See also 2outgoing
1outgoing ಔಟ್‍ಗೋಇಂಗ್‍
ಗುಣವಾಚಕ
  1. (ಇದ್ದಲ್ಲಿಂದ) ಹೊರಕ್ಕೆ ಹೋಗುವ; ನಿರ್ಗಮಿಸುವ; ಬಹಿರ್ಗಾಮಿ: outgoing trains ನಿರ್ಗಮಿಸುವ ರೈಲುಗಳು.
  2. (ಇರುವ ಪದವಿಯನ್ನು, ಹುದ್ದೆಯನ್ನು) ಬಿಟ್ಟುಹೋಗುವ ಯಾ ನಿವೃತ್ತವಾಗುವ: the outgoing director ಅಧಿಕಾರವನ್ನು ಬಿಟ್ಟುಹೋಗುತ್ತಿರುವ, ನಿವೃತ್ತನಾಗುತ್ತಿರುವ ನಿರ್ದೇಶಕ.
  3. ಸ್ನೇಹಪರ; ವಿಶ್ವಾಸಪರ; ಸಹವಾಸಪ್ರಿಯ; ಸಂಗಾಸಕ್ತ: an outgoing personality ಸ್ನೇಹಪರ ವ್ಯಕ್ತಿ.
See also 1outgoing
2outgoing ಔಟ್‍ಗೋಇಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಖರ್ಚುಗಳು; ವ್ಯಯಗಳು; ವೆಚ್ಚಗಳು; ಕೈಬಿಟ್ಟು ಹೋಗುವ ಹಣ.
  2. ಹೊರಕ್ಕೆ ಹೋಗುವುದು; ನಿರ್ಗಮನ: the ship’s outgoing ಹಡಗಿನ ನಿರ್ಗಮನ.
  3. ಬಹಿಃಸ್ರಾವ; ಹೊರಸೋರಿಕೆ; ನಿಃಸ್ರವಣ; ಸೋರಿ ಹೊರಕ್ಕೆ ಹರಿಯುವುದು: an outgoing measured in kilowatt hours ಕಿಲೋವಾಟ್‍ ಗಂಟೆಗಳಲ್ಲಿ ಅಳೆದ ನಿಃಸ್ರವಣ.