1radius
ರೇಡಿಅಸ್
ನಾಮವಾಚಕ
(ಬಹುವಚನ radii ಉಚ್ಚಾರಣೆ ರೇಡಿಐ, ಯಾ radiuses).
- (ಗಣಿತ) ತ್ರಿಜ್ಯ:
- ವರ್ತುಲದ ಕೆಂದ್ರವನ್ನು ಪರಿಧಿಯ ಮೇಲಿನ ಯಾವುದೇ ಬಿಂದುವಿಗೆ ಸೇರಿಸುವ ರೇಖೆ.
- ವಕ್ರ ಒಂದರ ನಾಭಿಯನ್ನು ವಕ್ರದ ಮೇಲಿನ ಯಾವುದೇ ಬಿಂದುವಿಗೆ ಸೇರಿಸುವ ರೇಖೆ.
- (ಗಣಿತ) ವರ್ತುಲದ ತ್ರಿಜ್ಯದ ಉದ್ದ.
- ತ್ರಿಜ್ಯ; ಯಾವುದೇ ಒಂದರ ವ್ಯಾಪ್ತಿಯನ್ನು ಸೂಚಿಸಬೇಕಾದಾಗ ದತ್ತ ಬಿಂದುವಿನಿಂದ ಎಷ್ಟು ದೂರದವರೆಗೆ ಅದು ಇದೆ ಎಂದು ಹೇಳುವ ನಿರ್ದಿಷ್ಟ ದೂರ: within a radius of 10 km ಹತ್ತು ಕಿಮೀ. ತ್ರಿಜ್ಯದ, ದೂರದ ಒಳಗೆ.
- (ಅಂಗರಚನಾಶಾಸ್ತ್ರ) ರೇಡಿಯಸ್:
- ಮನುಷ್ಯನ ಮುಂದೋಳಿನಲ್ಲಿರುವ ಎರಡು ಮೂಳೆಗಳ ಪೈಕಿ ಕಡಮೆ ಉದ್ದದ ದಪ್ಪ ಮೂಳೆ.
- ಕಶೇರುಕಗಳ ಮುಂಗಾಲಿನಲ್ಲಿರುವ ಅಂಥದೇ ಮೂಳೆ.
- ತ್ರಿಜ್ಯ:
- ವರ್ತುಲದ ತ್ರಿಜ್ಯಗಳಂತೆ ಒಂದು ಬಿಂದುವಿನಿಂದ ಬೇರೆ ಬೇರೆ ದಿಕ್ಕುಗಳಿಗೆ ಹೋಗುವ ಗೆರೆಗಳಲ್ಲಿ ಒಂದು.
- ಅಂಥ ಒಂದು ವಸ್ತು, ಉದಾಹರಣೆಗೆಚಕ್ರದ ಅರೆ.