See also 2raid
1raid ರೇಡ್‍
ನಾಮವಾಚಕ
  1. (ಹಿಂದೆ ರಾವುತರಿಂದ, ಈಗ ಸಮರನೌಕೆಗಳಿಂದ ಯಾ ವಿಮಾನಗಳಿಂದ ಆಗುವ) ಸೈನಿಕ ದಾಳಿ, ಆಕ್ರಮಣ.
  2. (ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ) ಲೂಟಿಯ ಯಾ ಅತಿಕ್ರಮಣದ ದಾಳಿ.
  3. (ಗುಮಾನಿಗೊಳಗಾದ ಸ್ಥಳದ ಯಾ ನಿಷಿದ್ಧ ವಸ್ತುಗಳ ಕೋಠಿಗಳ ಮೇಲೆ) ಪೋಲೀಸರ (ಯಾ ಬೇರೆ ಅಧಿಕಾರಿಗಳ) ಅನಿರೀಕ್ಷಿತ ದಾಳಿ.
  4. (ಸ್ಟಾಕ್‍ ಎಕ್ಸ್‍ಚೇಂಜ್‍) ಷೇರುಗಳನ್ನು ಸಾಮೂಹಿಕವಾಗಿ ಮಾರುವುದರ ಮೂಲಕ ಬೆಲೆಗಳನ್ನು ಇಳಿಸುವುದು.
  5. (ಒಬ್ಬ ವ್ಯಕ್ತಿ ಯಾ ವಸ್ತು ಯಾವುದನ್ನೋ ಒದಗಿಸುವಂತೆ) ಬಲವಂತವಾಗಿ ಯಾ ತಗಾದೆಮಾಡಿ ಒತ್ತಾಯಿಸುವುದು.