See also 2pass  3pass
1pass ಪಾಸ್‍
ಕ್ರಿಯಾಪದ
(ಭೂತಕೃದಂತ passed).
ಸಕರ್ಮಕ ಕ್ರಿಯಾಪದ
  1. (ವಸ್ತು ಮೊದಲಾದವನ್ನು) ಪಕ್ಕಕ್ಕೆ ಬಿಟ್ಟುಹೋಗು; ಹಿಂದೆ ಬಿಟ್ಟುಹೋಗು; ದಾಟಿಹೋಗು.
  2. (ಮುಖ್ಯವಾಗಿ ವಾಹನದಲ್ಲಿ) ದಾಟಿ ಮುಂದೆ ಹೋಗು.
  3. (ಕಡಲು, ಗಡಿ, ಪರ್ವತದ ಸಾಲು, ಮೊದಲಾದವನ್ನು) ದಾಟು; ದಾಟಿಹೋಗು.
  4. ಒಂದು ವ್ಯಕ್ತಿಯಿಂದ ಯಾ ಸ್ಥಳದಿಂದ ಇನ್ನೊಬ್ಬರಿಗೆ ಯಾ ಇನ್ನೊಂದಕ್ಕೆ ವರ್ಗಾಯಿಸು, ಸಾಗಿಸು: pass the butter ಬೆಣ್ಣೆಯನ್ನು ಮುಂದಿನವನಿಗೆ ಸಾಗಿಸು.
  5. (ಸ್ಪರ್ಧೆಯಲ್ಲಿ) ಮೀರಿಸು; ಮುಂದುವರಿ; ಹಿಂದಕ್ಕೆ ಹಾಕು.
  6. ಮೀರು; ಅತೀತವಾಗಿರು: it passes my comprehension ಅದು ನನ್ನ ಗ್ರಹಿಕೆಯನ್ನು, ತಿಳಿವಳಿಕೆಯನ್ನು ಮೀರುತ್ತದೆ.
  7. ಸಾಗಿಸು; ರವಾನಿಸು: a canal sufficient to pass boats of 25 tons ಇಪ್ಪತ್ತೈದು ಟನ್‍ ತೂಕದ ದೋಣಿಗಳನ್ನು ಸಾಗಿಸಬಹುದಾದ ನಾಲೆ.
  8. ಆಡಿಸು; ಚಲಿಸು: passed his hand across his forehead ಅವನು ಕೈಯನ್ನು ತನ್ನ ಹಣೆಯ ಮೇಲೆ ಆಡಿಸಿದನು. pass your eye over this letter ಈ ಕಾಗದದ ಮೇಲೆ ನಿನ್ನ ಕಣ್ಣು ಹಾಯಿಸು, ಕಣ್ಣೋಡಿಸು.
  9. ಹೋಗುವಂತೆ ಮಾಡು; ಹಾಯಿಸು; ಕಳಿಸು: pass a rope round it ಅದರ ಸುತ್ತ ಹಗ್ಗವನ್ನು ಹಾಯಿಸು.
  10. (ಕಾಲ್ಚೆಂಡು, ಹಾಕಿ, ಮೊದಲಾದ ಆಟಗಳಲ್ಲಿ) ತನ್ನ ಕಡೆಯ ಆಟಗಾರನಿಗೆ ಚೆಂಡನ್ನು ಒದೆದು, ಹೊಡೆದು, ಎಸೆದು – ಸಾಗಿಸು, ಕಳುಹಿಸು ( ಅಕರ್ಮಕ ಕ್ರಿಯಾಪದ ಸಹ).
  11. (ಪಕ್ಕದಲ್ಲಿ) ಹಾದುಹೋಗುವಂತೆ ಮಾಡು: pass troops in review ಪರಿಶೀಲನೆಗಾಗಿ ಸೇನಾದಳಗಳನ್ನು ಶಿಸ್ತಿನಿಂದ ಹಾದುಹೋಗುವಂತೆ ಮಾಡು, ಮೆರವಣಿಗೆಯಲ್ಲಿ ನಡೆಸು.
