2racket
ನಾಮವಾಚಕ
- ಗದ್ದಲ; ಗಲಭೆ; ಗಲಾಟೆ; ಅವಾಂತರ; ಕೋಲಾಹಲ.
- ಗೋಷ್ಠಿಯ, ಸಂತೋಷಕೂಟದ – ಸಂಭ್ರಮ ಯಾ ಉಲ್ಲಾಸ.
- ಲೋಲುಪತೆ; ದುರ್ವ್ಯಸನಗಳಲ್ಲಿ ಮುಳುಗಿರುವಿಕೆ.
- (ಆಡುಮಾತು) ಉದ್ಯೋಗ; ಕಸುಬು; ಜೀವನೋಪಾಯ; ವೃತ್ತಿ; ಚಟುವಟಿಕೆ; ವ್ಯವಹಾರ: start a new racket ಹೊಸ ಉದ್ಯೋಗ, ಚಟುವಟಿಕೆ, ವ್ಯವಹಾರ ಪ್ರಾರಂಭಿಸು.
- (ಅಶಿಷ್ಟ)
- ಸುಲಿಗೆ; ಬೆದರಿಸಿ ಯಾ ಹಿಂಸಾತ್ಮಕ ಕಾರ್ಯಗಳಿಂದ ಕಾನೂನು ಬಾಹಿರವಾಗಿ ಹಣ ಕೀಳುವುದು.
- ಮೋಸ; ವಂಚನೆ; ದಗಲ್ಬಾಜಿ; ಮೋಸದ ಯೋಜನೆ, ಉದ್ಯಮ ಯಾ ವ್ಯವಹಾರ.
- ಲಂಚ ಯಾ ಬೆದರಿಕೆಗಳ ಮೂಲಕ ಕಾರ್ಯಗತಗೊಳಿಸುವ (ಸಾಮಾನ್ಯವಾಗಿ) ಕಾನೂನುಬಾಹಿರ ಉದ್ಯಮ.
- ಸುಲಭವಾದ ಜಿವನೋಪಾಯ ಮಾರ್ಗ, ವಿಧಾನ.
- ಉಗ್ರಪರೀಕ್ಷೆ; ಅಗ್ನಿಪರೀಕ್ಷೆ; ದುಃಸಹನೀಯ ಕಷ್ಟ: stand the racket ಅಗ್ನಿಪರೀಕ್ಷೆಯಲ್ಲಿ ಗೆಲ್ಲು; ದುರ್ಭರ ಕಷ್ಟ ಸಹಿಸಿಕೊ.