See also 2plane  3plane  4plane  5plane  6plane
1plane ಪ್ಲೇನ್‍
ನಾಮವಾಚಕ
  1. ಸಮತಲ:
    1. ಎರಡು ಬಿಂದುಗಳನ್ನು ಸೇರಿಸುವ ಸರಳರೇಖೆಯನ್ನು ಸಂಪೂರ್ಣವಾಗಿ ಒಳಗೊಳ್ಳುವಂಥ ಸಪಾಟ ತಲ.
    2. ಭೌತ ಕಾಯಗಳಲ್ಲಿನ ಬಿಂದುಗಳು ಹಾಗೂ ರೇಖೆಗಳನ್ನು ಅದೇ ರೀತಿ ಒಳಗೊಳ್ಳುವ ಕಾಲ್ಪನಿಕ ತಲ.
  2. ಸಮತಲ; ಸಮಕ್ಷೇತ್ರ; ಸಪಾಟ; ಮಟ್ಟಸ.
  3. (ಆಡುಮಾತು) = aeroplane.
  4. (ಸಾಮಾನ್ಯವಾಗಿ ಸಮಾಸಗಳಲ್ಲಿ ಪ್ರಯೋಗ) ಸಪಾಟ ಫಲಕ; ಅದರ ತಳದಲ್ಲಿರುವ ಗಾಳಿಯ ಯಾ ನೀರಿನ ಕ್ರಿಯೆಯಿಂದ ಏರಿಳಿತ ಉಂಟುಮಾಡುವ ಚಪ್ಪಟೆಯ ಮೇಲ್ಮೈ, ತಲ, ಉದಾಹರಣೆಗೆ hydroplane.
  5. (ರೂಪಕವಾಗಿ) (ಭಾವ, ಆಲೋಚನೆ, ಜ್ಞಾನ, ಮೊದಲಾದವುಗಳ) ಸ್ತರ; ಮಟ್ಟ; ಅಂತಸ್ತು: his superstition places him on the same plane as the savage ಅವನ ಕುರುಡು ನಂಬಿಕೆಯು ಅವನನ್ನು ಅನಾಗರಿಕನ ಮಟ್ಟದಲ್ಲೇ ನಿಲ್ಲಿಸುತ್ತದೆ.
  6. (ಮೇಜಿನ ಮೇಲ್ಮೈಯಂಥ) ಚಪ್ಪಟೆಯಾಗಿ ತೆಳುವಾಗಿರುವ ವಸ್ತು.
  7. ವಿಮಾನದ ಆಧಾರ; ವಿಮಾನಕ್ಕೆ ಆಸರೆಯಾಗಿರುವ ಭಾಗ.
  8. (ಮುಖ್ಯವಾಗಿ ಬಹುವಚನದಲ್ಲಿ) ಫಲಕ ವಿಮಾನ(ಗಳು).
  9. ಪಟ್ಟೆ; ಸ್ಫಟಿಕದ ಯಾವುದೇ ಸ್ವಾಭಾವಿಕ ಚಪ್ಪಟೆ ಮುಖ.
  10. (ಗಣಿಯಲ್ಲಿ) ಮುಖ್ಯಮಾರ್ಗ.
See also 1plane  3plane  4plane  5plane  6plane
2plane ಪ್ಲೇನ್‍
ಗುಣವಾಚಕ
  1. (ಮೇಲ್ಮೈ ಮೊದಲಾದವುಗಳ ವಿಷಯದಲ್ಲಿ) ಸಮತಲ(ವಾದ); ಸಪಾಟಾದ; ಮಟ್ಟಸವಾಗಿರುವ; ಸಂಪೂರ್ಣವಾಗಿ ಸಮತಲದಲ್ಲಿರುವ.
  2. (ಕೋನ, ಆಕೃತಿ, ಮೊದಲಾದವುಗಳ ವಿಷಯದಲ್ಲಿ) ಸಮತಲದಲ್ಲಿರುವ.
See also 1plane  2plane  4plane  5plane  6plane
3plane ಪ್ಲೇನ್‍
ಅಕರ್ಮಕ ಕ್ರಿಯಾಪದ
  1. (ವಿಮಾನದಲ್ಲಿ)
    1. ಸಂಚಾರಮಾಡು.
    2. ಎಂಜಿನ್ನಿನ ಸಹಾಯವಿಲ್ಲದೆ ತೇಲಿಕೊಂಡು ಸಾಗು.
  2. (ವೇಗದ ದೋಣಿಯ ವಿಷಯದಲ್ಲಿ) ನೀರಿನ ಮೇಲೆ ತೇಲಿಕೊಂಡು, ಸವರಿಕೊಂಡು ಹೋಗು.
  3. (ರೆಕ್ಕೆಗಳಿಂದಲೋ ಎಂಬಂತೆ) ಹಾರು; ಮೇಲೇರು.
See also 1plane  2plane  3plane  5plane  6plane
4plane ಪ್ಲೇನ್‍
ನಾಮವಾಚಕ

(ಮರದ ಸಾಮಾನಿನ ಮೇಲ್ಮೈಯನ್ನು ಹೆರೆದು ನಯಮಾಡುವ) ತೋಪಡಾ; ತೋಪಡೆ; ಹತ್ತರಿ; ಉಜ್ಜುಗೊರಡು; ಕೀಸುಳಿ. Figure: planes

ಪದಗುಚ್ಛ
  1. moulding plane ಗೋಲು (ಕೆಲಸ ಮಾಡಲು ಬಳಸುವ) ಹತ್ತರಿ.
  2. smoothing plane ನಯ(ಗೆಲಸದ) ಹತ್ತರಿ; ನಯ ತೋಪಡಾ; ನುಣುಪುಗೊಳಿಸುವ ಹತ್ತರಿ.
See also 1plane  2plane  3plane  4plane  6plane
5plane ಪ್ಲೇನ್‍
ಸಕರ್ಮಕ ಕ್ರಿಯಾಪದ
  1. ತೋಪಡಾ ಯಾ ಹತ್ತರಿ ಹಿಡಿ; ನಯಮಾಡು; ತೋಪಡಾ ಹಿಡಿದು ಏರುಪೇರುಗಳಿಲ್ಲದಂತೆ ಸಮಮಾಡು.
  2. (ಪ್ರಾಚೀನ ಪ್ರಯೋಗ) ಮಟ್ಟಸಮಾಡು: plane the way ದಾರಿಯನ್ನು ಮಟ್ಟಸ ಮಾಡು.
See also 1plane  2plane  3plane  4plane  5plane
6plane ಪ್ಲೇನ್‍
ನಾಮವಾಚಕ

ಪ್ಲೇನ್‍; ಪ್ಲಾಟನಸ್‍ ಕುಲಕ್ಕೆ ಸೇರಿದ, ತಾಳೆಗರಿಯಂಥ ಎಲೆಗಳುಳ್ಳ, ಬಹು ಎತ್ತರಕ್ಕೆ ಬೆಳೆಯುವ ಒಂದು ಮರ.