  12. (ಶಾಸನಸಭೆಯಲ್ಲಿ ಕಾಯಿದೆಗೆ ಯಾ ಮಸೂದೆಗೆ) (ಪರಿಶೀಲನೆಯ ನಂತರ) ಅಂಗೀಕಾರ ನೀಡು; ಅನುಮೋದನೆ, ಒಪ್ಪಿಗೆ ಕೊಡು; ಮಂಜೂರು ಮಾಡು; ಮಂಜೂರಾಗುವಂತೆ ಮಾಡು; ಪಾಸುಮಾಡು.
  13. (ಕಾಲ, ಋತು, ಮೊದಲಾದವನ್ನು) ಕಳೆ: pass the afternoon reading ಓದುತ್ತಾ ಮಧ್ಯಾಹ್ನವನ್ನು ಕಳೆ.
  14. ಮುಂದಕ್ಕೆ ಕಳುಹಿಸು; ವರ್ಗಾಯಿಸು: read this and pass it on ಇದನ್ನು ಓದಿ ಮುಂದಕ್ಕೆ, ಮುಂದಿನವನಿಗೆ ಕಳುಹಿಸು.
  15. (ನಾಣ್ಯವನ್ನು, ಮುಖ್ಯವಾಗಿ ಖೋಟಾನಾಣ್ಯವನ್ನು) ಚಲಾವಣೆ ಮಾಡು.
  16. ಭಾಷೆಕೊಡು; ಆಣೆಯಿಟ್ಟು ಹೇಳು; ಪ್ರಮಾಣ ಮಾಡಿ ಹೇಳು; ಮಾತು ಕೊಡು; ವಾಗ್ದಾನ ಮಾಡು: pass one’s word of honour to remain loyal ತಾನು ನಿಷ್ಠೆಯಿಂದಿರುವೆನೆಂದು ಪ್ರಮಾಣಮಾಡಿ ಹೇಳು, ವಚನಕೊಡು.
  17. (ವಿಮರ್ಶೆ, ತೀರ್ಪು) ಹೇಳು; ಕೊಡು; ನೀಡು: I can’t pass an opinion on your work without seeing it ನಿನ್ನ ಕೃತಿಯನ್ನು ನೋಡದೆ ಅದರ ಬಗ್ಗೆ ನನ್ನ ಅಭಿಪ್ರಾಯವನ್ನು ಕೊಡಲಾರೆ.
  18. (ಪರೀಕ್ಷೆಯನ್ನು) ಪಾಸುಮಾಡು; (ಅದರಲ್ಲಿ) ಯಶಸ್ವಿಯಾಗು: passed the degree examination ಪದವಿ ಪರೀಕ್ಷೆಯನ್ನು ಪಾಸುಮಾಡಿದ.
  19. (ಪರೀಕ್ಷಕನ ವಿಷಯದಲ್ಲಿ) (ಅಭ್ಯರ್ಥಿಯನ್ನು) ಪಾಸುಮಾಡಿಸು; (ಅವನು ಮಾಡಿರುವುದು) ತೃಪ್ತಿಕರವಾಗಿದೆ, ಸರಿಯಾಗಿದೆ ಎಂದು ತೀರ್ಮಾನಿಸು.
ಅಕರ್ಮಕ ಕ್ರಿಯಾಪದ
  1. ಮುಂದಕ್ಕೆ ಹೋಗು, ನಡೆ; ಹಾಯಿ; ದಾಟು; ಸಾಗು; ಮುಂದುವರಿ; ಹಾದುಹೋಗು: please let me pass ದಯವಿಟ್ಟು ನನಗೆ ಮುಂದಕ್ಕೆ ಹೋಗುವುದಕ್ಕೆ ಹಾದಿಬಿಡು, ಅವಕಾಶ ಮಾಡಿಕೊಡು.
