See also 2outlaw
1outlaw ಔಟ್‍ಲಾ
ನಾಮವಾಚಕ
  1. (ಚರಿತ್ರೆ) ಕಾನೂನಿನ ರಕ್ಷಣೆಯಿಂದ ಹೊರದೂಡಲ್ಪಟ್ಟವನು; ಶಾಸನ ಬಹಿಷ್ಕೃತ, ಭ್ರಷ್ಟ.
  2. ಗಡಿಪಾರಾದವನು; ದೇಶಭ್ರಷ್ಟ.
  3. ದುಷ್ಕರ್ಮಿ; ಕಾನೂನನ್ನು ಲೆಕ್ಕಿಸದ ಪುಂಡ, ಹಿಂಸಾಚಾರಿ.
ಪದಗುಚ್ಛ

outlaw strike ಅನಧಿಕೃತ ಸಂಪು, ಮುಷ್ಕರ.

See also 1outlaw
2outlaw ಔಟ್‍ಲಾ
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು)
    1. ಕಾನೂನುಬಾಹಿರಗೊಳಿಸು; ಶಾಸನಭ್ರಷ್ಟಗೊಳಿಸು: outlaw the rebels ಬಂಡಾಯಗಾರರನ್ನು ಶಾಸನಭ್ರಷ್ಟಗೊಳಿಸು ಯಾ ಕಾನೂನುಬಾಹಿರಗೊಳಿಸು.
    2. ಗಡೀಪಾರುಮಾಡು; ದೇಶಭ್ರಷ್ಟಗೊಳಿಸು.
  2. (ಯಾವುದನ್ನೇ) ಕಾನೂನುವಿರುದ್ಧವೆಂದು ಸಾರು, ಘೋಷಿಸು; ಕಾನೂನುಬಾಹಿರಗೊಳಿಸು; ಶಾಸನಬಾಹಿರ ಮಾಡು: the $18$th Amendment outlawed the manufacture and sale of liquor in the U.S.A 18ನೆಯ ತಿದ್ದುಪಡಿ ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಮದ್ಯದ ತಯಾರಿಕೆ, ಮಾರಾಟಗಳನ್ನು ಶಾಸನಬಾಹಿರಗೊಳಿಸಿತು.
  3. ನಿಷೇಧಿಸು; ತಡೆಹಾಕು: outlaw smoking in a theatre ನಾಟಕ ಯಾ ಸಿನಿಮಾ ಮಂದಿರದಲ್ಲಿ ತಂಬಾಕು ಸೇದುವುದನ್ನು ನಿಷೇಧಿಸು.