See also 2raise
1raise ರೇಸ್‍
ಸಕರ್ಮಕ ಕ್ರಿಯಾಪದ
  1. (ಎತ್ತಿ) ನೇರವಾಗಿ ಇಡು ಯಾ ನೆಟ್ಟಗೆ ನಿಲ್ಲಿಸು.
  2. ಏಳುವಂತೆ ಯಾ ಎದ್ದು ನಿಲ್ಲುವಂತೆ ಮಾಡು; ಎಬ್ಬಿಸು ಯಾ ಎತ್ತಿ ನಿಲ್ಲಿಸು: raised him from his knees ಮಂಡಿಯೂರಿದ್ದವನನ್ನು ಎಬ್ಬಿಸಿದ.
  3. (ರೂಪಕವಾಗಿ) ಎತ್ತಿಹಿಡಿ; ಎಬ್ಬಿಸು: raised the standard of revolt ಬಂಡಾಯದ ಬಾವುಟವನ್ನು ಎತ್ತಿ ಹಿಡಿದ; (ರೂಪಕವಾಗಿ) ಬಂಡಾಯ ಎಬ್ಬಿಸಿದ.
  4. ಎಚ್ಚರಗೊಳಿಸು; ಜಾಗೃತಿಗೊಳಿಸು: raise one from the dead ಮೃತಾವಸ್ಥೆಯಿಂದ ಎಚ್ಚರಗೊಳಿಸು, ಸಜೀವಗೊಳಿಸು.
  5. ಜಾಗ್ರತಗೊಳಿಸು; ಹುರಿಗೊಳಿಸು. raise the country (ವಿಷಮ ಪರಿಸ್ಥಿತಿಯಲ್ಲಿ ಶತ್ರುಗಳನ್ನು ಯಾ ಅಪಾಯವನ್ನು ಎದುರಿಸಲು) ನಾಡನ್ನು ಹುರಿಗೊಳಿಸು, ಜಾಗ್ರತಗೊಳಿಸು.
  6. (ಉತ್ಸಾಹ, ಧೈರ್ಯ ಮೊದಲಾದವನ್ನು) ಏರಿಸು; ಹೆಚ್ಚಿಸು; ವರ್ಧಿಸು: the danger raised his spiritis ಆ ಅಪಾಯವು ಅವನ ಧೈರ್ಯೋತ್ಸಾಹಗಳನ್ನು ಏರಿಸಿತು.
  7. (ಕಟ್ಟಡ) ಕಟ್ಟು; ಎಬ್ಬಿಸು; ರಚಿಸು; ನಿರ್ಮಿಸು; ಸೃಷ್ಟಿಸು: raise a palace ಅರಮನೆಯನ್ನು ನಿರ್ಮಿಸು.
  8. (ಹೊಪ್ಪಳೆ ಮೊದಲಾದವನ್ನು) ಎಬ್ಬಿಸು; ಉಂಟುಮಾಡು: raise a blister ಹೊಪ್ಪಳೆ, ಗುಳ್ಳೆ ಎಬ್ಬಿಸು.
  9. (ವಾದವಿವಾದ ಮೊದಲಾದವನ್ನು)ಎಬ್ಬಿಸು; ಹುಟ್ಟಿಸು; ಸೃಷ್ಟಿಸು; ಹುಟ್ಟುಹಾಕು; ಹುಟ್ಟಲು ಕಾರಣವಾಗು: raise a controversy ವಾದವಿವಾದ ಎಬ್ಬಿಸು.
  10. (ಪಕ್ಷಪಾತ ಮೊದಲಾದವನ್ನು) ಹುಟ್ಟಿಸು; ಉಂಟುಮಾಡು: raise a prejudice ಪಕ್ಷಪಾತ ಹುಟ್ಟಿಸು.
  11. (ಪ್ರಶ್ನೆ ಮೊದಲಾದವನ್ನು) ಎತ್ತು; ಹಾಕು: raise a question ಪ್ರಶ್ನೆಎತ್ತು. raise an objection ಆಕ್ಷೇಪ ಎತ್ತು.
  12. (ಗಲಾಟೆ, ಬಿರುಗಾಳಿ ಮೊದಲಾದವನ್ನು) ಎಬ್ಬಿಸು: raise a shout ಕೂಗೆಬ್ಬಿಸು. raise a laugh ನಗೆ ಎಬ್ಬಿಸು.
  13. ಬೆಳೆ; ಬೆಳೆಸು: raise one’s own vegetables ತನ್ನ ತರಕಾರಿಯನ್ನು ತಾನೇ ಬೆಳೆದುಕೊ.