  2. ಚಲಾವಣೆಯಾಗು; ಚಲಾವಣೆಯಲ್ಲಿರು; ಸಲ್ಲು; ಸಲುವಳಿಯಾಗು; ಚಾಲ್ತಿಯಲ್ಲಿರು: bank notes pass so long as nobody refuses them ಎಲ್ಲಿಯವರೆಗೆ ಬ್ಯಾಂಕು ನೋಟುಗಳನ್ನು ಯಾರೂ ತಿರಸ್ಕರಿಸುವುದಿಲ್ಲವೋ ಅಲ್ಲಿಯವರೆಗೆ ಅವು ಚಲಾವಣೆಯಾಗುತ್ತವೆ.
  3. ಎಡೆಯಿಂದೆಡೆಗೆ ಸಾಗು: from the college he passed to the novitiate ಅವನು ಕಾಲೇಜಿನಿಂದ ನವಶಿಷ್ಯಾಲಯಕ್ಕೆ ಸಾಗಿದನು.
  4. (ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ) ಬದಲಾಯಿಸು; ಬದಲಾಗು; ಮಾರ್ಪಡು: when water boils it passes into steam ನೀರು ಕುದಿಯುವಾಗ ಅದು ಆವಿಯಾಗಿ ಬದಲಾಯಿಸುತ್ತದೆ.
  5. ಸಾಯಿ; ತೀರಿಕೊ; ಗತಿಸು; ಮೃತಿಹೊಂದು: passed from among us ನಮ್ಮನ್ನು ಬಿಟ್ಟು ತೀರಿಹೋದ, ಕಾಲವಾದ.
  6. ಸಾಗು; ಹೋಗು: time passes rapidly ಕಾಲ ಶೀಘ್ರವಾಗಿ ಸಾಗುತ್ತದೆ.
  7. ಕೊನೆಗಾಣು; ಗತಿಸಿಹೋಗು: kingdoms and nations pass ರಾಜ್ಯಗಳೂ ರಾಷ್ಟ್ರಗಳೂ ಗತಿಸಿಹೋಗುತ್ತವೆ.
  8. ದಾರಿಮಾಡಿಕೊಂಡು ಹೋಗು; ಪ್ರವೇಶಿಸು; ತಟಾಯಿಸಿಕೊಂಡು ಹೋಗು: permitted no one to pass ಯಾರನ್ನೂ ಒಳಗೆ ಪ್ರವೇಶಿಸಲು ಬಿಡಲಿಲ್ಲ.
  9. ಆಕ್ಷೇಪಣೆಗೊಳಗಾಗದೆ ಹೋಗು: such conduct may pass in certain circles but cannot be tolerated ಅಂಥ ವರ್ತನೆ ಕೆಲವು ವಲಯಗಳಲ್ಲಿ ಆಕ್ಷೇಪಣೆಗೊಳಗಾಗದೆ ಹೋಗಬಹುದು, ಆದರೆ ಅದನ್ನು ಸಹಿಸಲಾಗುವುದಿಲ್ಲ.
  10. (ಶಾಸನಸಭೆಯಲ್ಲಿ ಮಸೂದೆ, ಸಲಹೆ ಮೊದಲಾದವು) ಅಂಗೀಕೃತವಾಗು; ಮಂಜೂರಾಗು; ಅನುಮೋದನೆ ಪಡೆ: the bill passed without alteration ಮಸೂದೆಯು ಯಾವ ಬದಲಾವಣೆಯಿಲ್ಲದೆ ಅಂಗೀಕೃತವಾಯಿತು.
  11. (ಅಭ್ಯರ್ಥಿ) ತೇರ್ಗಡೆಯಾಗು; ಪಾಸಾಗು; ಉತ್ತೀರ್ಣನಾಗು: of the twenty who took the exam, only twelve passed ಪರೀಕ್ಷೆಯನ್ನು ತೆಗೆದುಕೊಂಡ ಇಪ್ಪತ್ತರಲ್ಲಿ ಕೇವಲ ಹನ್ನೆರಡು ಮಂದಿ ತೇರ್ಗಡೆಯಾದರು.
  12. ಆಗು; ನಡೆ; ಸಂಭವಿಸು; ಹೇಳಲ್ಪಡು; ಮಾಡಲ್ಪಡು: I heard what was passing ಏನು ನಡೆಯುತ್ತಿದ್ದಿತೆಂಬುದನ್ನು ನಾನು ಕೇಳಿದೆ.
