See also 2raft  3raft
1raft ರಾಹ್ಟ್‍
ನಾಮವಾಚಕ
  1. ತೇಲೊಡ್ಡು; ತೇಲೊಟ್ಟಿಲು; ಸಾಗಣೆಗಾಗಿ ದಿಮ್ಮಿಗಳು, ಪೀಪಾಯಿಗಳು ಮೊದಲಾದವನ್ನು ಜೋಡಿಸಿ ಕಟ್ಟಿ ನೀರಿನ ಮೇಲೆ ಹರಿಯಬಿಟ್ಟ ರಾಶಿ.
  2. ತೆಪ್ಪ; ಉಡುಪ; (ಮುಖ್ಯವಾಗಿ ಅನಿರೀಕ್ಷಿತವಾದ ಅಪಾಯ ಒದಗಿದಾಗ ದೋಣಿಯ ಬದಲು ಜನ ಯಾ ಸರಕುಗಳನ್ನು ಸಾಗಿಸಲು ಬಳಸುವ ದಿಮ್ಮಿಗಳು, ಬೊಂಬುಗಳು ಮೊದಲಾದವುಗಳಿಂದ ಕಟ್ಟಿದ) ಕಟ್ಟುಮರ.
  3. ತೇಲುರಾಶಿ; ಪ್ರವಾಹದ ಮೇಲೆ ಒಟ್ಟಾಗಿ ಸೇರಿ ತೇಲುತ್ತಿರುವ ಮರಗಳು, ಹಿಮಗಡ್ಡೆಗಳು, ಮೊದಲಾದವುಗಳ ರಾಶಿ.