ನಟನೆಮಾಡು; ಸೋಗುಹಾಕು; ವೇಷತಾಳು; ತೋರ್ಪಡಿಸಿಕೊ: does not pretend to be a scholar ವಿದ್ವಾಂಸನೆಂದು ಸೋಗು ಹಾಕಿಕೊಳ್ಳುವುದಿಲ್ಲ.
ಆಟದಲ್ಲಿ ನಟನೆ ಮಾಡು: let us pretend we are Kings and Queens ನಾವು ರಾಜರಾಣಿಯರೆಂದು ನಟನೆ ಮಾಡೋಣ.
ಸುಳ್ಳಾಗಿ ನಟಿಸು; ಇರುವಂತೆ ತೋರಿಸಿಕೊ: you should pretend illness ನಿನಗೆ ಕಾಯಿಲೆ ಇರುವಂತೆ ನಟಿಸಬೇಕು.
(ಮೋಸಮಾಡುವ ಉದ್ದೇಶದಿಂದ) ಆರೋಪಿಸು; ಸುಳ್ಳು ಹೇಳಿಕೆ ನೀಡು; ಸುಳ್ಳುಸಾರು; ಸುಳ್ಳನ್ನು ನಿಜವೆಂದು ಹೇಳು: he pretended to have no knowledge of her whereabouts ಅವಳಿರುವ ಸ್ಥಳ ಯಾವುದೆಂಬುದು ತನಗೆ ಗೊತ್ತಿಲ್ಲವೆಂದು ಅವನು ಸುಳ್ಳಾಗಿ ಹೇಳಿದ.
ಮಾಡಲು, ಹೇಳು – ಸಾಹಸಮಾಡು, ಧೈರ್ಯಮಾಡು, ಮುಂದುವರಿ, ಆಶಿಸು, ಪ್ರಯತ್ನಪಡು: we cannot pretend to guess the answer ಉತ್ತರವನ್ನು ಊಹಿಸುವ ಸಾಹಸ ಮಾಡಲು ನಮಗೆ ಸಾಧ್ಯವಿಲ್ಲ.
ಅಕರ್ಮಕ ಕ್ರಿಯಾಪದ
(ಹಕ್ಕು, ಬಾಧ್ಯತೆ, ಬಿರುದು, ಮೊದಲಾದವಕ್ಕೆ) ಹಕ್ಕು ಹೂಡು: he pretended to the throne when his brother died ಅವನ ಸಹೋದರನು ಕಾಲವಾದಾಗ ಸಿಂಹಾಸನಕ್ಕೆ ತನ್ನ ಹಕ್ಕನ್ನು ಹೂಡಿದನು.
(ಗುಣ ಮೊದಲಾದವು) ಇದೆಯೆಂದು ಹೇಳಿಕೊ.
ಪದಗುಚ್ಛ
pretend to
(ಪ್ರಾಚೀನ ಪ್ರಯೋಗ) (ಒಬ್ಬನನ್ನು, ಒಬ್ಬಳನ್ನು) ಮದುವೆಯಾಗಲು, ಒಲಿಸಿಕೊಳ್ಳಲು ಪ್ರಯತ್ನಪಡು: I am not such a fool as to pretend to you now I am poor ನಾನೀಗ ಬಡವನಾಗಿರುವುದರಿಂದ ನಿನ್ನನ್ನು ಮದುವೆಯಾಗಲು ಪ್ರಯತ್ನಪಡುವಷ್ಟು ಮೂರ್ಖನಲ್ಲ.
(ಗುಣ ಮೊದಲಾದವನ್ನು) ಉಳ್ಳಂತೆ ನಟಿಸು, ತೋರ್ಪಡಿಸಿಕೊ, ಹೇಳಿಕೊ: he pretends to great knowledge ಅವನು ಬಹಳ ಜ್ಞಾನವುಳ್ಳವನಂತೆ ತೋರ್ಪಡಿಸಿಕೊಳ್ಳುತ್ತಾನೆ.