See also 2raft  3raft
1raft ರಾಹ್ಟ್‍
ನಾಮವಾಚಕ
  1. ತೇಲೊಡ್ಡು; ತೇಲೊಟ್ಟಿಲು; ಸಾಗಣೆಗಾಗಿ ದಿಮ್ಮಿಗಳು, ಪೀಪಾಯಿಗಳು ಮೊದಲಾದವನ್ನು ಜೋಡಿಸಿ ಕಟ್ಟಿ ನೀರಿನ ಮೇಲೆ ಹರಿಯಬಿಟ್ಟ ರಾಶಿ.
  2. ತೆಪ್ಪ; ಉಡುಪ; (ಮುಖ್ಯವಾಗಿ ಅನಿರೀಕ್ಷಿತವಾದ ಅಪಾಯ ಒದಗಿದಾಗ ದೋಣಿಯ ಬದಲು ಜನ ಯಾ ಸರಕುಗಳನ್ನು ಸಾಗಿಸಲು ಬಳಸುವ ದಿಮ್ಮಿಗಳು, ಬೊಂಬುಗಳು ಮೊದಲಾದವುಗಳಿಂದ ಕಟ್ಟಿದ) ಕಟ್ಟುಮರ.
  3. ತೇಲುರಾಶಿ; ಪ್ರವಾಹದ ಮೇಲೆ ಒಟ್ಟಾಗಿ ಸೇರಿ ತೇಲುತ್ತಿರುವ ಮರಗಳು, ಹಿಮಗಡ್ಡೆಗಳು, ಮೊದಲಾದವುಗಳ ರಾಶಿ.
See also 1raft  3raft
2raft ರಾಹ್ಟ್‍
ಸಕರ್ಮಕ ಕ್ರಿಯಾಪದ
  1. ತೆಪ್ಪದ ಮೇಲೆ ಯಾ ಅದರ ಮೇಲೆ ಹೇಗೋ ಹಾಗೆ – ಸಾಗಿಸು.
  2. (ದಿಮ್ಮಿಗಳು ಮೊದಲಾದವನ್ನು ಸೇರಿಸಿ) ತೆಪ್ಪಕಟ್ಟು.
  3. ತೆಪ್ಪದಲ್ಲಿ (ನೀರನ್ನು) ಹಾಯು, ದಾಟು.
ಅಕರ್ಮಕ ಕ್ರಿಯಾಪದ

ತೆಪ್ಪ ನಡೆಸು.

See also 1raft  2raft
3raft ರಾಹ್ಟ್‍
ನಾಮವಾಚಕ

(ಆಡುಮಾತು)

  1. ಭಾರಿ ಸಂಗ್ರಹ.
  2. ಗುಂಪು; ಜನಸಂದಣಿ; ನೆರವಿ.