  13. ತೀರ್ಪುಕೊಡು; ನಿರ್ಣಯಕೊಡು: the judge did not pass on the constitutional question ನ್ಯಾಯಾಧೀಶನು ಸಂವಿಧಾನಾತ್ಮಕ ಪ್ರಶ್ನೆಯ ಮೇಲೆ ತೀರ್ಪುಕೊಡಲಿಲ್ಲ.
  14. (ತೀರ್ಪಿನ ವಿಷಯದಲ್ಲಿ) (ಫಿರ್ಯಾದಿ ಮೊದಲಾದವರ ಪರವಾಗಿ) ತೀರ್ಪಾಗು.
  15. (ಇಸ್ಪೀಟಾಟ)
    1. (ಆಟ ಹೇಳುವ) ಅವಕಾಶ ಬಿಟ್ಟುಕೊಡು; ಆಟ ಹೇಳದೆಹೋಗು.
    2. ಎಲೆ ಕೆಳಗಿಡು; ಆಟದಿಂದ ನಿವೃತ್ತನಾಗು.
  16. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬನಿಗೆ, ಒಂದು ಸ್ಥಳದಿಂದ ಇನ್ನೊಂದಕ್ಕೆ ವರ್ಗಾಯಿಸಲ್ಪಡು.
  17. ಪಾಸಾಗು; ಯಥಾಯೋಗ್ಯವೆಂದು, ಸಮರ್ಪಕವೆಂದು ಒಪ್ಪಿತವಾಗು.
  18. (ಅಮೆರಿಕನ್‍ ಪ್ರಯೋಗ) (ಕರಿಯನ ಪೂರ್ವಜತ್ವವಿರುವ ವ್ಯಕ್ತಿಯ ವಿಷಯದಲ್ಲಿ) ಬಿಳಿಯನೆಂದು ಸಮ್ಮತವಾಗು, ಒಪ್ಪಿಗೆಪಡೆ.
  19. (ಆಟದಲ್ಲಿ ತನ್ನ ಅವಕಾಶವನ್ನು) ಬಿಟ್ಟುಕೊಡು.
  20. ಕೊನೆಗೊಳ್ಳು; ಮುಗಿ; ಮುಕ್ತಾಯವಾಗು.
ಪದಗುಚ್ಛ
  1. has passed the chair (ಹಿಂದೆ) ಅಧ್ಯಕ್ಷ, ಮೇಯರ್‍, ಮೊದಲಾದ ಆಗಿದ್ದಾನೆ.
  2. pass a dividend ಲಾಭಾಂಶವನ್ನು ಕೊಡದಿರು, ಪ್ರಕಟಿಸದೆ ಹೋಗು, ಘೋಷಿಸದಿರು.
  3. pass away
    1. ಸಾಯು; ಗತಿಸು; ಕಾಲವಾಗು: he passed away during the night ಅವನು ರಾತ್ರಿಯಲ್ಲಿ ಸತ್ತನು.
    2. ಕೊನೆಗಾಣು; ಅಂತ್ಯಗೊಳ್ಳು: all this trouble will pass away ಈ ತೊಂದರೆಯೆಲ್ಲಾ ಕೊನೆಗಾಣುತ್ತದೆ.
  4. pass by
    1. ಕೈಬಿಡು; ಬಿಟ್ಟುಬಿಡು; ಗಮನಿಸದಿರು; ನಿರ್ಲಕ್ಷಿಸು; ಉಪೇಕ್ಷಿಸು: I cannot pass the matter by without making a protest ನಾನು ಪ್ರತಿಭಟನೆ ಸೂಚಿಸದೆ ವಿಷಯವನ್ನು ಕೈಬಿಡಲಾರೆ.
    2. ನೋಡದೆ ಯಾ ನಿಲ್ಲದೆ – ದಾಟಿಹೋಗು.