  14. ಪೋಷಿಸು; ಸಾಕು; ಪಾಲಿಸು: raise a large family ದೊಡ್ಡ ಕುಟುಂಬವನ್ನು ಸಾಕು.
  15. ದನಿ, ಸೊಲ್ಲು – ಎತ್ತು; ಮಾತನ್ನು ಆಡು, ಹೇಳು, ಉಚ್ಚರಿಸು: no one raised his voice ಒಬ್ಬನಾದರೂ ದನಿ ಎತ್ತಲಿಲ್ಲ, ಸೊಲ್ಲೆತ್ತಲಿಲ್ಲ.
  16. (ಪ್ರಾರ್ಥನೆ ಮೊದಲಾದವನ್ನು) ಪ್ರಾರಂಭಿಸು; ಶುರುಮಾಡು; ಮೊದಲುಮಾಡು; ಉಪಕ್ರಮಿಸು: raise a hymn ಪ್ರಾರ್ಥನಾ ಗೀತೆಯನ್ನು ಪ್ರಾರಂಭಿಸು.
  17. ಉದ್ಭವಿಸುವಂತೆ, ಹುಟ್ಟಿಬರುವಂತೆ ಮಾಡು; ಸೃಷ್ಟಿಸು: providence raised a deliverer among them ದೈವಸಂಕಲ್ಪವು ವಿಮೋಚಕನೊಬ್ಬ ಅವರಲ್ಲಿ ಹುಟ್ಟಿಬರುವಂತೆ ಮಾಡಿತು.
  18. (ಉನ್ನತ ಸ್ಥಾನ, ಪದವಿ, ಘನತೆ, ಮೊದಲಾದವಕ್ಕೆ) ಏರಿಸು: raised him to the see of York ಅವನನ್ನು ಆರ್ಚ್‍ ಬಿಷಪ್‍ ಆಹ್‍ ಯಾರ್ಕ್‍ ಪದವಿಗೆ ಏರಿಸಿದರು.
  19. (ಭೂಮಿಯಿಂದ ಅಗೆದು) ಎತ್ತು; ಮೇಲಕ್ಕೆ ತೆಗೆ: raised thousands of tons of coal ಸಾವಿರಾರು ಟನ್‍ ಕಲ್ಲಿದ್ದಲನ್ನು (ಭೂಮಿಯಿಂದ ಅಗೆದು) ಎತ್ತಿದರು.
  20. (ಒಬ್ಬನನ್ನು) ಮೇಲಿನ ಹುದ್ದೆಗೆ ಯಾ ದರ್ಜೆಗೆ ಏರಿಸು; (ಒಬ್ಬನಿಗೆ) ಬಡತಿ ಕೊಡು.
  21. (ವ್ಯಕ್ತಿ, ಜನಾಂಗ, ಭಾವಗಳು, ಶೈಲಿ ಮೊದಲಾದವನ್ನು) ಉನ್ನತಗೊಳಿಸು; ಉದಾತ್ತಗೊಳಿಸು: raised the degraded race ಅಧೋಗತಿಯಲ್ಲಿದ್ದ ಜನಾಂಗವನ್ನು ಉನ್ನತಿಗೊಳಿಸಿದ.
  22. (ಕಣ್ಣು ಮೊದಲಾದವನ್ನು) (ಮೇಲಕ್ಕೆ) ಎತ್ತು: raise one’s eyes ಕಣ್ಣುಗಳನ್ನು, ದೃಷ್ಟಿಯನ್ನು ಮೇಲೆತ್ತು.
  23. (ದನಿ) ಏರಿಸು.
  24. (ನೆಲವನ್ನು, ಬೇರೊಂದು ಹಡಗನ್ನು) ಕಾಣುವಂತೆ ಮಾಡು; ದೃಷ್ಟಿಪಥಕ್ಕೆ ಏರಿಸು; ಗೋಚರಗೊಳಿಸು.
  25. (ದರ, ಬೆಲೆ, ಮೊತ್ತ ಯಾ ಪ್ರಮಾಣವನ್ನು) ಏರಿಸು; ಹೆಚ್ಚಿಸು: raised the price of a loaf by a rupee ಒಂದು ಲೋಹ್‍ ಬ್ರೆಡ್ಡಿನ ಬೆಲೆಯನ್ನು ಒಂದು ರೂಪಾಯಿಯಷ್ಟು ಏರಿಸಿದರು. raised income tax from 20 to 30 percent ಆದಾಯ ತೆರಿಗೆಯ ದರವನ್ನು ಸೇಕಡ 20 ರಿಂದ 30ಕ್ಕೆ ಏರಿಸಿದರು.
