See also 2racket  3racket
1racket ರ್ಯಾಕಿಟ್‍
ನಾಮವಾಚಕ

ರ್ಯಾಕೆಟ್ಟು:

  1. ಕುರಿ, ಕುದುರೆ, ಮೊದಲಾದ ಪ್ರಾಣಿಗಳ ಕರುಳಿನ ಎಳೆಯನ್ನು ಬಿಗಿಮಾಡಿ ಹೆಣೆದ, ಟೆನಿಸ್‍ ಮೊದಲಾದ ಆಟಗಳ ಬ್ಯಾಟು, ದಾಂಡು. Figure: rackets
  2. (ಬಹುವಚನದಲ್ಲಿ) ನಾಲ್ಕು ಕಡೆಯೂ ಗೋಡೆಯಿರುವ ಆವರಣದಲ್ಲಿ ಇಬ್ಬರು ಇಲ್ಲವೆ ನಾಲ್ವರು ರ್ಯಾಕೆಟ್ಟುಗಳಿಂದ ಆಡುವ ಆಟ.
  3. ಘನಹಿಮದಲ್ಲಿ ನಡೆಯಲು ಬಳಸುವ ರ್ಯಾಕೆಟ್‍ ಆಕಾರದ ಮೋಜ.
See also 1racket  3racket
2racket ರ್ಯಾಕಿಟ್‍
ನಾಮವಾಚಕ
  1. ಗದ್ದಲ; ಗಲಭೆ; ಗಲಾಟೆ; ಅವಾಂತರ; ಕೋಲಾಹಲ.
  2. ಗೋಷ್ಠಿಯ, ಸಂತೋಷಕೂಟದ – ಸಂಭ್ರಮ ಯಾ ಉಲ್ಲಾಸ.
  3. ಲೋಲುಪತೆ; ದುರ್ವ್ಯಸನಗಳಲ್ಲಿ ಮುಳುಗಿರುವಿಕೆ.
  4. (ಆಡುಮಾತು) ಉದ್ಯೋಗ; ಕಸುಬು; ಜೀವನೋಪಾಯ; ವೃತ್ತಿ; ಚಟುವಟಿಕೆ; ವ್ಯವಹಾರ: start a new racket ಹೊಸ ಉದ್ಯೋಗ, ಚಟುವಟಿಕೆ, ವ್ಯವಹಾರ ಪ್ರಾರಂಭಿಸು.
  5. (ಅಶಿಷ್ಟ)
    1. ಸುಲಿಗೆ; ಬೆದರಿಸಿ ಯಾ ಹಿಂಸಾತ್ಮಕ ಕಾರ್ಯಗಳಿಂದ ಕಾನೂನು ಬಾಹಿರವಾಗಿ ಹಣ ಕೀಳುವುದು.
    2. ಮೋಸ; ವಂಚನೆ; ದಗಲ್ಬಾಜಿ; ಮೋಸದ ಯೋಜನೆ, ಉದ್ಯಮ ಯಾ ವ್ಯವಹಾರ.
    3. ಲಂಚ ಯಾ ಬೆದರಿಕೆಗಳ ಮೂಲಕ ಕಾರ್ಯಗತಗೊಳಿಸುವ (ಸಾಮಾನ್ಯವಾಗಿ) ಕಾನೂನುಬಾಹಿರ ಉದ್ಯಮ.
    4. ಸುಲಭವಾದ ಜಿವನೋಪಾಯ ಮಾರ್ಗ, ವಿಧಾನ.
  6. ಉಗ್ರಪರೀಕ್ಷೆ; ಅಗ್ನಿಪರೀಕ್ಷೆ; ದುಃಸಹನೀಯ ಕಷ್ಟ: stand the racket ಅಗ್ನಿಪರೀಕ್ಷೆಯಲ್ಲಿ ಗೆಲ್ಲು; ದುರ್ಭರ ಕಷ್ಟ ಸಹಿಸಿಕೊ.
See also 1racket  2racket
3racket ರ್ಯಾಕಿಟ್‍
ಅಕರ್ಮಕ ಕ್ರಿಯಾಪದ
  1. ಲಫಂಗನಾಗಿ ಬದುಕು; ಲಂಪಟ ಜೀವನವನ್ನು ನಡೆಸು.
  2. ಗದ್ದಲ ಮಾಡುತ್ತ ಓಡಾಡು.