See also 2raid
1raid ರೇಡ್‍
ನಾಮವಾಚಕ
  1. (ಹಿಂದೆ ರಾವುತರಿಂದ, ಈಗ ಸಮರನೌಕೆಗಳಿಂದ ಯಾ ವಿಮಾನಗಳಿಂದ ಆಗುವ) ಸೈನಿಕ ದಾಳಿ, ಆಕ್ರಮಣ.
  2. (ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ) ಲೂಟಿಯ ಯಾ ಅತಿಕ್ರಮಣದ ದಾಳಿ.
  3. (ಗುಮಾನಿಗೊಳಗಾದ ಸ್ಥಳದ ಯಾ ನಿಷಿದ್ಧ ವಸ್ತುಗಳ ಕೋಠಿಗಳ ಮೇಲೆ) ಪೋಲೀಸರ (ಯಾ ಬೇರೆ ಅಧಿಕಾರಿಗಳ) ಅನಿರೀಕ್ಷಿತ ದಾಳಿ.
  4. (ಸ್ಟಾಕ್‍ ಎಕ್ಸ್‍ಚೇಂಜ್‍) ಷೇರುಗಳನ್ನು ಸಾಮೂಹಿಕವಾಗಿ ಮಾರುವುದರ ಮೂಲಕ ಬೆಲೆಗಳನ್ನು ಇಳಿಸುವುದು.
  5. (ಒಬ್ಬ ವ್ಯಕ್ತಿ ಯಾ ವಸ್ತು ಯಾವುದನ್ನೋ ಒದಗಿಸುವಂತೆ) ಬಲವಂತವಾಗಿ ಯಾ ತಗಾದೆಮಾಡಿ ಒತ್ತಾಯಿಸುವುದು.
See also 1raid
2raid ರೇಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಮೇಲೆ) ದಾಳಿ ಮಾಡು; ಎರಗು; ಆಕ್ರಮಣ ನಡೆಸು.
  2. (ತನ್ನ ದಲ್ಲದ ಸ್ಥಳ, ದನ ಮೊದಲಾದವುಗಳನ್ನು) ಅತಿಕ್ರಮಿಸು; ಆಕ್ರಮಿಸಿಕೊ; ಹಿಡಿದು ವಶಪಡಿಸಿಕೊ.
  3. ಲೂಟಿಮಾಡು; ಕೊಳ್ಳೆಹೊಡೆ.