  26. (ವ್ಯಕ್ತಿಯ ಯಾ ವಸ್ತುವಿನ) ಮಟ್ಟವನ್ನು ಏರಿಸು; (ವ್ಯಕ್ತಿಯನ್ನು) ಉದ್ಧರಿಸು; (ವಸ್ತುವನ್ನು) ಮೇಲಕ್ಕೆತ್ತು.
  27. (ತೆರಿಗೆ, ಚಂದಾ ಮೊದಲಾದವನ್ನು)
    1. ಎತ್ತು; ವಸೂಲ್ಮಾಡು.
    2. ಹಾಕು;ವಿಧಿಸು.
  28. (ಸಾಲ) ಎತ್ತು.
  29. (ನಿಧಿ ಮೊದಲಾದವನ್ನು) ಕೂಡಿಸು; ಸಂಗ್ರಹಿಸು: praise money ಹಣ ಕೂಡಿಸು.
  30. (ಸೈನ್ಯ, ವ್ಯಾಪಾರೀ ಹಡಗುಗಳ ಸಮುದಾಯ ಮೊದಲಾದವನ್ನು) ಕೂಡಿಸು; ಸಂಗ್ರಹಿಸು; ಜಮಾಯಿಸು: raise an army ಸೈನ್ಯ ಜಮಾಯಿಸು.
  31. (ಮುತ್ತಿಗೆಯನ್ನು, ವಾಣಿಜ್ಯ ದಿಗ್ಬಂಧನ ಮೊದಲಾದವನ್ನು)
    1. ಎತ್ತು; ತೆಗೆ; ತೆಗೆದುಹಾಕು.
    2. (ಎದುರಾಳಿಯು) ಎತ್ತುವಂತೆ, ತೆಗೆದುಹಾಕುವಂತೆ – ಮಾಡು; ತೆಗೆದುಹಾಕಿಸು.
  32. (ಅಮೆರಿಕನ್‍ ಪ್ರಯೋಗ) (ಸಾಮಾನ್ಯವಾಗಿ ಭೂತಕೃದಂತದಲ್ಲಿ ಬಳಕೆ) ಶಿಕ್ಷಣಕೊಡು; ವಿದ್ಯಾಭ್ಯಾಸ ಮಾಡಿಸು; ಶಿಕ್ಷಿತರನ್ನಾಗಿ ಮಾಡು.
  33. (ಗಣಿತ) ಏರಿಸು; ಯಾವುದೇ ಪರಿಮಾಣವನ್ನು ಹೆಸರಿಸಲಾದ ಘಾತಕ್ಕೆ ಏರಿಸು.
  34. (ಇಸ್ಪೀಟು)
    1. (ಇನ್ನೊಬ್ಬ ಆಟಗಾರನಿಗಿಂತ) ಹೆಚ್ಚು ಬಾಜಿ ಕಟ್ಟು.
    2. (ಬಾಜಿಯನ್ನು) ಹೆಚ್ಚಿಸು; ಏರಿಸು.
    3. (ಬ್ರಿಡ್ಜ್‍) (ಜೊತೆಯಾಟಗಾರನ ಹತ್ತಿರ ಇರುವುದಕ್ಕಿಂತ) ಅದೇ ರಂಗಿನ ಹೆಚ್ಚು ಪಟ್ಟುಗಳನ್ನು ಗಳಿಸುವುದಾಗಿ ಹೇಳು.
  35. (ಪ್ರೇತ ಮೊದಲಾದವನ್ನು) ಎಬ್ಬಿಸು; ಕಾಣಿಸಿಕೊಳ್ಳುವಂತೆ ಮಾಡು.
  36. (ಆಡುಮಾತು) (ಬೇಕಾದ ವ್ಯಕ್ತಿ ಮೊದಲಾದವರನ್ನು) ಪತ್ತೆಮಾಡು; ಕಂಡುಹಿಡಿ.
  37. (ವ್ಯಕ್ತಿ ಮೊದಲಾದವರೊಡನೆ) ರೇಡಿಯೋ ಯಾ ಟೆಲಿಹೋನಿನ ಮೂಲಕ ಸಂಪರ್ಕ ಕಲ್ಪಿಸು.
  38. (ಹಿಟ್ಟಿನ ಭಕ್ಷ್ಯ ಮೊದಲಾದವನ್ನು ಅಕ್ಕಪಕ್ಕದ ಆಧಾರವಿಲ್ಲದೆ) ನೆಟ್ಟಗೆ ನಿಲ್ಲುವಂತೆ ಮಾಡು.
  39. (ಬಟ್ಟೆಯ ಮೇಲೆ) ಜುಂಗೆಬ್ಬಿಸು.
