See also 2quiet  3quiet
1quiet ಕ್ವೈಅಟ್‍
ಗುಣವಾಚಕ
( ತರರೂಪ quieter, ತಮರೂಪ quietest).
    1. ನಿಶ್ಯಬ್ದವಾದ ಯಾ ನಿಶ್ಚಲವಾದ.
    2. ಅಲ್ಪಶಬ್ದದ ಯಾ ಅಲ್ಪಚಲನೆಯ.
  1. ಸೌಮ್ಯ (ಪ್ರವೃತ್ತಿಯ); ಶಾಂತ (ಸ್ವಭಾವದ).
  2. (ಬಣ್ಣ, ಉಡುಪು, ಮೊದಲಾದವುಗಳ ವಿಷಯದಲ್ಲಿ) ನಿರಾಡಂಬರ; ಡೌಲಾಗಿಲ್ಲದ; ಕಣ್ಣುಕುಕ್ಕದ; ಆಡಂಬರ ತೋರದ.
  3. ಹೊರಕ್ಕೆ ವ್ಯಕ್ತಪಡಿಸದ; ಮೇಲೆ ಕಾಣಿಸದ; ಗುಪ್ತ; ಗೋಪ್ಯ; ಮರೆಮಾಚಿದ: quiet resentment ಗುಪ್ತ ಅಸಮಾಧಾನ.
  4. ಪ್ರಶಾಂತವಾದ; ಗಲಾಟೆಯಿಲ್ಲದ; ಸದ್ದುಗದ್ದಲವಿಲ್ಲದ; ಈತಿಬಾಧೆಗಳಿಲ್ಲದ; ಅನಿರ್ಬಾಧಿತವಾದ: a quiet time for prayer ಪ್ರಾರ್ಥನೆಗೆ ಪ್ರಶಾಂತವಾದ, ಸುದ್ದುಗದ್ದಲವಿಲ್ಲದ ಕಾಲ.
  5. ಅನೌಪಚಾರಿಕ; ಸರಳ: just a quiet wedding ಒಂದು ಸರಳವಾದ ವಿವಾಹ.
  6. ನೆಮ್ಮದಿಯ; ಶಾಂತವಾಗಿ ಅನುಭವಿಸಿದ, ಸವಿದ: a quiet smoke ನೆಮ್ಮದಿಯಿಂದ ಅನುಭವಿಸಿದ ಧೂಮಪಾನ.
  7. ಪ್ರಶಾಂತವಾದ; ನೆಮ್ಮದಿಯ; ತವಕವಿಲ್ಲದ; ನಿಶ್ಚಿಂತೆಯಾದ; ದುಗುಡವಿಲ್ಲದ.
ಪದಗುಚ್ಛ
  1. be quiet (ಮುಖ್ಯವಾಗಿ ಆಜ್ಞಾರ್ಥಕವಾಗಿ) ಬಾಯಿ ಮುಚ್ಚು; ಚುಪ್‍! ಮಾತಾಡಬೇಡ.
  2. keep quiet
    1. ಗಲಾಟೆ ಮಾಡದಿರು.
    2. (ಸಾಮಾನ್ಯವಾಗಿ keep quiet about) ಮಾಹಿತಿ, ಗುಟ್ಟು, ಮೊದಲಾದವನ್ನು – ಬಿಟ್ಟು ಕೊಡದಿರು, ಮುಚ್ಚಿಡು.
  3. on the quiet ಗೊತ್ತಾಗದಂತೆ; ರಹಸ್ಯವಾಗಿ; ಗೋಪ್ಯವಾಗಿ; ಗುಟ್ಟಾಗಿ.
See also 1quiet  3quiet
2quiet ಕ್ವೈಅಟ್‍
ನಾಮವಾಚಕ
  1. ನಿಶ್ಯಬ್ದತೆ; ನೀರವತೆ; ಮೌನ.
  2. ನಿಶ್ಚಲತೆ; ನಿಶ್ಚೇಷ್ಟತೆ.
  3. ಶಾಂತಿ; ಪ್ರಕ್ಷುಬ್ಧತೆಯಿಲ್ಲದ ಸ್ಥಿತಿ.
  4. ಸಮಾಧಾನ; ಮನಶ್ಯಾಂತಿ; ನೆಮ್ಮದಿ.
  5. ವಿಶ್ರಾಂತಿ; ನಿಶ್ಚಿಂತೆ; ತುರ್ತುಕೆಲಸ, ಕಳವಳ, ಗಲಾಟೆ, ಈತಿಬಾಧೆ ಇಲ್ಲದೆ ನೆಮ್ಮದಿಯಾಗಿರುವುದು.
  6. ಶಾಂತ(ವಾದ) ಪರಿಸ್ಥಿತಿ: all quiet along the frontier ಗಡಿಯುದ್ದಕ್ಕೂ ಪೂರ್ಣ ಶಾಂತ ಪರಿಸ್ಥಿತಿಯಿತ್ತು.
See also 1quiet  2quiet
3quiet ಕ್ವೈಅಟ್‍
ಸಕರ್ಮಕ ಕ್ರಿಯಾಪದ
  1. ಶಾಂತಗೊಳಿಸು; ಪ್ರಶಮನಗೊಳಿಸು.
  2. ಸಂತೈಸು; ಸಮಾಧಾನ ಮಾಡು.
ಅಕರ್ಮಕ ಕ್ರಿಯಾಪದ

(ಅನೇಕವೇಳೆ quiet down)

  1. ಶಾಂತವಾಗು; ನಿಶ್ಯಬ್ದವಾಗು; ನಿಶ್ಚಲವಾಗು.
  2. ಸಮಾಧಾನವಾಗು; ಸಮಾಧಾನ ತಂದುಕೊ.