See also 1outgoing
2outgoing ಔಟ್‍ಗೋಇಂಗ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಖರ್ಚುಗಳು; ವ್ಯಯಗಳು; ವೆಚ್ಚಗಳು; ಕೈಬಿಟ್ಟು ಹೋಗುವ ಹಣ.
  2. ಹೊರಕ್ಕೆ ಹೋಗುವುದು; ನಿರ್ಗಮನ: the ship’s outgoing ಹಡಗಿನ ನಿರ್ಗಮನ.
  3. ಬಹಿಃಸ್ರಾವ; ಹೊರಸೋರಿಕೆ; ನಿಃಸ್ರವಣ; ಸೋರಿ ಹೊರಕ್ಕೆ ಹರಿಯುವುದು: an outgoing measured in kilowatt hours ಕಿಲೋವಾಟ್‍ ಗಂಟೆಗಳಲ್ಲಿ ಅಳೆದ ನಿಃಸ್ರವಣ.