  5. pass by the name of... ಎಂಬ ಹೆಸರಿನಿಂದ – ರೂಢಿಯಾಗು, ಬಳಕೆಗೆ ಬರು, ಗೊತ್ತಾಗು, ಪರಿಚಿತವಾಗಿರು: the modification of civilization which passes by the name of ‘evolution of society’ ‘ಸಮಾಜದ ವಿಕಾಸ’ ವೆಂಬ ಹೆಸರಿನಿಂದ ರೂಢಿಗೆ ಬಂದಿರುವ ನಾಗರಿಕತೆಯ ಮಾರ್ಪಾಟು.
  6. pass in one’s $^2$checks.
  7. pass $^1$muster.
  8. pass off
    1. (ವೇದನೆ ಮೊದಲಾದವು) ಇಳಿದುಹೋಗು; ಕುಂದು; ಕುಂದಿಹೋಗು.
    2. (ಕಾರ್ಯಕಲಾಪಗಳು) (ತೊಡಕಿಲ್ಲದೆ, ಅಡಚಣೆಯಿಲ್ಲದೆ) ನಡೆದುಹೋಗು; ಜರುಗು: the meeting passed off without any incident ಸಭೆ ಯಾವುದೇ ಘಟನೆಯಿಲ್ಲದೆ ನಡೆಯಿತು.
    3. (ಒಂದು ವಸ್ತುವನ್ನು ಅದರಲ್ಲಿರದ ಗುಣಗಳು ಇವೆಯೆಂದು ಹೇಳಿ) ವ್ಯಕ್ತಿಯ ತಲೆಗೆ ಕಟ್ಟು: passed off a spurious Ravivarma on some one ರವಿವರ್ಮನದೆಂದು ಒಂದು ಖೋಟಾಚಿತ್ರವನ್ನು ಯಾವನ ತಲೆಗೋ ಕಟ್ಟಿದ.
    4. (ಎಡವಟ್ಟು ಸಂದರ್ಭದಿಂದ ಯಾ ಹಿಂದಿನ ಪ್ರಸ್ತಾಪದಿಂದ) ಬೇರೆಯ ಕಡೆಗೆ ಗಮನ ಸೆಳೆ, ತಿರುಗಿಸು; (ಸಂದರ್ಭ ಯಾ ಪ್ರಸ್ತಾಪ) ಗಮನಕ್ಕೆ ಬಾರದಂತೆ ತಪ್ಪಿಸು: pass off an awkward situation ಪೇಚಿನ ಸಂದರ್ಭವನ್ನು ಬೇರೆಡೆಗೆ ತಿರುಗಿಸು.
  9. pass on
    1. ತನ್ನ ದಾರಿಯಲ್ಲಿ ಮುಂದುವರಿ, ಹೋಗು.
    2. (ಸೌಮ್ಯೋಕ್ತಿ) ಸಾಯು; ಮೃತನಾಗು.
    3. ಶ್ರೇಣಿಯಲ್ಲಿರುವ ಮುಂದಿನ ವ್ಯಕ್ತಿಗೆ ಸಾಗಿಸು.
  10. pass one’s eye on (or over) (ದಾಖಲೆ ಮೊದಲಾದವುಗಳ ಮೇಲೆ) ಕಣ್ಣಾಡಿಸು; ಕಣ್ಣುಹಾಯಿಸು; ಸ್ಥೂಲವಾಗಿ ಓದು.
  11. pass out
    1. ಪ್ರಜ್ಞೆ ಕಳೆದುಕೊ ಮೂರ್ಛೆಹೋಗು.
    2. (ಬ್ರಿಟಿಷ್‍ ಪ್ರಯೋಗ) (ಸೈನ್ಯ) ‘ಕೆಡೆಟ್‍’ನ ತರಪೇತಿ ತಂಡದ ಸದಸ್ಯನ ತರಪೇತಿಯನ್ನು ಮುಗಿಸು.
    3. (ಆಡುಮಾತು) ಸಾಯಿ; ಪ್ರಾಣಬಿಡು; ತೀರಿಹೋಗು: the accident victim passed out in the ambulance on the way to the hospital ಅಪಘಾತಕ್ಕೆ ಗುರಿಯಾದವನು ಆಸ್ಪತ್ರೆಗೆ ಹೋಗುವಾಗ ದಾರಿಯಲ್ಲಿಯೇ ಆಂಬುಲೆನ್ಸ್‍ ಗಾಡಿಯಲ್ಲಿ ಸತ್ತನು.
