್ಲಿ) ಚೌಕಗಳ ಅಡ್ಡ ಸಾಲು.
  3. (ಒಬ್ಬನ ಪಕ್ಕದಲ್ಲೊಬ್ಬನಂತೆ ನಿಲ್ಲಿಸಿದ) ಸೈನಿಕರ ಸಾಲು; ಸೈನಿಕ ಪಂಕ್ತಿ, ಶ್ರೇಣಿ: the ranks were broken (ಸೈನಿಕರ) ಸಾಲುಗಳು ಚೆದುರಿದವು, ಬೇರೆಬೇರೆಯಾದವು, ಒಡೆದು ಹೋದವು.
  4. ಕೂಟ; ವ್ಯವಸ್ಥೆ; ವ್ಯೂಹ; ಕ್ರಮಬದ್ಧವಾದ ಸಂಯೋಜನೆ.
    1. ಸಮಾಜದ ಬೇರೆ ಬೇರೆ ಮಟ್ಟದ ವರ್ಗ, ದರ್ಜೆ, ಅಂತಸ್ತು: people of all ranks (ಸಮಾಜದ) ಎಲ್ಲ ದರ್ಜೆಗಳವರೂ.
    2. ಉನ್ನತ ದರ್ಜೆ ಯಾ ಪದವಿ: persons of rank ಉನ್ನತ ದರ್ಜೆಯವರು.
  5. ಶ್ರೇಣಿಯಲ್ಲಿ (ಒಬ್ಬನ ಯಾ ಒಂದರ) ಸ್ಥಾನ.
  6. ಸಾಲು; ಪಂಕ್ತಿ; ಶ್ರೇಣಿ.
  7. (ಬ್ರಿಟಿಷ್‍ ಪ್ರಯೋಗ) ಟ್ಯಾಕ್ಸಿ ಸ್ಟ್ಯಾಂಡು; ಗಿರಾಕಿಗಳಿಗಾಗಿ ಟ್ಯಾಕ್ಸಿಗಳು ಕಾಯುವ ಸ್ಥಳ.
ಪದಗುಚ್ಛ
  1. break rank
    1. ಸಾಲಿನಿಂದ ಬೇರೆಯಾಗು, ಚೆದರು; ಸಾಲು ಯಾ ಪಂಕ್ತಿ ಯನ್ನು ಮುರಿ; ಅವುಗಳಲ್ಲಿ ನಿಲ್ಲದಿರು.
    2. ಒಗ್ಗಟ್ಟುಮುರಿ; ಐಕಮತ್ಯ ಭಂಗಮಾಡು.
  2. close ranks
    1. ಸಾಲಿನಲ್ಲಿ ಒತ್ತಾಗಿ ನಿಲ್ಲು, ಒತ್ತಾಗು.
    2. ಒಗ್ಗಟ್ಟಾಗು; ಐಕಮತ್ಯವನ್ನು ಸ್ಥಾಪಿಸು.
  3. keep rank ಸಾಲಿನಲ್ಲೇ ನಿಂತಿರು; ಸಾಲುಳಿಸು.
  4. other ranks ಸನ್ನದು ಅಧಿಕಾರಿಗಳಲ್ಲದ ಸೈನಿಕರು.
  5. rank and fashion ಉನ್ನತ ಸಮಾಜ; ಸಮಾಜದ ವರಿಷ್ಠ ದರ್ಜೆ, ವರ್ಗ.
  6. rank and file ಸಾಮಾನ್ಯಜನ; ಜನತೆ; ಶ್ರೀಸಾಮಾನ್ಯರು.
  7. rise from the ranks
    1. ಸಾಮಾನ್ಯ ಸಿಪಾಯಿಯ (ಎಂದರೆ ಸಾರ್ಜೆಂಟನ) ದರ್ಜೆಯಿಂದ ಸನ್ನದು (ಅಧಿಕಾರಿ) ಪದವಿಗೆ ಏರು.
    2. ಸ್ವಂತ ಯೋಗ್ಯತೆಯ ಫಲವಾಗಿ ಶ್ರೀಸಾಮನ್ಯದರ್ಜೆಯಿಂದ ಉನ್ನತ ಪದವಿಗೇರು.
  8. the pride of rank ದರ್ಜೆಸೊಕ್ಕು; ಸ್ಥಾನಗರ್ವ; ಅಂತಸ್ತಿನ ಹಮ್ಮು.
  9. the ranks (ಪ್ರವೇಟುಗಳು, ಕಾರ್ಪೊರಲ್‍ಗಳು ಮತ್ತು ಸಿಪಾಯಿಗಳನ್ನೊಳಗೊಂಡ, ಬೇಸನ್ನದು ಅಧಿಕಾರಿಗಳಿಗಿಂತ ಕೆಳದರ್ಜೆಗಳ) ಸಾಮಾನ್ಯ ಸೈನಿಕರು.
See also 1rank  3rank
2rank ರ್ಯಾಂಕ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಸೈನಿಕರನ್ನು) ಸಾಲಾಗಿ ನಿಲ್ಲಿಸು.
