See also 2pretend
1pretend ಪ್ರಿಟೆಂಡ್‍
ಸಕರ್ಮಕ ಕ್ರಿಯಾಪದ
  1. ನಟನೆಮಾಡು; ಸೋಗುಹಾಕು; ವೇಷತಾಳು; ತೋರ್ಪಡಿಸಿಕೊ: does not pretend to be a scholar ವಿದ್ವಾಂಸನೆಂದು ಸೋಗು ಹಾಕಿಕೊಳ್ಳುವುದಿಲ್ಲ.
  2. ಆಟದಲ್ಲಿ ನಟನೆ ಮಾಡು: let us pretend we are Kings and Queens ನಾವು ರಾಜರಾಣಿಯರೆಂದು ನಟನೆ ಮಾಡೋಣ.
  3. ಸುಳ್ಳಾಗಿ ನಟಿಸು; ಇರುವಂತೆ ತೋರಿಸಿಕೊ: you should pretend illness ನಿನಗೆ ಕಾಯಿಲೆ ಇರುವಂತೆ ನಟಿಸಬೇಕು.
  4. (ಮೋಸಮಾಡುವ ಉದ್ದೇಶದಿಂದ) ಆರೋಪಿಸು; ಸುಳ್ಳು ಹೇಳಿಕೆ ನೀಡು; ಸುಳ್ಳುಸಾರು; ಸುಳ್ಳನ್ನು ನಿಜವೆಂದು ಹೇಳು: he pretended to have no knowledge of her whereabouts ಅವಳಿರುವ ಸ್ಥಳ ಯಾವುದೆಂಬುದು ತನಗೆ ಗೊತ್ತಿಲ್ಲವೆಂದು ಅವನು ಸುಳ್ಳಾಗಿ ಹೇಳಿದ.
  5. ಮಾಡಲು, ಹೇಳು – ಸಾಹಸಮಾಡು, ಧೈರ್ಯಮಾಡು, ಮುಂದುವರಿ, ಆಶಿಸು, ಪ್ರಯತ್ನಪಡು: we cannot pretend to guess the answer ಉತ್ತರವನ್ನು ಊಹಿಸುವ ಸಾಹಸ ಮಾಡಲು ನಮಗೆ ಸಾಧ್ಯವಿಲ್ಲ.
ಅಕರ್ಮಕ ಕ್ರಿಯಾಪದ
  1. (ಹಕ್ಕು, ಬಾಧ್ಯತೆ, ಬಿರುದು, ಮೊದಲಾದವಕ್ಕೆ) ಹಕ್ಕು ಹೂಡು: he pretended to the throne when his brother died ಅವನ ಸಹೋದರನು ಕಾಲವಾದಾಗ ಸಿಂಹಾಸನಕ್ಕೆ ತನ್ನ ಹಕ್ಕನ್ನು ಹೂಡಿದನು.
  2. (ಗುಣ ಮೊದಲಾದವು) ಇದೆಯೆಂದು ಹೇಳಿಕೊ.
ಪದಗುಚ್ಛ

pretend to

  1. (ಪ್ರಾಚೀನ ಪ್ರಯೋಗ) (ಒಬ್ಬನನ್ನು, ಒಬ್ಬಳನ್ನು) ಮದುವೆಯಾಗಲು, ಒಲಿಸಿಕೊಳ್ಳಲು ಪ್ರಯತ್ನಪಡು: I am not such a fool as to pretend to you now I am poor ನಾನೀಗ ಬಡವನಾಗಿರುವುದರಿಂದ ನಿನ್ನನ್ನು ಮದುವೆಯಾಗಲು ಪ್ರಯತ್ನಪಡುವಷ್ಟು ಮೂರ್ಖನಲ್ಲ.
  2. (ಗುಣ ಮೊದಲಾದವನ್ನು) ಉಳ್ಳಂತೆ ನಟಿಸು, ತೋರ್ಪಡಿಸಿಕೊ, ಹೇಳಿಕೊ: he pretends to great knowledge ಅವನು ಬಹಳ ಜ್ಞಾನವುಳ್ಳವನಂತೆ ತೋರ್ಪಡಿಸಿಕೊಳ್ಳುತ್ತಾನೆ.