See also 2radius
1radius ರೇಡಿಅಸ್‍
ನಾಮವಾಚಕ
(ಬಹುವಚನ radii ಉಚ್ಚಾರಣೆ ರೇಡಿಐ, ಯಾ radiuses).
  1. (ಗಣಿತ) ತ್ರಿಜ್ಯ:
    1. ವರ್ತುಲದ ಕೆಂದ್ರವನ್ನು ಪರಿಧಿಯ ಮೇಲಿನ ಯಾವುದೇ ಬಿಂದುವಿಗೆ ಸೇರಿಸುವ ರೇಖೆ. Figure: radius-1
    2. ವಕ್ರ ಒಂದರ ನಾಭಿಯನ್ನು ವಕ್ರದ ಮೇಲಿನ ಯಾವುದೇ ಬಿಂದುವಿಗೆ ಸೇರಿಸುವ ರೇಖೆ.
  2. (ಗಣಿತ) ವರ್ತುಲದ ತ್ರಿಜ್ಯದ ಉದ್ದ.
  3. ತ್ರಿಜ್ಯ; ಯಾವುದೇ ಒಂದರ ವ್ಯಾಪ್ತಿಯನ್ನು ಸೂಚಿಸಬೇಕಾದಾಗ ದತ್ತ ಬಿಂದುವಿನಿಂದ ಎಷ್ಟು ದೂರದವರೆಗೆ ಅದು ಇದೆ ಎಂದು ಹೇಳುವ ನಿರ್ದಿಷ್ಟ ದೂರ: within a radius of 10 km ಹತ್ತು ಕಿಮೀ. ತ್ರಿಜ್ಯದ, ದೂರದ ಒಳಗೆ.
  4. (ಅಂಗರಚನಾಶಾಸ್ತ್ರ) ರೇಡಿಯಸ್‍:
    1. ಮನುಷ್ಯನ ಮುಂದೋಳಿನಲ್ಲಿರುವ ಎರಡು ಮೂಳೆಗಳ ಪೈಕಿ ಕಡಮೆ ಉದ್ದದ ದಪ್ಪ ಮೂಳೆ.
    2. ಕಶೇರುಕಗಳ ಮುಂಗಾಲಿನಲ್ಲಿರುವ ಅಂಥದೇ ಮೂಳೆ.
  5. ತ್ರಿಜ್ಯ:
    1. ವರ್ತುಲದ ತ್ರಿಜ್ಯಗಳಂತೆ ಒಂದು ಬಿಂದುವಿನಿಂದ ಬೇರೆ ಬೇರೆ ದಿಕ್ಕುಗಳಿಗೆ ಹೋಗುವ ಗೆರೆಗಳಲ್ಲಿ ಒಂದು.
    2. ಅಂಥ ಒಂದು ವಸ್ತು, ಉದಾಹರಣೆಗೆಚಕ್ರದ ಅರೆ.
See also 1radius
2radius ರೇಡಿಅಸ್‍
ಸಕರ್ಮಕ ಕ್ರಿಯಾಪದ

(ಏಣು ಮೊದಲಾದವುಗಳಿಗೆ) ಗುಂಡಾದ ರೂಪ ಕೊಡು; ದುಂಡಾಗಿಸು.