See also 2rag  3rag  4rag  5rag  6rag
1rag ರ್ಯಾಗ್‍
ನಾಮವಾಚಕ
  1. (ಬಹುಕಾಲ ಬಳಕೆಯಿಂದ ಸವೆದು, ಎಳೆಬಿಟ್ಟುಕೊಂಡು, ಜಾಳುಜಾಳಾಗಿ ಹರಿದ) ಚಿಂದಿ; ಜೂಲು (ಬಟ್ಟೆ).
  2. (ಬಹುವಚನದಲ್ಲಿ) ಚಿಂದಿಚಿಂದಿಯಾದ ಯಾ ಹಳೆಯ ಉಡುಪು.
  3. ಚಿಂದಿ; ಚೂರುಬಟ್ಟೆ; ಚೂರಾದ ಬಟ್ಟೆ ಯಾ ಹಾಯಿಪಟ (ಸಾಮಾನ್ಯವಾಗಿ ನಿಷೇಧಾರ್ಥದಲ್ಲಿ): not a rag to cover him ಅವನ ಮೈಯನ್ನು ಮುಚ್ಚಲು ಒಂದು ಚಿಂದಿ ಸಹ ಇಲ್ಲ. spread every rag of sail ಹಾಯಿಪಟದ ಒಂದೊಂದು ಚೂರನ್ನೂ (ಬಿಡದೆ) ಹರಡು.
  4. (ಸಮುದಾಯವಾಚಕವಾಗಿ) (ಕಾಗದ ತಯಾರಿಕೆ, ಮೆತ್ತೆಭರತಿ, ಮೊದಲಾದವಕ್ಕೆ ಬಳಸುವ) ಚಿಂದಿಪಂದಿ; ಚಿಂದಿರಾಶಿ.
  5. ಹರುಕುಮುರುಕು; ಆಕಾರಗೆಟ್ಟ ಚೂರು ಪಾರು; ಚುಕ್ಕಚೂರು: flying rags of cloud ಹಾರಿಹೋಗುತ್ತಿರುವ ಮೋಡದ ಹರುಕು ಮುರುಕುಗಳು. not a rag of evidence ಹರುಕುಮುರುಕು ಸಾಕ್ಷ್ಯ ಸಹ ಇಲ್ಲ; ಒಂದು ಚೂರು ಸಾಕ್ಷ್ಯವೂ ಇಲ್ಲ.
  6. (ಹೀನಾರ್ಥಕ ಪ್ರಯೋಗ)
    1. ಬಾವುಟ, ಕರವಸ್ತ್ರ, ತೆರೆ ಮೊದಲಾದವು.
    2. ವೃತ್ತಪತ್ರಿಕೆ.
  7. (ಮುಖ್ಯವಾಗಿ ಲೋಹದ) ಮುಂಚಾಚಿದ ಕೋಚು ಕೋಚು.
ಪದಗುಚ್ಛ
  1. cooked to rags ಚೂರುಚೂರಾಗಿ ಉದುರಿಹೋಗುವಷ್ಟು ಬೆಂದುಹೋದ.
  2. glad rags (ಆಡುಮಾತು) ಅತ್ಯುತ್ತಮ ಉಡುಪು; ಸಂಜೆ ದಿರಿಸು.
  3. in rags
    1. ಚಿಂದಿಚಿಂದಿಯಾಗಿ; ಜೂಲುಜೂಲಾಗಿ.
    2. ಚಿಂದಿಚಿಂದಿಯಾದ ಉಡುಪಿನಲ್ಲಿ.
  4. rag-and-bone man (ಬ್ರಿಟಿಷ್‍ ಪ್ರಯೋಗ) ಹಳೆ ಬಟ್ಟೆ, ಪೀಠೋಪಕರಣಗಳು, ಮೊದಲಾದವುಗಳನ್ನು ಮಾರುವ ತಿರುಗು ವ್ಯಾಪಾರಿ.
  5. rags to riches ಬಡತನದಿಂದ ಸಿರಿತನಕ್ಕೆ; ಚಿಂದಿಯಿಂದ ಸಿರಿಗೆ.
See also 1rag  3rag  4rag  5rag  6rag
2rag ರ್ಯಾಗ್‍
ನಾಮವಾಚಕ
  1. (ಚಾವಣಿಗೆ ಹೊದಿಸಲು ಬಳಸುವ, ಒರಟಾದ) ಸ್ಲೇಟುಕಲ್ಲಿನ ದೊಡ್ಡ ಹಲಗೆ.
  2. (ಬ್ರಿಟಿಷ್‍ ಪ್ರಯೋಗ) ದಪ್ಪದಪ್ಪ ಚಪ್ಪಡಿಗಳಾಗಿ ಬಿರಿಯುವ (ಬ್ರಿಟನ್ನಿನ ಬೇರೆ ಬೇರೆ ಪ್ರದೇಶಗಳಲ್ಲಿ ದೊರೆಯುವ) ವಿವಿಧ ಕಲ್ಲುಜಾತಿ.
See also 1rag  2rag  4rag  5rag  6rag
3rag ರ್ಯಾಗ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ragged; ವರ್ತಮಾನ ಕೃದಂತ ragging).
ಸಕರ್ಮಕ ಕ್ರಿಯಾಪದ
  1. ಬಯ್ಯು; ನಿಂದಿಸು; ಛೀಮಾರಿ ಮಾಡು, ಹಾಕು; ಕಟುವಾಗಿ ಟೀಕಿಸು, ಆಕ್ಷೇಪಿಸು.
  2. ಗೋಳು ಹುಯ್ಯು; ಕಾಡು; ಪೀಡಿಸು.
  3. ನಯಗಾಂಭೀರ್ಯಗಳಿಲ್ಲದ ಕುಚೇಷ್ಟೆ ಮಾಡು; ಒರಟುಹಾಸ್ಯ ಮಾಡು.
  4. ಕುಚೇಷ್ಟೆಗಾಗಿ (ಒಬ್ಬನ ಕೊಠಡಿ ಮೊದಲಾದವನ್ನು) ಅಸ್ತವ್ಯಸ್ತಗೊಳಿಸು.
ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ಕುಚೇಷ್ಟೆಯಲ್ಲಿ, ಪುಂಡಾಟದಲ್ಲಿ – ನಿರತನಾಗಿರು, ತೊಡಗಿರು; ಕಿರಿಚಾಟ, ಗಲಭೆಗಳಲ್ಲಿ ತೊಡಗಿರು.

