See also 2rake  3rake  4rake  5rake
1rake ರೇಕ್‍
ನಾಮವಾಚಕ
    1. ಕುಂಟೆ; ಹಲುಬೆ; ಗೋರೆ; ಒಣಹುಲ್ಲು ಮೊದಲಾದವನ್ನು ಬಾಚಲು ಯಾ ಉತ್ತ ನೆಲವನ್ನೋ ಗರಸುಮಣ್ಣನ್ನೋ ಮಟ್ಟಸಗೊಳಿಸಲು ಬಳಸುವ, ಹ್‍ಇ\ರೆಅ ಹಲ್ಲುಮೂತಿಯ ಒಂದು ಸಲಕರಣೆ. Figure: rakes la
    2. ಗಾಲಿಗಳುಳ್ಳ – ಕುಂಟೆ, ಹಲುಬೆ, ಗೋರೆ.
  1. (ಜೂಜಾಟದ ಮೇಜಿನ ಮೇಲೆ ಆಟಗಾರರು ಇಟ್ಟ ಪಣದ ಹಣವನ್ನೆಲ್ಲ ಬಾಚಿಕೊಳ್ಳುವುದೇ ಮೊದಲಾದ ಕೆಲಸಗಳಿಗಾಗಿ ಬಳಸುವ) ಬಾಚುಕೋಲು; ಹಲುಬೆಯಾಕಾರದ ಸಲಕರಣೆ.
See also 1rake  3rake  4rake  5rake
2rake ರೇಕ್‍
ಸಕರ್ಮಕ ಕ್ರಿಯಾಪದ
  1. (ಹಲುಬೆಯಿಂದ ಯಾ ಹಲುಬೆಯಿಂದಲೋ ಎಂಬಂತೆ)
    1. ಬಾಚು; (ಬಾಚಿ) ಕೂಡಿಸು; ಗೋರು: rake up (or together) all possible charges ಸಾಧ್ಯವಿರುವ ಆಪಾದನೆಗಳನ್ನೆಲ್ಲ ಒಟ್ಟುಗೂಡಿಸಿ ಹೊರಿಸು.
    2. ಚಾಚಿಕೊ; ಗೋರಿಕೊ; ಒಟ್ಟುಗೂಡಿಸಿಕೊ: rake up all one’s earnings ತನ್ನ ಸಂಪಾದನೆಗಳನ್ನೆಲ್ಲ ಒಟ್ಟುಗೂಡಿಸಿಕೊ.
    3. ಬಾಚಿ ಹಾಕು; ಬಾಚಿ ತಳ್ಳು; (ಬಾಚಿ) ಚೊಕ್ಕಟ ಮಾಡು: rake out the fire ಬೆಂಕಿಯನ್ನು ಬಾಚಿಹಾಕು. rake off the leaves ಎಲೆಗಳನ್ನು ಬಾಚಿಹಾಕಿ ಚೊಕ್ಕಟಮಾಡು.
  2. (ಭೂಮಿಯನ್ನು) ಕುಂಟೆ ಹೊಡೆ; ಹರಗು.
  3. (ಬಾಚು ಕೋಲಿನಿಂದ ಮಾಡಿದಂತೆ) ಕೆದಕಿ ಹುಡುಕು; ಕೆದಕು; ಬುಡಮುಟ್ಟ ಶೋಧಿಸು, ಅನ್ವೇಷಿಸು: has raked up all history for proofs ರುಜುವಾತುಗಳಿಗಾಗಿ ಇತಿಹಾಸವನ್ನೆಲ್ಲ ಕೆದಕಿಬಿಟ್ಟಿದ್ದಾನೆ.
  4. ಕುಂಟೆಹೊಡೆದು ಮಟ್ಟಸಗೊಳಿಸು, ಚೊಕ್ಕಟಮಾಡು.
  5. ಹೆರೆ; ಕೆರೆ; ಹೆರೆದು, ಕೆರೆದು ಹಾಕು.
  6. (ಶತ್ರುಗಳ ಸಾಲನ್ನೆಲ್ಲ, ತುದಿಯಿಂದ ತುದಿಗೆ) ಗುಂಡಿನ ಸುರಿಮಳೆಗೆ ಗುರಿಮಾಡು.
  7. (ಹಡಗಿನ ಉದ್ದಕ್ಕೂ) ಗುಂಡಿನ ಸುರಿಮಳೆಗರೆ.
  8. (ಉದ್ದಕ್ಕೂ) ಕಣ್ಣು – ಹಾಯಿಸು, ಓಡಿಸು; ದೃಷ್ಟಿಹರಿಸು.
  9. (ಕಿಟಕಿ ಮೊದಲಾದವುಗಳ ವಿಷಯದಲ್ಲಿ) (ಸುತ್ತಮುತ್ತಲ ದೂರವ್ಯಾಪಿಯಾದ ನೋಟ ಕಾಣುವಂತಹ) ಮೇಲಿನ ಜಾಗದಲ್ಲಿರು; ಎತ್ತರದಲ್ಲಿರು.
ಅಕರ್ಮಕ ಕ್ರಿಯಾಪದ
  1. ಕುಂಟೆಹೊಡೆ.
  2. (ಬಾಚುಗೋಲಿನಿಂದ ಮಾಡಿದಂತೆ) ಕೆದಕು; ಹುಡುಕು; ಶೋಧಿಸು: have been raking among (or in or into) old records ಹಳೆಯ ದಾಖಲೆಗಳನ್ನು ಕೆದಕುತ್ತಿದ್ದೇನೆ.
ಪದಗುಚ್ಛ
  1. rake in (ಆಡುಮಾತು) (ಲಾಭ ಮೊದಲಾದವನ್ನು) ಗೋರಿ ಗುಡ್ಡೆ ಹಾಕು; ಕೂಡಿಹಾಕು; ಶೇಖರಿಸು.
  2. rake up (or over) (ಹಿಂದಿನ ಜಗಳ, ಅಳಲು ಮೊದಲಾದವನ್ನು) ಮತ್ತೆ – ಕೆದಕು, ಎಬ್ಬಿಸು, ನೆನಪಿಗೆ ತರು.
See also 1rake  2rake  4rake  5rake
3rake ರೇಕ್‍
ನಾಮವಾಚಕ
  1. ಲಂಪಟ; ಲಂಡ; ನಡತೆಗೆಟ್ಟವನು; ಸ್ವೈರತೆಯಿಂದ ನಿರ್ವೀರ್ಯನಾದವನು.
  2. ವ್ಯರ್ಥವಾಗಿ ಕಾಲಹರಣ ಮಾಡುವ(ವರಿಷ್ಠ ವರ್ಗದ) ಸ್ವೇಚ್ಛಾಚಾರಿ.
ಪದಗುಚ್ಛ