  12. pass over
    1. (ಸಾಮಾನ್ಯವಾಗಿ) ಸಾಯು.
    2. ಬಿಟ್ಟು ಬಿಡು; ಉಪೇಕ್ಷಿಸು; ಅಲಕ್ಷಿಸು.
    3. (ಬಡ್ಡಿಗೆ ವ್ಯಕ್ತಿಯ ಹಕ್ಕು ಮೊದಲಾದವುಗಳನ್ನು) ಗಮನಿಸದಿರು; ಉಪೇಕ್ಷಿಸು.
    4. ಟೀಕೆ ಮಾಡದೆ ಬಿಡು: passed it over in silence ಮೌನವಾಗಿ ಅದನ್ನು ಟೀಕೆ ಮಾಡದೆ ಬಿಟ್ಟನು.
  13. pass round
    1. ವಿತರಿಸು; ಹಂಚು.
    2. ಒಬ್ಬರಾದ ಮೇಲೆ ಒಬ್ಬರಿಗೆ ಕೊಡು ಯಾ ಕಳುಹಿಸು.
  14. pass the time of the day (ಆಡುಮಾತು) (ಎದುರುಗೊಂಡಾಗ) ಕುಶಲಪ್ರಶ್ನೆ ಮಾಡು; ಅಭಿವಂದಿಸು; ನಮಸ್ಕರಿಸು.
  15. pass through ಅನುಭವಿಸು.
  16. pass up
    1. (–ಒಡನೆ) ಇನ್ನು ಮುಂದೆ ವ್ಯವಹಾರ ಮಾಡಲು ನಿರಾಕರಿಸು.
    2. ಬಿಟ್ಟುಬಿಡು; ತ್ಯಜಿಸು: the opportunity may not come again, so you had better not pass it up ಈ ಅವಕಾಶ ಮತ್ತೊಮ್ಮೆ ಬರದಿರಬಹುದು, ಆದ್ದರಿಂದ ನೀನು ಅದನ್ನು ಬಿಡುವುದು ಒಳ್ಳೆಯದಲ್ಲ.
  17. pass water ಉಚ್ಚೆ ಹೊಯ್ಯಿ; ಮೂತ್ರವಿಸರ್ಜನೆ ಮಾಡು.
See also 1pass  3pass
2pass ಪಾಸ್‍
ನಾಮವಾಚಕ
  1. (ಮುಖ್ಯವಾಗಿ ಪರೀಕ್ಷೆಯಲ್ಲಿ) ತೇರ್ಗಡೆ (ಹೊಂದುವುದು); ಪಾಸು; ಪಾಸಾಗುವುದು.
  2. (ವಿಶ್ವವಿದ್ಯಾನಿಲಯ) ಸಾಮಾನ್ಯ ತೇರ್ಗಡೆ; ವಿಶೇಷ ಮನ್ನಣೆಗೆ ಪಾತ್ರವಾಗದ, ಆದರೆ ಪರೀಕ್ಷಕರು ತೃಪ್ತಿಕರವೆಂದು ಪರಿಗಣಿಸುವ ಮಟ್ಟವನ್ನು ಮುಟ್ಟುವ ತೇರ್ಗಡೆ.
  3. ಇಕ್ಕಟ್ಟು; ಬಿಕ್ಕಟ್ಟು; ವಿಷಮ ಸ್ಥಿತಿ: things have come to a (strange) pass ಪರಿಸ್ಥಿತಿ ಒಂದು (ವಿಚಿತ್ರ) ಬಿಕ್ಕಟ್ಟಿಗೆ ಬಂದಿದೆ.
