See also 1rake  3rake  4rake  5rake
2rake ರೇಕ್‍
ಸಕರ್ಮಕ ಕ್ರಿಯಾಪದ
  1. (ಹಲುಬೆಯಿಂದ ಯಾ ಹಲುಬೆಯಿಂದಲೋ ಎಂಬಂತೆ)
    1. ಬಾಚು; (ಬಾಚಿ) ಕೂಡಿಸು; ಗೋರು: rake up (or together) all possible charges ಸಾಧ್ಯವಿರುವ ಆಪಾದನೆಗಳನ್ನೆಲ್ಲ ಒಟ್ಟುಗೂಡಿಸಿ ಹೊರಿಸು.
    2. ಚಾಚಿಕೊ; ಗೋರಿಕೊ; ಒಟ್ಟುಗೂಡಿಸಿಕೊ: rake up all one’s earnings ತನ್ನ ಸಂಪಾದನೆಗಳನ್ನೆಲ್ಲ ಒಟ್ಟುಗೂಡಿಸಿಕೊ.
    3. ಬಾಚಿ ಹಾಕು; ಬಾಚಿ ತಳ್ಳು; (ಬಾಚಿ) ಚೊಕ್ಕಟ ಮಾಡು: rake out the fire ಬೆಂಕಿಯನ್ನು ಬಾಚಿಹಾಕು. rake off the leaves ಎಲೆಗಳನ್ನು ಬಾಚಿಹಾಕಿ ಚೊಕ್ಕಟಮಾಡು.
  2. (ಭೂಮಿಯನ್ನು) ಕುಂಟೆ ಹೊಡೆ; ಹರಗು.
  3. (ಬಾಚು ಕೋಲಿನಿಂದ ಮಾಡಿದಂತೆ) ಕೆದಕಿ ಹುಡುಕು; ಕೆದಕು; ಬುಡಮುಟ್ಟ ಶೋಧಿಸು, ಅನ್ವೇಷಿಸು: has raked up all history for proofs ರುಜುವಾತುಗಳಿಗಾಗಿ ಇತಿಹಾಸವನ್ನೆಲ್ಲ ಕೆದಕಿಬಿಟ್ಟಿದ್ದಾನೆ.
  4. ಕುಂಟೆಹೊಡೆದು ಮಟ್ಟಸಗೊಳಿಸು, ಚೊಕ್ಕಟಮಾಡು.
  5. ಹೆರೆ; ಕೆರೆ; ಹೆರೆದು, ಕೆರೆದು ಹಾಕು.
  6. (ಶತ್ರುಗಳ ಸಾಲನ್ನೆಲ್ಲ, ತುದಿಯಿಂದ ತುದಿಗೆ) ಗುಂಡಿನ ಸುರಿಮಳೆಗೆ ಗುರಿಮಾಡು.
  7. (ಹಡಗಿನ ಉದ್ದಕ್ಕೂ) ಗುಂಡಿನ ಸುರಿಮಳೆಗರೆ.
  8. (ಉದ್ದಕ್ಕೂ) ಕಣ್ಣು – ಹಾಯಿಸು, ಓಡಿಸು; ದೃಷ್ಟಿಹರಿಸು.
  9. (ಕಿಟಕಿ ಮೊದಲಾದವುಗಳ ವಿಷಯದಲ್ಲಿ) (ಸುತ್ತಮುತ್ತಲ ದೂರವ್ಯಾಪಿಯಾದ ನೋಟ ಕಾಣುವಂತಹ) ಮೇಲಿನ ಜಾಗದಲ್ಲಿರು; ಎತ್ತರದಲ್ಲಿರು.
ಅಕರ್ಮಕ ಕ್ರಿಯಾಪದ
  1. ಕುಂಟೆಹೊಡೆ.
  2. (ಬಾಚುಗೋಲಿನಿಂದ ಮಾಡಿದಂತೆ) ಕೆದಕು; ಹುಡುಕು; ಶೋಧಿಸು: have been raking among (or in or into) old records ಹಳೆಯ ದಾಖಲೆಗಳನ್ನು ಕೆದಕುತ್ತಿದ್ದೇನೆ.
ಪದಗುಚ್ಛ
  1. rake in (ಆಡುಮಾತು) (ಲಾಭ ಮೊದಲಾದವನ್ನು) ಗೋರಿ ಗುಡ್ಡೆ ಹಾಕು; ಕೂಡಿಹಾಕು; ಶೇಖರಿಸು.
  2. rake up (or over) (ಹಿಂದಿನ ಜಗಳ, ಅಳಲು ಮೊದಲಾದವನ್ನು) ಮತ್ತೆ – ಕೆದಕು, ಎಬ್ಬಿಸು, ನೆನಪಿಗೆ ತರು.