See also 2plane  3plane  4plane  5plane  6plane
1plane ಪ್ಲೇನ್‍
ನಾಮವಾಚಕ
  1. ಸಮತಲ:
    1. ಎರಡು ಬಿಂದುಗಳನ್ನು ಸೇರಿಸುವ ಸರಳರೇಖೆಯನ್ನು ಸಂಪೂರ್ಣವಾಗಿ ಒಳಗೊಳ್ಳುವಂಥ ಸಪಾಟ ತಲ.
    2. ಭೌತ ಕಾಯಗಳಲ್ಲಿನ ಬಿಂದುಗಳು ಹಾಗೂ ರೇಖೆಗಳನ್ನು ಅದೇ ರೀತಿ ಒಳಗೊಳ್ಳುವ ಕಾಲ್ಪನಿಕ ತಲ.
  2. ಸಮತಲ; ಸಮಕ್ಷೇತ್ರ; ಸಪಾಟ; ಮಟ್ಟಸ.
  3. (ಆಡುಮಾತು) = aeroplane.
  4. (ಸಾಮಾನ್ಯವಾಗಿ ಸಮಾಸಗಳಲ್ಲಿ ಪ್ರಯೋಗ) ಸಪಾಟ ಫಲಕ; ಅದರ ತಳದಲ್ಲಿರುವ ಗಾಳಿಯ ಯಾ ನೀರಿನ ಕ್ರಿಯೆಯಿಂದ ಏರಿಳಿತ ಉಂಟುಮಾಡುವ ಚಪ್ಪಟೆಯ ಮೇಲ್ಮೈ, ತಲ, ಉದಾಹರಣೆಗೆ hydroplane.
  5. (ರೂಪಕವಾಗಿ) (ಭಾವ, ಆಲೋಚನೆ, ಜ್ಞಾನ, ಮೊದಲಾದವುಗಳ) ಸ್ತರ; ಮಟ್ಟ; ಅಂತಸ್ತು: his superstition places him on the same plane as the savage ಅವನ ಕುರುಡು ನಂಬಿಕೆಯು ಅವನನ್ನು ಅನಾಗರಿಕನ ಮಟ್ಟದಲ್ಲೇ ನಿಲ್ಲಿಸುತ್ತದೆ.
  6. (ಮೇಜಿನ ಮೇಲ್ಮೈಯಂಥ) ಚಪ್ಪಟೆಯಾಗಿ ತೆಳುವಾಗಿರುವ ವಸ್ತು.
  7. ವಿಮಾನದ ಆಧಾರ; ವಿಮಾನಕ್ಕೆ ಆಸರೆಯಾಗಿರುವ ಭಾಗ.
  8. (ಮುಖ್ಯವಾಗಿ ಬಹುವಚನದಲ್ಲಿ) ಫಲಕ ವಿಮಾನ(ಗಳು).
  9. ಪಟ್ಟೆ; ಸ್ಫಟಿಕದ ಯಾವುದೇ ಸ್ವಾಭಾವಿಕ ಚಪ್ಪಟೆ ಮುಖ.
  10. (ಗಣಿಯಲ್ಲಿ) ಮುಖ್ಯಮಾರ್ಗ.