  2. (ಯಾವುದನ್ನೇ) ವರ್ಗೀಕರಿಸು; ನಿಷ್ಕೃಷ್ಟ ದರ್ಜೆಗೆ ಸೇರಿಸು.
  3. (ಅಮೆರಿಕನ್‍ ಪ್ರಯೋಗ) ದರ್ಜೆಗನುಗುಣವಾಗಿ (ಇನ್ನೊಬ್ಬನಿಗಿಂತ) ಆದ್ಯತೆ, ಅಗ್ರಸ್ಥಾನ ಪಡೆ.
ಅಕರ್ಮಕ ಕ್ರಿಯಾಪದ
  1. ಅದೇ ದರ್ಜೆಯಲ್ಲಿರುವ ಇತರರಿಗಿಂತ ಉನ್ನತಸ್ಥಾನ, ಮೇಲಿನ ಸ್ಥಾನ ಪಡೆದಿರು.
  2. (ಯಾವುದೇ) ದರ್ಜೆ ಯಾ ಸ್ಥಾನ ಹೊಂದಿರು; ದರ್ಜೆಗೆ ಸೇರಿರು: ranks among the Great powers ಬೃಹದ್ರಾಷ್ಟ್ರಗಳ ದರ್ಜೆಗೆ ಸೇರಿದೆ. ranks next to the king ರಾಜನಿಗೆ ಎರಡನೆಯ ಸ್ಥಾನ ಹೊಂದಿದ್ದಾನೆ.
  3. ದಿವಾಳಿಯ ಆಸ್ತಿಯನ್ನು ಮಾರಿ ಬಂದ ಹುಟ್ಟುವಳಿಯ ಹಂಚಿಕೆಯಲ್ಲಿ ಪಾಲು ಪಡೆಯಲು ಹಕ್ಕುಳ್ಳವರ ಪೈಕಿ ತನಗೆ ಸಲ್ಲುವ ಸ್ಥಾನ ಪಡೆದಿರು.
  4. (ಸೈನ್ಯ) ಸಾಲಿನಲ್ಲಿ ಸಮಹೆಜ್ಜೆ ಹಾಕುತ್ತಾ ನಡೆ.
See also 1rank  2rank
3rank ರ್ಯಾಂಕ್‍
ಗುಣವಾಚಕ
  1. ಹುಚ್ಚುಹುಚ್ಚಾಗಿ, ಕಾಡುಕಾಡಾಗಿ, ಪೊದರುಪೊದರಾಗಿ ಬೆಳೆದ; ಅಡ್ಡಾದಿಡ್ಡಿಯಾಗಿ, ಯದ್ವಾತದ್ವಾ ಹಬ್ಬಿದ: roses are growing rank ಗುಲಾಬಿಗಿಡಗಳು ಹುಚ್ಚು ಹುಚ್ಚಾಗಿ, ಪೊದರುಪೊದರಾಗಿ – ಬೆಳೆಯುತ್ತಿವೆ.
  2. ಜೊಂಡು, ಕಳ್ಳಿ, ಎಕ್ಕ, ಮೊದಲಾದ ಕಾಡುಗಿಡಗಳು, ಕಸಕಡ್ಡಿ, ಎಲೆ ತುಂಬಿಹೋಗಿರುವ; ಬರಿಯ ಕಳೆಯೇ ಇಡಿಕಿರಿದಿರುವ.
  3. ಗಬ್ಬುನಾತದ; ದುರ್ವಾಸನೆಯ: rank smell of the cigar ಚುಟ್ಟಾದ ಗಬ್ಬುನಾತ.
  4. ಅಶ್ಲೀಲ; ನೀತಿಗೆಟ್ಟ; ಅಸಹ್ಯಕರ: objected to his rank language ಅವನ ಅಶ್ಲೀಲವಾದ ಮಾತಿಗೆ ಆಕ್ಷೇಪಿಸಿದೆ.
  5. ಎದ್ದು ಕಾಣುವ; ಕಣ್ಣಿಗೆ ಹೊಡೆಯುವ; ಸಂದೇಹಕ್ಕೆಡೆಯೇ ಇಲ್ಲದ; ಅಸಂದಿಗ್ಧ; ಸುಸ್ಪಷ್ಟವಾದ: rank pedantry ಅಸಂದಿಗ್ಧವಾದ ಪಾಂಡಿತ್ಯಪ್ರದರ್ಶನ.
  6. ಘೋರ; ಉತ್ಕಟ; ಪರಮನೀಚ; ಹೇಯ: rank treason ಘೋರವಾದ ರಾಜದ್ರೋಹ ಯಾ ದೇಶದ್ರೋಹ.
  7. ಉಗ್ರ; ತೀವ್ರ; ಘೋರ: rank poison ಘೋರ, ಉಗ್ರ ವಿಷ.
  8. ಕೇವಲ; ಬರಿಯ; ತೀರ; ಸಂಪೂರ್ಣ; ಶುದ್ಧ; ಶುದ್ಧಾಂಗ: rank nonsense ಕೇವಲ ಅರ್ಥಶೂನ್ಯ; ಶುದ್ಧ ಅಸಂಬದ್ಧ ಪ್ರಲಾಪ.