rake’s progress ಕ್ರಮವಾದ ಅವನತಿ; (ಮುಖ್ಯವಾಗಿ) ವಿಷಯಾಸಕ್ತಿಯಿಂದ ಕೆಡುವಿಕೆ; ಸ್ವೇಚ್ಛಾಚಾರದಿಂದ ಹಾಳಾಗುವಿಕೆ.

See also 1rake  2rake  3rake  5rake
4rake ರೇಕ್‍
ಸಕರ್ಮಕ ಕ್ರಿಯಾಪದ

ಹಿಂಬಾಗು ಕೊಡು; ಹಿಂಭಾಗಿಸು: rake the front forks of the bicycle ಬೈಸಿಕಲ್ಲಿನ ಮುಂಗವೆಗಳನ್ನು ಹಿಂಬಾಗಿಸು.

ಅಕರ್ಮಕ ಕ್ರಿಯಾಪದ
  1. (ಹಡಗಿನ ಯಾ ಹಡಗಿನ ಮುಂಗೋಟಿನ ಯಾ ಹಿಂಗೋಟಿನ ವಿಷಯದಲ್ಲಿ) ಮೇಲ್ತುದಿಯು ಊರೆ(ದಿಮ್ಮಿ)ಗಿಂತ ಮುಂಚಾಚಿರು.
  2. (ಕೂವೆಗಳ ಯಾ ಹೊಗೆಕೊಳವೆಗಳ ವಿಷಯದಲ್ಲಿ) ಹಿಂಗೋಟಿನ ಕಡೆಗೆ ಓಲಿರು, ಬಾಗಿರು.
  3. ಇಳಿಜಾರಾಗಿರು; ಬಾಗಿರು.
See also 1rake  2rake  3rake  4rake
5rake ರೇಕ್‍
ನಾಮವಾಚಕ
    1. (ಯಾವುದೇ ವಸ್ತುವು) ಓಲಿರುವ ಕೋನ; ಓಲು(ವೆ).
    2. ಓಲಿರುವ ಸ್ಥಿತಿ, ಆಕಾರ.
  1. (ನಾಟಕಮಂದಿರದ, ರಂಗಸ್ಥಳದ ಯಾ ಪ್ರೇಕ್ಷಕಾಂಗಣದ) ಓಲು(ವೆ); ಇಳಿಜಾರು; ಇಳುಕಲು.
  2. ಆಸನದ ಬೆನ್ನು ಮೊದಲಾದವುಗಳ ಬಾಗು, ವಾಟ.
  3. ಕತ್ತರಿಸುವ ಹತ್ಯಾರಿನ ಏಣಿನ ಯಾ ಮುಖದ ಕೋನ, ಬಾಗು.