See also 2quick  3quick
1quick ಕ್ವಿಕ್‍
ಗುಣವಾಚಕ
  1. ಚುರುಕಾದ; (ಕೆಲಸಕ್ಕೆ) ಕಡಮೆ ಸಮಯ ತೆಗೆದುಕೊಳ್ಳುವ: a quick worker ಚುರುಕು ಕೆಲಸಗಾರ.
  2. ಶೀಘ್ರವಾದ; ಕ್ಷಿಪ್ರ; ಒಡನೆಯೇ, ತಡವಿಲ್ಲದೆ – ಮಾಡುವ: quick action ಶೀಘ್ರ ಕ್ರಿಯೆ, ಕ್ರಮ.
  3. ಶೀಘ್ರ; ಕ್ಷಿಪ್ರ; ಕಡಮೆ ಅವಧಿಯ: in quick succession ಒಂದಾದ ಮೇಲೊಂದು ಕಡಮೆ ಅವಧಿಯಲ್ಲಿ; ಕ್ಷಿಪ್ರಾನುಕ್ರಮದಲ್ಲಿ.
  4. ಸುಟಿಯಾದ; ಚುರುಕಾದ; ಬುದ್ಧಿಶಾಲಿಯಾದ: a quick child ಚುರುಕಾದ ಮಗು.
  5. ಚುರುಕಾದ; ಸೂಕ್ಷ್ಮವಾದ; ಎಚ್ಚರದ: has a quick ear ಚುರುಕಾದ ಕಿವಿಯಿದೆ. quick wits ಚುರುಕುಬುದ್ಧಿ; ಸೂಕ್ಷ್ಮಗ್ರಾಹಿಯಾದ ಬುದ್ಧಿ; ಬೇಗ ಗ್ರಹಿಸುವ, ಬೇಗ ಚುರುಕುತ್ತರ ಮೊದಲಾದವನ್ನು ಕೊಡುವ ಶಕ್ತಿ.
  6. ಸುಲಭವಾಗಿ ಕೆರಳುವ; ಮುಂಗೋಪಿಯಾದ: quick temper ಸಿಡುಕು ಸ್ವಭಾವ; ಮುಂಗೋಪ.
  7. (ಪ್ರಾಚೀನ ಪ್ರಯೋಗ) ಬದುಕಿರುವ; ಜೀವಂತ; ಸಜೀವ; ಜೀವವಿರುವ: the quick and the dead ಬದುಕಿರುವವರೂ ಸತ್ತವರೂ.
ಪದಗುಚ್ಛ
  1. be quick ಬೇಗ ಮಾಡು; ಲಗೂನೆ ಮಾಡು.
  2. quick with child (ಪ್ರಾಚೀನ ಪ್ರಯೋಗ) ಭ್ರೂಣದ ಚಲನವಲನಗಳು ಗೊತ್ತಾಗುವ ಸ್ಥಿತಿಯ ಬಸುರಿನ.
See also 1quick  3quick
2quick ಕ್ವಿಕ್‍
ಕ್ರಿಯಾವಿಶೇಷಣ
  1. ಶೀಘ್ರವಾಗಿ; ಕ್ಷಿಪ್ರವಾಗಿ; ತ್ವರಿತವಾಗಿ; ಲಗೂನೆ; ಚುರುಕಾಗಿ: ran as quick as I could ನನಗೆ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿದೆ.
  2. ( ಭಾವಸೂಚಕ ಅವ್ಯಯವಾಗಿ) ಬೇಗ ಹೋಗು, ಬಾ, ಮೊದಲಾದವು; ಜಲ್ದಿ!
See also 1quick  2quick
3quick ಕ್ವಿಕ್‍
ನಾಮವಾಚಕ
  1. ಉಗುರುಕಣ್ಣಿನ, ಚರ್ಮದಡಿಯ, ಯಾ ಗಾಯದ ಬಳಿಯ ಮೃದುವಾದ ಮಾಂಸ: bites his nails to the quick ಅವನು ಉಗುರುಕಣ್ಣುಗಳವರೆಗೂ ಉಗುರುಗಳನ್ನು ಕಚ್ಚುತ್ತಾನೆ.
  2. ಮರ್ಮ; ಭಾವನೆಯ, ಮನೋಭಾವದ – ನೆಲೆ, ಸ್ಥಾನ: the insult stung him to the quick ಅಪಮಾನ ಅವನ ಮರ್ಮಕ್ಕೆ ಚುಚ್ಚಿತು, ಮರ್ಮ ಕುಟುಕಿತು.
ಪದಗುಚ್ಛ

to the quick ಸಂಪೂರ್ಣವಾಗಿ: he is a Tory to the quick ಅವನು ಸಂಪೂವಾಗಿ ಟೋರಿ ಪಕ್ಷದವನು.