See also 2overflow
1overflow ಓವರ್‍ಹ್ಲೋ
ಅಕರ್ಮಕ ಕ್ರಿಯಾಪದ
  1. (ಪಾತ್ರೆ ಮೊದಲಾದವು) ತುಂಬಿ ತುಳುಕು.
  2. (ತುಂಬಿದ ಪ್ರದೇಶದಿಂದ ಜನಸಮುದಾಯ ವಿರಳ ಪ್ರದೇಶಕ್ಕೆ) ಸ್ಥಳಾಂತರಗೊಳ್ಳು; ವಲಸೆ ಹೋಗು; ಹರಿ: the crowded population overflowed into the adjoining territory ಕಿಕ್ಕಿರಿದ ಆ ಜನ ಸಮುದಾಯ ಪಕ್ಕದ ಪ್ರದೇಶಕ್ಕೆ ಉಕ್ಕಿ ಸರಿಯಿತು.
  3. ತುಂಬಿ ಹರಿ; ಉಕ್ಕಿ ಹರಿ; ನದಿ ಮೊದಲಾದವು ನೆರೆಯಿಂದ ತುಂಬಿ ದಡದ ಮೇಲೆ ಹರಿ.
  4. (ರೂಪಕವಾಗಿ) (ಕೃತಜ್ಞತೆ ಮೊದಲಾದವುಗಳಿಂದ) ತುಂಬಿರು; ತುಂಬಿ ತುಳುಕು: my heart overflows with gratitude ನನ್ನ ಹೃದಯ ಕೃತಜ್ಞತೆಯಿಂದ ತುಂಬಿ ತುಳುಕುತ್ತಿದೆ.
  5. (ಕರುಣೆ, ಫಸಲು, ಮೊದಲಾದವುಗಳ ವಿಷಯದಲ್ಲಿ) ವಿಪುಲವಾಗಿರು; ದಂಡಿಯಾಗಿರು; ಸಮೃದ್ಧವಾಗಿರು.
ಸಕರ್ಮಕ ಕ್ರಿಯಾಪದ

(ಅಂಚು, ಪಾತ್ರ, ಮೊದಲಾದವನ್ನು) ತುಂಬಿ ಹೊರಕ್ಕೆ ಹರಿ; ಉಕ್ಕಿ ಹರಿ.

See also 1overflow
2overflow ಓವರ್‍ಹೊ
ನಾಮವಾಚಕ
  1. ತುಂಬಿ ಹರಿಯುವಿಕೆ.
  2. ತುಂಬಿ ಹರಿಯುವ ನೀರು ಮೊದಲಾದವು: to carry off the overflow ತುಂಬಿ ಹರಿಯುವ ನೀರನ್ನು, ದ್ರವವನ್ನು ಹೊರ ಸಾಗಿಸಲು.
  3. ಅತಿ ಸಮೃದ್ಧಿ; ಅತ್ಯಾಧಿಕ್ಯ; ಅತಿ ಹೆಚ್ಚಳ: an overflow of applicants for the job ಆ ಹುದ್ದೆಗಾಗಿ ಅರ್ಜಿದಾರರ ಅತಿ ಹೆಚ್ಚಳ, ಪ್ರವಾಹ.
  4. ಹೊರ (ಹರಿವಿಗೆ) ಕಂಡಿ, ದ್ವಾರ: the tank is equipped with an overflow ತೊಟ್ಟಿಗೆ ಉಕ್ಕುನೀರಿನ ಕಂಡಿಯೊಂದನ್ನು ಒದಗಿಸಿದೆ.
ಪದಗುಚ್ಛ

overflow meeting ಹೊರಸಭೆ; ಮುಖ್ಯ ಸಭೆಯಲ್ಲಿ ಕೂರಲು ಜಾಗವಿಲ್ಲದವರಿಗಾಗಿ ಮಾಡುವ ಸಭೆ.