See also 1rag  2rag  3rag  5rag  6rag
4rag ರ್ಯಾಗ್‍
ನಾಮವಾಚಕ

(ಅಶಿಷ್ಟ) (ಬ್ರಿಟಿಷ್‍ ಪ್ರಯೋಗ)

  1. ನಿಧಿಸಂಗ್ರಹ ಕಾರ್ಯಕ್ರಮ; ಹಣವೆತ್ತಲು ವಿದ್ಯಾರ್ಥಿಗಳು ಏರ್ಪಡಿಸುವ ಸಾಹಸ ಕಾರ್ಯ, ಮೆರವಣಿಗೆ ಮತ್ತು ಮನರಂಜನೆ ಕಾರ್ಯಕ್ರಮ.
  2. (ಆಡುಮಾತು) ಕುಚೇಷ್ಟೆ; ಕೀಟಲೆ; ಕಿತಾಪತಿ.
  3. ಪುಂಡಾಟ; ಗಲಭೆ; ಗದ್ದಲ; ಕೋಲಾಹಲ.
  4. ಪುಂಡಾಟದ, ಗಲಭೆಯ ಸ್ಥಳ.
See also 1rag  2rag  3rag  4rag  6rag
5rag ರ್ಯಾಗ್‍
ನಾಮವಾಚಕ

(ಸಂಗೀತ) ವಿಷಮತಾಳದ ಕೃತಿ ಯಾ ರಾಗ.

See also 1rag  2rag  3rag  4rag  5rag
6rag ರಾಗ್‍
ನಾಮವಾಚಕ

= raga.