ಪದಗುಚ್ಛ
  1. raise a dust
    1. ದೂಳೆಬ್ಬಿಸು.
    2. ದೂಳೆಬ್ಬಿಸು; ಗೊಂದಲಗೊಳಿಸು; ಸತ್ಯಾಂಶವನು ಮರೆಮಾಚು.
  2. raise a laugh ಇತರರನ್ನು ನಗಿಸು; ನಗೆಯೆಬ್ಬಿಸು.
  3. raise a person’s spirits ವ್ಯಕ್ತಿಯನ್ನು ಹುರಿಗೊಳಿಸು; ಒಬ್ಬ ವ್ಯಕ್ತಿಗೆ ಹೊಸ ಶಕ್ತಿ, ಚೈತನ್ಯ, ಧೈರ್ಯ, ಲವಲವಿಕೆ – ತುಂಬು, ಕೊಡು.
  4. raise a storm ಬಿರುಗಾಳಿ ಎಬ್ಬಿಸು; ಕೋಲಾಹಲ ಎಬ್ಬಿಸು.
  5. raise bread (ಹುದುಗು ಹಾಕಿ) ಬ್ರೆಡ್ಡನ್ನು ಉಬ್ಬಿಸು.
  6. raise cain.
  7. raise the devil (or hell, mischief, etc.) ಗಲಾಟೆ, ಗೊಂದಲ, ಕೋಲಾಹಲ ಎಬ್ಬಿಸು.
  8. raise colour (ರಂಗು ಹಾಕುವಲ್ಲಿ) ರೆಂಗೇರಿಸು; ರಂಗು ಹೆಚ್ಚಿಸು.
  9. raise from the dead ಜೀವ ಬರಿಸು; ಜೀವ ಮತ್ತೆ ತರು.
  10. raise one’s eyebrows.
  11. raise one’s glass to ಒಬ್ಬನ ಆರೋಗ್ಯ ಹಾರೈಸಿ ಶುಭಪಾನ ಮಾಡು.
  12. raise one’s hand to (ಒಬ್ಬ ವ್ಯಕ್ತಿಯನ್ನು) ಹೊಡೆಯುವಂತೆ ಕೈಯೆತ್ತು.
  13. raise one’s hat (ಅನೇಕವೇಳೆ to ಜೊತೆಗೆ) (ಗೌರವ ಸೂಚಿಸಲು) ಹ್ಯಾಟನ್ನು ತಲೆಯಿಂದೆತ್ತು.
  14. raise one’s reputation (ಒಬ್ಬನ) ಕೀರ್ತಿ ಹೆಚ್ಚಿಸು.
  15. raised pastry, pie, etc., (ಪಕ್ಕಗಳಲ್ಲಿ ತಟ್ಟೆಯ ಆಧಾರವಿಲ್ಲದೆ) ನೆಟ್ಟಗೆ ನಿಲ್ಲುವ ಹಿಟ್ಟಿನಿಂದ ಮಾಡಿದ ಯಾವುದೇ ಭಕ್ಷ್ಯ, ಕಡುಬು ಮೊದಲಾದದ್ದು.
  16. raise the wind (ಬ್ರಿಟಿಷ್‍ ಪ್ರಯೋಗ) ಯಾವುದೋ ಉದ್ದೇಶಕ್ಕಾಗಿ ಹಣ ಎತ್ತು, ಒದಗಿಸಿಕೊ.
  17. raise one’s eyes ಮೇಲೆ ನೋಡು.
  18. raise one’s voice ದನಿಯೆತ್ತು; ಗಟ್ಟಿಯಾಗಿ ಮಾತನಾಡು, ಹೇಳು.
See also 1raise
2raise ರೇಸ್‍
ನಾಮವಾಚಕ
  1. (ಸಂಬಳ ಮೊದಲಾದವುಗಳ) ಬಡತಿ; ಏರಿಕೆ; ಹೆಚ್ಚಳ.
  2. (ಪೋಕರ್‍ ಇಸ್ಪೀಟಾಟದಲ್ಲಿ) ಪಣದ ಏರಿಕೆ; ಬಾಜಿ ಹೆಚ್ಚಳ.
  3. (ಪೋಕರ್‍, ಬ್ರಿಡ್ಜ್‍ ಇಸ್ಪೀಟಾಟಗಳಲ್ಲಿ) ಸವಾಲೇರಿಕೆ; ಸವಾಲಿನ ಹೆಚ್ಚಳ.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಸಂಬಳದ ಹೆಚ್ಚಳ; ವೇತನಬಡತಿ.