  4. (ಸ್ಥಳದ ಒಳಕ್ಕೆ ಯಾ ಹೊರಕ್ಕೆ ಹೋಗುವುದಕ್ಕೆ ವಸತಿಯಿಂದ, ಸ್ಥಳದಿಂದ ಗೈರುಹಾಜರಾಗಲು ಕೊಟ್ಟ) ಪಾಸು; ಅಪ್ಪಣೆ ಚೀಟಿ? ಅನುಜ್ಞಾಪತ್ರ; ಪರವಾನೆ; ರಹದಾರಿ: on pass ಪರವಾನೆ ಬಿಲ್ಲೆ, ಬಟ್ಟು ಪಡೆದು ಗೈರುಹಾಜರಿರುವ.
  5. (ನಾಟಕ, ಸಿನಿಮ, ಮೊದಲಾದ ಮನರಂಜನೆಯ ಸ್ಥಳಗಳಲ್ಲಿ ಪ್ರೇಕ್ಷಕರು ಸ್ವಲ್ಪ ಹೊತ್ತು ಹೊರಗೆ ಹೋಗಿ ಬರಲು ಕೊಡುವ) ಪಾಸು; ಬಿಲ್ಲೆ; ಬಟ್ಟು, ಚೀಟಿ, ಮೊದಲಾದವು.
  6. ಪಾಸು; ಉಚಿತ ಪ್ರಯಾಣ ಚೀಟಿ; ಬಿಟ್ಟಿ ಚೀಟಿ; (ರೈಲ್ವೆ ಮೊದಲಾದವುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅಧಿಕಾರ ಕೊಡುವ) ಬಿಡುತಿ ಚೀಟಿ: free pass ಬಿಟ್ಟಿ ಪಾಸು.
  7. (ಕತ್ತಿವರಸೆಯಲ್ಲಿ) ಇರಿತ; ತಿವಿತ.
  8. ಕಣ್ಕಟ್ಟಿನ ಚಮತ್ಕಾರ; (ಯಕ್ಷಿಣಿಯಲ್ಲಿ) ಕೈಚಳಕ.
  9. (ಮುಖ್ಯವಾಗಿ ಸಮ್ಮೋಹನ ವಿದ್ಯೆಯಲ್ಲಿ) (–ಮೇಲೆ) ಕೈ – ಹಾಯಿಸುವುದು, ಆಡಿಸುವುದು.
  10. (ಕಾಲ್ಚೆಂಡು ಮೊದಲಾದ ಆಟಗಳಲ್ಲಿ) ‘ಪಾಸು’; ಚೆಂಡಿನ ವರ್ಗಾವಣೆ; ತನ್ನ ಕಡೆಯ ಆಟಗಾರನಿಗೆ ಚೆಂಡನ್ನು ಸಾಗಿಸುವುದು, ಕಳಿಸುವುದು.
ಪದಗುಚ್ಛ
  1. bring to pass ಆಗಮಾಡು; ನೆರವೇರಿಸು; ಸಾಧಿಸು; ನಿರ್ವಹಿಸು: they are not miracles, but brought to pass by education ಅವು ಪವಾಡಗಳಲ್ಲ, ಆದರೆ ಶಿಕ್ಷಣದಿಂದ ಸಾಧಿಸುವವು.
  2. come to pass ಆಗು; ನಡೆ; ಸಂಭವಿಸು.
  3. make a pass at (ಆಡುಮಾತು) ಪ್ರಣಯಾಸಕ್ತಿಯಿಂದ ಸಮೀಪಿಸು; ಪ್ರಣಯ ಸೂಚನೆ ಕೊಡು, ತೋರಿಸು.
See also 1pass  2pass
3pass ಪಾಸ್‍
ನಾಮವಾಚಕ
  1. ಕಣಿವೆ; ಘಾಟಿ; ಘಟ್ಟ; ಬೆಟ್ಟಗಳ ಮಧ್ಯದ ಇಕ್ಕಟ್ಟುದಾರಿ.
  2. (ಮುಖ್ಯವಾಗಿ ನದೀಮುಖದಲ್ಲಿರುವ) ನೌಕಾ(ಸಂಚಾರ) ಯೋಗ್ಯವಾದ ಕಾಲುವೆ.
ಪದಗುಚ್ಛ

sell the pass (ರೂಪಕವಾಗಿ) ಉನ್ನತವಾದ ಆದರ್ಶಕ್ಕೆ ದ್ರೋಹಮಾಡು.