1output
ಔಟ್‍ಪುಟ್
ನಾಮವಾಚಕ
- ಉತ್ಪಾದನೆ; ತಯಾರಿಕೆ: the output begins as soon as the new machine is installed ಹೊಸಯಂತ್ರವನ್ನು ಸ್ಥಾಪಿಸಿದೊಡನೆಯೇ ಉತ್ಪಾದನೆ ಆರಂಭವಾಗುತ್ತದೆ.
- ಉತ್ಪನ್ನ; ಉತ್ಪಾದಿಸಿದ್ದು:
- (ಕೈಗಾರಿಕೆಯ ವಿಷಯದಲ್ಲಿ) ತಯಾರಿಸಿದ್ದು.
- (ಕೃಷಿಯ ವಿಷಯದಲ್ಲಿ) ಹುಟ್ಟುವಳಿ; ಬೆಳೆ; ಫಸಲು.
- (ಗಣಿಯ ವಿಷಯದಲ್ಲಿ) ಅಗೆದು ತೆಗೆದದ್ದು.
- (ಮಾನಸಿಕ ಕ್ರಿಯೆಯ ಯಾ ಕಲಾಕ್ರಿಯೆಯ ವಿಷಯದಲ್ಲಿ) ಕೃತಿ; ಸೃಷ್ಟಿ.
- (ವಿದ್ಯುದ್ವಿಜ್ಞಾನ) ವಿದ್ಯುಜ್ಜನಕ ಯಾ ಬ್ಯಾಟರಿಯು ಉತ್ಪಾದಿಸುವ ವಿದ್ಯುತ್ತು.
- ಕಂಪ್ಯೂಟರು ಒದಗಿಸಿದ ಪ್ರಿಂಟೌಟ್ (ಮುದ್ರಿತ ಪ್ರತಿ), ಫಲಿತಾಂಶಗಳು, ಮೊದಲಾದವು.
- ಒಂದು ವ್ಯವಸ್ಥೆಯಿಂದ ಹೊರಬರುವ ಶಕ್ತಿ, ಮಾಹಿತಿ, ಮೊದಲಾದವು.
- ಉತ್ಪನ್ನದ ಪ್ರಮಾಣ, ಮೊತ್ತ.