See also 2output
1output ಔಟ್‍ಪುಟ್‍
ನಾಮವಾಚಕ
  1. ಉತ್ಪಾದನೆ; ತಯಾರಿಕೆ: the output begins as soon as the new machine is installed ಹೊಸಯಂತ್ರವನ್ನು ಸ್ಥಾಪಿಸಿದೊಡನೆಯೇ ಉತ್ಪಾದನೆ ಆರಂಭವಾಗುತ್ತದೆ.
  2. ಉತ್ಪನ್ನ; ಉತ್ಪಾದಿಸಿದ್ದು:
    1. (ಕೈಗಾರಿಕೆಯ ವಿಷಯದಲ್ಲಿ) ತಯಾರಿಸಿದ್ದು.
    2. (ಕೃಷಿಯ ವಿಷಯದಲ್ಲಿ) ಹುಟ್ಟುವಳಿ; ಬೆಳೆ; ಫಸಲು.
    3. (ಗಣಿಯ ವಿಷಯದಲ್ಲಿ) ಅಗೆದು ತೆಗೆದದ್ದು.
    4. (ಮಾನಸಿಕ ಕ್ರಿಯೆಯ ಯಾ ಕಲಾಕ್ರಿಯೆಯ ವಿಷಯದಲ್ಲಿ) ಕೃತಿ; ಸೃಷ್ಟಿ.
    5. (ವಿದ್ಯುದ್ವಿಜ್ಞಾನ) ವಿದ್ಯುಜ್ಜನಕ ಯಾ ಬ್ಯಾಟರಿಯು ಉತ್ಪಾದಿಸುವ ವಿದ್ಯುತ್ತು.
    6. ಕಂಪ್ಯೂಟರು ಒದಗಿಸಿದ ಪ್ರಿಂಟೌಟ್‍ (ಮುದ್ರಿತ ಪ್ರತಿ), ಫಲಿತಾಂಶಗಳು, ಮೊದಲಾದವು.
    7. ಒಂದು ವ್ಯವಸ್ಥೆಯಿಂದ ಹೊರಬರುವ ಶಕ್ತಿ, ಮಾಹಿತಿ, ಮೊದಲಾದವು.
    8. ಉತ್ಪನ್ನದ ಪ್ರಮಾಣ, ಮೊತ್ತ.
See also 1output
2output ಔಟ್‍ಪುಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ outputting, ಭೂತರೂಪ ಮತ್ತು ಭೂತಕೃದಂತ ಅದೇ ಯಾ
  1. ಉತ್ಪಾದಿಸು; ಕೊಡು.
  2. (ಗಣಕ ಯಂತ್ರದ ವಿಷಯದಲ್ಲಿ) (ಮಾಹಿತಿ, ಫಲಿತಾಂಶ, ಮೊದಲಾದವನ್ನು) ಒದಗಿಸು; ನೀಡು; ಕೊಡು.