1overtime ಓವರ್‍ಟೈಮ್‍
ನಾಮವಾಚಕ
  1. (ನಿಗದಿಯಾದ ಕಾಲಾವಧಿಗೆ ಮೀರಿ ಕೆಲಸ ಮಾಡಿದ) ಹೆಚ್ಚಿಗೆಯ ಕಾಲ; ಅಧಿಕಾವಧಿ; ಅಧಿಕ ಕಾರ್ಯಾವಧಿ.
  2. ಅಧಿಕಾವಧಿಯ, ಹೆಚ್ಚು ಕಾಲಾವಧಿಯ–ವೇತನ.
  3. (ನಿಗದಿಯಾದ ಅವಧಿಗಿಂತ) ಹೆಚ್ಚಿನ ಕಾಲ; ಅಧಿಕಾವಧಿ.
  4. (ಕ್ರೀಡೆ) (ಆಟದ ನಿಯತ ಕಾಲಾವಧಿಯಲ್ಲಿ ಉಭಯದಳಗಳೂ ಸರಿಸಮವಾದಾಗ, ಸೋಲು ಗೆಲವು ತೀರ್ಮಾನಿಸುವ ಸಲುವಾಗಿ ಕೊಡುವ) ಅಧಿಕ ಕಾಲಾವಧಿ.
2overtime ಓವರ್‍ಟೈಮ್‍
ಕ್ರಿಯಾವಿಶೇಷಣ

ವೇಳೆಮೀರಿ; ಅಧಿಕಾವಧಿಯಲ್ಲಿ; ಅಧಿಕ ಕಾರ್ಯಾವಧಿಯಲ್ಲಿ; ನಿಗದಿಯಾದ ಕಾಲಾವಧಿ ಮೀರಿ, ಮುಂಚೆ ಯಾ ಅನಂತರದ, ಹೆಚ್ಚಿಗೆಯ ಕಾಲದಲ್ಲಿ: work overtime (ನಿಯತಕಾಲಕ್ಕೆ ಮೀರಿ) ಹೆಚ್ಚಿಗೆಯ ಕಾಲ ಕೆಲಸ ಮಾಡು.

3overtime ಓವರ್‍ಟೈಮ್‍
ಗುಣವಾಚಕ

ಅಧಿಕಾವಧಿಯ; ಅಧಿಕ ಕಾರ್ಯಾವಧಿಯ ಕೆಲಸದ: overtime allowance ಅಧಿಕಾವಧಿಯ (ಕೆಲಸದ) ಭತ್ಯ.

4overtime ಓವರ್‍ಟೈಮ್‍
ಸಕರ್ಮಕ ಕ್ರಿಯಾಪದ

(ಛಾಯಾಚಿತ್ರಣ) (ಕ್ಯಾಮರಾದ ಲೆನ್ಸನ್ನು ತಕ್ಕಷ್ಟು ಕಾಲಕ್ಕಿಂತ) ಹೆಚ್ಚುಕಾಲ ತೆರವು ಮಾಡು, ಬೆಳಕಿಗೆ ಒಡ್ಡು.